ಜನಪ್ರಿಯ ಕನ್ನಡ ಗಾದೆಗಳು

kannada gadegalu image text

ಗಾದೆಗಳ ಪರಿಚಯ

ಕನ್ನಡ ಗಾದೆಗಳು ನಮ್ಮ ಸಂಸ್ಕೃತಿ, ಜೀವನಶೈಲಿ ಮತ್ತು ಅನುಭವಗಳ ಪ್ರತಿಬಿಂಬವಾಗಿವೆ. ಪೀಳಿಗೆಯಿಂದ ಪೀಳಿಗೆಗೆ ಆಡು ಭಾಷೆಯ ಮೂಲಕ ಹರಡಿಕೊಂಡು ಬಂದ ಈ ಗಾದೆಗಳು ಜೀವನದ ನಿಜವಾದ ಪಾಠಗಳನ್ನು ಸರಳವಾದ ಆದರೆ ಗಾಢ ಅರ್ಥದ ಪದಗಳಲ್ಲಿ ವ್ಯಕ್ತಪಡಿಸುತ್ತವೆ. ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥವನ್ನು ಹೊತ್ತಿರುವ ಗಾದೆಗಳು ನಮ್ಮ ದೈನಂದಿನ ಬದುಕಿನಲ್ಲಿ ಮಾರ್ಗದರ್ಶನ ನೀಡುವ ಜ್ಞಾನಭಂಡಾರವಾಗಿವೆ.

 

ಕನ್ನಡ ಭಾಷೆಯ ಸೊಗಡು, ಹಿಂದಿನ ಪೀಳಿಗೆಯ ಹಿರಿಯರ ಚಾತುರ್ಯ ಮತ್ತು ಜೀವನದ ಅನುಭವಗಳು ಗಾದೆಗಳ ಮೂಲಕ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಅವು ಕೇವಲ ಮಾತುಗಳಲ್ಲ; ನಮ್ಮ ಸಂಪ್ರದಾಯ, ನೈತಿಕ ಮೌಲ್ಯಗಳು ಮತ್ತು ಜೀವನದ ತತ್ವಗಳನ್ನು ಬಿಂಬಿಸುವ ಅಮೂಲ್ಯ ಸಂಪತ್ತಾಗಿದೆ. ಈ ಲೇಖನದಲ್ಲಿ ಕೆಲವು ಜನಪ್ರಿಯ ಕನ್ನಡ ಗಾದೆಗಳ ಅರ್ಥ ಮತ್ತು ಅವುಗಳ ಬಳಕೆಯನ್ನು ತಿಳಿದುಕೊಳ್ಳೋಣ.

 

 

ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯಲ್ಲಿ ಗಾದೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಪೀಳಿಗೆಯಿಂದ ಪೀಳಿಗೆಗೆ ಬಾಯಿಂದ ಬಾಯಿಗೆ ಬಂದಿರುವ ಈ ಜನಪ್ರಿಯ ಕನ್ನಡ ಗಾದೆಗಳು ಜೀವನದ ಅನುಭವ, ಬುದ್ಧಿವಂತಿಕೆ, ನೀತಿ ಹಾಗೂ ಸತ್ಯಗಳನ್ನು ಸರಳವಾದ ಪದಗಳಲ್ಲಿ ಹೇಳುತ್ತವೆ. ಚಿಕ್ಕ ವಾಕ್ಯಗಳಲ್ಲಿ ಆಳವಾದ ಅರ್ಥವನ್ನು ಹೊತ್ತಿರುವ ಕನ್ನಡ ಗಾದೆಗಳು ನಮ್ಮ ದಿನನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಸಮಾಜ, ಸಂಬಂಧ, ಪರಿಶ್ರಮ, ಸಮಯ ಮತ್ತು ಜೀವನ ಮೌಲ್ಯಗಳನ್ನು ಸ್ಪಷ್ಟವಾಗಿ ಬಿಂಬಿಸುವ ಈ ಗಾದೆಗಳು ಕನ್ನಡ ಸಂಸ್ಕೃತಿ ಮತ್ತು ಜನಜೀವನದ ಮೌಲ್ಯವನ್ನು  ಪ್ರತಿಬಿಂಬಿಸುತ್ತವೆ.

Small Kannada Gadegalu With Images

kannada gadegalu
kannada gaade
ಗಾದೆ ಮಾತುಗಳು
kannada gadematu
gadematu in kannada

ಜನಪ್ರಿಯ ಕನ್ನಡ ಗಾದೆಗಳ ಪಟ್ಟಿ (small kannada gadegalu)

ಬರಗಾಲದಲ್ಲಿ ಅಧಿಕ ಮಾಸ.

ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು

ಕೈ ಕೆಸರಾದರೆ ಬಾಯಿ ಮೊಸರು

ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ಏಕೆ?

ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ

ಯಾರದ್ದೋ ದುಡ್ಡು ಯೆಲ್ಲಮ್ಮನ ಜಾತ್ರೆ

ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು

ಅಲ್ಪರ ಸಂಘ ಅಭಿಮಾನ ಭಂಗ

ಎಮ್ಮೆಗೆ ಎರಡು ಕೋಡು ,ಹೆಮ್ಮೆಗೆ ಎಂಟು ಕೋಡು

ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

ಉಂಡ ಮನೆ ಜಂತೆ ಎಣಿಸಬಾರದು

ಕಣ್ಣರಿಯದಿದ್ದರೂ ಕರುಳರಿಯುತ್ತದೆ

ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

ಮನೆಗೆ ಮಾರಿ ಊರಿಗೆ ಉಪಕಾರಿ

ಜನಪ್ರಿಯ ಕನ್ನಡ ಗಾದೆಗಳ ಪಟ್ಟಿ (Gade mathu in kannada)

ತಾನು ಸಾಯುವತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬಂಗಾರ ಕೊಟ್ಟೇನು ಎನ್ನುತ್ತಂತೆ ಕೋಳಿ .

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ,ಮಕ್ಕಳನ್ನೇ ಆಸ್ತಿಯಾಗಿ ಮಾಡಿ

ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

ಗಾಳಿ ಬಂದಾಗ ತೂರಿಕೋ

ಉಂಬಾಗ,ಉಡುವಾಗ ಊರೆಲ್ಲ ನೆಂಟರು

ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ದೇವರಿಲ್ಲ

ನಾಳೆ ಎಂದವನ ಮನೆ ಹಾಳು

ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲ

ಒಲಿದರೆ ನಾರಿ,ಮುನಿದರೆ ಮಾರಿ

ಮಾಡಿದ್ದುಣ್ಣೋ ಮಾರಾಯ

ದುಡ್ಡಿದ್ದವನೇ ದೊಡ್ಡಪ್ಪ

ಅಳಿಯ ಅಲ್ಲ, ಮಗಳ ಗಂಡ

ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ

ಆಕಳು ಕಪ್ಪಾದರೂ ಹಾಲು ಕಪ್ಪೆ ?

ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ

ಉಂಡೂ ಹೋದ, ಕೊಂಡೂ ಹೋದ

ಹಿತ್ತಲ ಗಿಡ ಮದ್ದಲ್ಲ

ಕುರಿ ಕಾಯೋದಕ್ಕೆ ತೋಳವನ್ನು ಕರೆಸಿದರಂತೆ

ಮುಖ ನೋಡಿ ಮನೆ ಹಾಕಬೇಡ

ಹಾಸಿಗೆ ಇದ್ದಷ್ಟು ಕಾಲು ಚಾಚು

ಕೊಟ್ಟವನು ಕೋಡಂಗಿ ಈಸ್ಕೊಂಡವನು ಈರಭದ್ರ

ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣೆಹಾಕಿದರಂತೆ

ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ

ಬೆಟ್ಟ ಅಗೆದು ಇಲಿ ಹಿಡಿದ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ

ಬೇಲಿಯೇ ಎದ್ದು ಹೊಲ ಮೇಯ್ದಂತೆ

ಅತಿ ಆಸೆ ಗತಿ ಗೇಡು

ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ

ಕಚ್ಚೋ ನಾಯಿ ಬೊಗಳುವುದಿಲ್ಲ

ಗೆದ್ದೆತ್ತಿನ ಬಾಲ ಹಿಡಿದ ಹಾಗೆ

ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು

ಚಂದವಿದ್ದಲ್ಲಿ ಮಂದತ್ವ ಇರಬಾರದು

ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ

ಬರಗಾಲದಲ್ಲಿ ಅಧಿಕ ಮಾಸ

ಮಾಡಿದವರ ಪಾಪ ಆಡಿದವರ ಬಾಯಲ್ಲಿ

ಕಸ ತಿನ್ನುವುದಕ್ಕಿಂತ ತುಸು ತಿನ್ನು

ವೇದ ಸುಳ್ಳಾದರು ಗಾದೆ ಸುಳ್ಳಾಗದು

ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ

ಓದಿಲ್ಲ ಬರಹವಿಲ್ಲ ವರ ಬುದ್ಧಿವಂತ

ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು 

ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ 

ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ

ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು

ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು

ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು

ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ

ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು

ಕರುಬಿದವರ ಮನೆ ಬರಿಮನೆ

ಗಂಟೂ ಹೋಯ್ತು;ನಂಟೂ ಹೋಯ್ತು

ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು

ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ .

ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ

ಕೇಡು ಬರೋ ಕಾಲಕ್ಕೆ ಬುದ್ಧಿಗೇಡು

ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.

ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.

ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು

ಚೆಂದಕ್ಕೆ ನನ್ನ ಗಂಡ ಚೆನವೀರಿ ಅಂದ್ರೆ ಅಂಗೆ ನನ್ನ ಜೀವ ಅರದೋಯ್ತು.

ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ

ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ

ಹುತ್ತ ಬಡಿದರೆ ಹಾವು ಸಾಯುವುದೇ

ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ

ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.

ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ

ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ

ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ

ತಲೆ ಸೀಳಿದರೆ ಎರಡಕ್ಷರ ಇಲ್ಲ

ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ

ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ

ಎಲ್ಲಾ ಜಾಣ; ತುಸ ಕೋಣ

ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ

ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ

ತಾಯಂತೆ ಕರು ನಾಯಂತೆ ಬಾಲ ತಾಯಂತೆ ಮಕ್ಕಳು ನೂಲಂತೆ ಸ್ಯಾಲೆ

ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು

ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ

ಅರಗಿನಂತೆ ತಾಯಿ, ಮರದಂತೆ ಮಕ್ಕಳು

ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು

ಅತಿ ಆಸೆ ಗತಿಗೇಡು

ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?

ತನಗಿಲ್ಲದ್ದು ಎಲ್ಲಿದ್ದರೇನು

ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ

ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ

ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು

ಕೋತಿ ಮೊಸರು ಕುಡಿದು ಮೇಕೆ ಬಾಯಿಗೆ ಒರೆಸಿತಂತೆ

ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.

ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ

ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ.

ಸೇರಿಗೆ ಸವ್ವಾ ಸೇರು

ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು

ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ

ಅರ್ಧ ಕಲಿತವನ ಆಬ್ಬರ ಹೆಚ್ಚು.

ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ

ಸಂದೀಲಿ ಸಮಾರಾಧನೆ

ಕಲ್ತದ್ ಬಿಟ್ಟೆಯಾ ಕಲಕೇತಿ ಅಂದ್ರೆ ಊರು ಬಿಟ್ರು ನಾ ಕಲ್ತದ್ ಬಿಡಲ್ಲ ಅಂದ್ಲಂತೆ

ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ

ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ?

ತೂತು ಗತ್ತಲೇಲಿ ತಾತನ ಮದುವೆ

ಮಾತು ಬೆಳ್ಳಿ, ಮೌನ ಬಂಗಾರ.

ಸಜ್ಜನರ ಸಂಗ ಹೆಜ್ಜೇನು ಸವಿದಂತೆ

ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.

ಅ೦ಗ ತೋರಿಸಿ ಅರ್ಧಾ೦ಗಿಯಾದಳು.

ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ

ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ

ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ

ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

ಯಾರನ್ನ ನಂಬಿದರು ಆರೈದು ನಂಬಬೇಕು

ಒಲಿದರೆ ನಾರಿ ಮುನಿದರೆ ಮಾರಿ

ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು

ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.

ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.

ಹಿರೀ‌ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು

ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ

ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು

ಊರಿಗೆ ದಾರೀಯ ಯಾರು ತೋರಿದರೇನು

ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು

ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ

ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

ಮರದಂತೆ ಮಕ್ಕಳು

ರಾಜ ಇರೋತನಕ ರಾಣಿ ಭೋಗ

ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ

ಪಡಿಗೆ ಬಂದವನಿಗೆ ಕಡಿ ಅಕ್ಕಿ ಆಗದೇ.

ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ

ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ

ಕತ್ತೆಯಾಗಬೇಡ ಕಾಗೆಯಾಗು.

ಆಗುವ ವರೆಗಿದ್ದು ಆರುವ ವರೆಗೆ ಇರಲಾರರೇ

ಜ್ಯೋತಿಯ ನೆಲೆ ಅರಿತವನೇ ಯೋಗಿ

ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ

ಸಿರಿತನ ಇರೂತನ ಹಿರಿತನ ಘನ ಸಿರಿಯಣ್ಣ

ಅತ್ತೂ ಕರೆದೂ ಔತಣ ಹೇಳಿಸಿಕೊಂಡರು

ಗಾಣವಾಡದೆ ಎಣ್ಣೆ ಬಂದೀತೇ

ಅಹಂಕಾರಕ್ಕೆ ಉದಾಸೀನವೇ ಮದ್ದು

ನೂಲಿನಂತೆ ಸೀರೆ; ತಾಯಿಯಂತೆ ಮಗಳು

ಆಟ ಕೆಟ್ಟರೆ ದೀವಟಿಗೆಯವನ ಸುತ್ತ

ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ

ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು

ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

ಹೂವಿನ ಜೊತೆ ದಾರ ಮುಡಿಯೇರಿತು

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ ‘ಭುಸ್’ ಅಂತಂತೆ

ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ

ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

ಓದುವಾಗ ಓದು; ಆಡುವಾಗ ಆಡು

ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!

ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ

ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ

ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?

ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ

ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ

ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು

ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ

ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ

ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ

ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.

ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

ಹುಟ್ಟಿದವಗೆ ಸಾವು ತಪ್ಪದು

ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ

ಎದ್ದೋಗೋ ಮಾತು ಬಿದ್ದೋಗಲಿ

ತವಡು ತಿಂದರು ಮುರುಕು (ಬೆಡಗು, ಕೊಂಕು) ಘನ

ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು

ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು

ಕೋಳಿಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆರೆಯದೆ ಇರುವುದೇ?

ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ

ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು

ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ

ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ

ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ

ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು.

ತಾ ಕಳ್ಳೆ ಪರರ ನಂಬಳು,

ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ

ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ

ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.

ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ

ಎತ್ತಿನ ಹುಣ್ಣ ಕಾಗೆ ಬಲ್ಲೆ । ಅದು ಬಲು ಕಿತ್ತೊಂಡ್ ತಿನ್ನೂದ ! 

ಎತ್ತೋರಿಲ್ಲದ ಮಕ್ಕಳ ಹೆತ್ತೇನು ಫಲ? ಮುಟ್ಟೋರಿಲ್ಲದ ದನಗಳನ್ನ ಕಟ್ಟೆನು ಫಲ?

ಎದ್ದಾಗ ಜುಟ್ಟು ಹಿಡಿ | ಬಿದ್ದಾಗ ಕಾಲು ಹಿಡಿ. 

ಎದ್ದೂ ಮಾಡ । ನೀದ್ದೆನೂ ಕೊಡ. 

ಎದೆಗಾರ ಗೊಣಗಲ್ಲ । ಆಯಾರ ಮುಣಗಲ್ಲ. 

ಎಮ್ಮೆ ಕಾಯೋನೆ ಹೇಲಾಟ ಹಂಡ್ರೆ ಕಳ್ಳೆಮ್ಮೆಗೆ ನಾಕ್ಕಾಲು ಬಂದಂಗೆ. 

ಎಮ್ಮೆಗೆ ಎರಡು ಕೋಡು | ಹೆಮ್ಮೆಗೆ ಎಂಟು ಕೋಡು. 

ಎಮ್ಮೆಯ ಮೇಲೆ ಮಳೆಗರೆದ ಹಾಗೆ 

ಎಮ್ಮೆಯಂಥ ಬಡ್ಡಿಯ ಯಾಕ್ತಂದ ಅಂದ್ರೆ, ಯಾಳ್ಳೇವು ತಪ್ಪಾಗ ಕುಯೋಕೆ ಅಂದನಂತೆ.

ಕೊಟ್ಟ ಸಾಲ ಕೇಳೆ ಹೋಯ್ತು, ಮಾಡಿದಬದುಕು ನೋಡ್ಲೆ ಹೋಯ್ತು. 

ಕೊಟ್ಟೋನು ಕೋಡಂಗಿ | ಈಸ್ಕೋಂಡೋನು ಈರಭದ್ರ 

ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ. 

ಕೊಟ್ಟು ಕೆಟ್ಟವನಿಲ್ಲ । ತಿರಿದು ಬದುಕಿದವನಿಲ್ಲ. 

ಕೊಟ್ಟಾಲೆ ಹೆಣ್ಣು ಬೆಟ್ಟಸಾಲೆ ಮಳೆ. 

ಕೊಟ್ಟು ಕುದೀಬಾರದು । ಇಟ್ಟು ಹಂಗಿಸಬಾರದು. 

ಕೊಟ್ಟು ಕೆಟ್ಟೋನಿಲ್ಲ | ಇಟ್ಟು ಬದುಕಿದೋನಿಲ್ಲ. 

ಕೊಟ್ಟೋರ ವಡವೆ ಕೊಡಲಿಲ್ಲ | ನೆಟ್ಟ ಮರಕೆ ನೀರುಯಲಿಲ್ಲ. 

ಕೊಡಲಿಗೆ ಹೆದರದ ಮರ ಕಾವಿಗೆ ಹೆದರೀತೆ ? 

ಕೊಡದೇ ಇರೋನ ಕೊಸರು ನೋಡು. 

ಕೊಡಲಿ ಕಾವು ಕುಲಕ್ಕೆ ಮೂಲ. 

ಕೊಡೋದ್ ಮೂರು ಕಾಸು । ಕ್ಷಾಣೆ ತುಂಬ ಹಾಸು.

ಜಟ್ಟಿ, ಜಾರಿ ಬಿದ್ದರೆ ಅದೂ ಒಂದು ಪಟ್ಟು. 

ಟೊಳ್ಳು ಮಾತು ಸುಳ್ಳಿಗಿಂತ ಕಡೆ. 

ಜನ ನೋಡಿ ಬೇಡಬೇಕು। ಜಾಗ ನೋಡಿ ಉಗುಳಬೇಕು. 

ಜನ ಮರುಳೋ ಜಾತ್ರೆ ಮರುಳೋ. 

ಜಗಲೀ ಹಾರದವ ಗಗನ ಹಾರಾನೆ? 

ಜಗ ಹೊರೋಳಿಗೆ ಮಗ ಭಾರವೇ? 

ಜಗಳಗಾತಿ ಮಗಳನರಿಯಳು।ಮಾಟಗಾತಿ ಮಗನರಿಯಳು. 

ಜಳು ಬೆಳು ಸುಳ್ಳು ಹೇಳೋದು 

ಜಾಣಗೆ ಮಾತಿನ ಪೆಟ್ಟು | ಕತ್ತೆಗೆ ಲತ್ತೆ ಪೆಟ್ಟು 

ಜಾಣನಿಗೆ ಜಗಳವಿಲ್ಲ ರಾಗಿ ಉಂಡೋನಿಗೆ ರೋಗವಿಲ್ಲ.

ಬಾಳ ಮಾತಾಡೋನು ಬಾಳ್ವೆ ಮಾಡ್ತಾನ ? 

ಬಾಳು ತಪ್ಪಿದ ಬಳಿಕ, ಬಳೆಯ ಯೋಚನೆ ಯಾಕೆ? 

ಬಾಳೆ ಕಡಿಯೋಕೆ ನನ ಗಂಡ ಗೂಳಿಯಂಗೆ, ಗೊಬ್ಬಿ ಕಡಿಯೋಕೆ ತಬ್ಲಿಯಂಗೆ 

ಬಾಳೆ ಕಳಿತರ ರುಚಿ | ಜೇನು ಹುಳಿತರೆ ರುಚಿ । ಹಾಲು ಕಾದರ ರುಚಿ. 

ಬಾ‌ಗೊಂದು ಮಾತು । ಬಾಳೆಗೊಂದ್ ಗೊನೆ. 

ಬಾಳೊಮನೆಗೊಂದು ಬೊಗಳೊ ನಾಯಿ.

ಬ್ಯಾಸತ್ತು ಬ್ಯಾರಾದ್ರೆ, ಪಾಲಿಗೆ ಬಂದಳು ಅತ್ತೆ. 

ಬಾಳಕಾತಿ ಮನೇಲಿ ಏಳಮ್ಮೆ ಕರಿತಿದ್ದೂ, ಬ್ಯಾಳೆ ಅಗ್ರಿಸೋಕೆ ಬೆಣ್ಣಿಲ್ಲ. 

ಬಿಕ್ಕಿ ಬಿಕ್ಕಿ ಅತ್ತರೆ ಬೀಸುವಕಲ್ಲು ತಿರುಗೀತೆ? 

ಬಿಟ್ಟಿ ಬರೋದಾದ್ರೆ, ನನಗೂ ಒಬಿರಲಿ, ನಮ್ಮಪ್ಪನಿಗೂ ಒಬಿರಲಿ ಅಂದ. 

ಬಿಟ್ರೆ ಸಿಕ್ಕ | ಹಿಡುದ್ರೆ ದಕ್ಕ

ಅಡವಾಗೆ ಉಂಬಾಗ ಗಿಡವೆಲ್ಲಾ ನೆಂಟರು. 

ಅಡ್ಡಗ್ಯಾಡ ಮ್ಯಾಲೆ ದೀಪ ಇಟ್ಟಂಗೆ. 

ಅಡ್ಡಾದಿಡ್ಡಿ ಮಾತಾಡಿ ಗಡ್ಡ ಕೀಳಿಸ್ಕೊಂಡ.. 

ಅಡಿಗೆ ಮಾಡೋನು ಒಬ್ಬನಾದ್ರೆ ಹದ ಹಿಡಿಯೋರು ಒಂಬತ್ತು ಜನ. 

ಅಡಿಗೆ ಮಾಡೋಳ ಹಸ್ತದ ಗುಣ । ಕುಂಬಾರ ಮಡಕೆ ಗುಣ. 

ಅಡಿಗೆ ಯಾಕೆ ಹಿಂಗೆ ಮಾಡಿದ್ದಿ ಅಂದ್ರೆ ಕೋಣೆ ಕಿರಿದಾಗಿತ್ತು ಅಂದಂತೆ. 

ಅಡ್ಡಿ ಮಾಡಿದಷ್ಟೂ ಬಡ್ಡಿ ಹೆಚ್ಚುವುದು, ಅಡಿಗೆ ಮಾಡಿದಷ್ಟೂ ಉಂಡು ತೀರುವುದು. 

ಅಡೂತನಕ ನಿಂತುಕೊಂಡು । ಆರೂತನಕ ನಿಲ್ಲಲಿಲ್ಲ. 

ಅಡೂಮಡಿಕೆ ಕೊಟ್ಟು ಕುಂಡ್ಯಾಗೆ ಬದನಿಕಾಯಿ ಇಟ್ಟುಕೊಂಡರು. 

ಅಣಬೆ ಆಸೆಗೆ ಕೂಗೋ ಕೋಳಿ ಕುಯ್ದರಂತೆ. 

ಅಣ್ಣ ಅಪ್ಪಾದನಾ । ಅತ್ತಿಗೆ ಅವ್ವಾದಳಾ? 

ಅಸೊಪ್ಪು ತಿನ್ನೋಕು ಪುಣ್ಯ ಇರಬೇಕು. 

ಅತ್ತದ ಮಳೆ ಹುಯ್ದಿದ್ರೆ ಹೆತ್ತ ತಾಯಿ ಮಕ್ಕಳಿಗೆ ಹಿಟ್ಟಿಕ್ಕಲ್ಲ. 

ಅತೀ ಬುದ್ದಿ ಅಲ್ಪಾಯಸ್ಸು 

ಅತಿರಥ ಮಹಾರಥರು ಇರುವಲ್ಲಿ ಉತ್ತರಕುಮಾರ ಯಾರು? 

inspirational-quotes-kannada
MOTIVATION QUOTES
bhagavadgite quotes
BHAGAVADGITA QUOTES
kannada attitude quotes images
ATTITUDE QUOTES
kannada-preeti-love-quotes
LOVE QUOTES
relationship quotes in kannada
RELATIONSHIP QUOTES
hurt sad feeling-kannada quotes
SAD QUOTES
@saadhaneya Kicchu
[instagram-feed feed=1]