ಕರ್ನಾಟಕ ಸರ್ಕಾರದ ಆನ್‌ಲೈನ್ ಸೇವೆಗಳ ಪೋರ್ಟಲ್‌ಗಳ ಮಾಹಿತಿ

ಕರ್ನಾಟಕ ಸರ್ಕಾರದ ಆನ್‌ಲೈನ್ ಸೇವೆಗಳ ಪರಿಚಯ

ಕರ್ನಾಟಕ ಸರ್ಕಾರವು ಆಡಳಿತವನ್ನು ಸುಗಮಗೊಳಿಸಲು ನಾಗರಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಹಾಗೂ ಕಲ್ಯಾಯೋಜನೆಗಳನ್ನು ಒದಗಿಸುತ್ತದೆ. ಈ ಸೇವೆಗಳು ಜನಸಾಮಾನ್ಯರ ಜೀವನವನ್ನು ಸುಗಮಗೊಳಿಸಲು, ಪಾರದರ್ಶಕ ಆಡಳಿತವನ್ನು ಒದಗಿಸಲು ಮತ್ತು ಸಮಾಜದ ಸಮಾನತೆಯನ್ನು ಕಾಪಾಡಲು  ಸಹಾಯಕವಾಗುತ್ತವೆ.

ಇಲ್ಲಿ ನಾವು ಕರ್ನಾಟಕ ಸರ್ಕಾರದ ಅಧಿಕೃತ ಡಿಜಿಟಲ್ ಸೇವೆಗಳ ವೆಬ್ಸೈಟ್/ಪೋರ್ಟಲ್ಗಳ (Karnataka Government Online services Portals) ಪಟ್ಟಿಯನ್ನು ನೀಡಿದ್ದೇವೆ, ಇದು ಸಾಮಾನ್ಯ ನಾಗರಿಕರಿಗೆ ಒಂದೇ ವೇದಿಕೆಯಲ್ಲಿ ಮಾಹಿತಿ ತಿಳಿಸುವುದು ಇದರ ಉದ್ದೇಶವಾಗಿದೆ, ಬನ್ನಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ

Karnataka Government Online Services Portals

1. ನಾಗರಿಕ ಸೇವಾ ಕೇಂದ್ರಗಳು (Core Citizen Service Portals)

ಕರ್ನಾಟಕ ಸರ್ಕಾರವು ನಾಗರಿಕರಿಗೆ ಸುಲಭವಾಗಿ, ವೇಗವಾಗಿ ಹಾಗೂ ಪಾರದರ್ಶಕವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಲವು ನಾಗರಿಕ ಆನ್‌ಲೈನ್‌ ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳ ಮೂಲಕ ಜನರು ತಮ್ಮ ದಿನನಿತ್ಯದ ಆಡಳಿತಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

ಜನನ – ಮರಣ ಪ್ರಮಾಣಪತ್ರ, ಆದಾಯ–ಜಾತಿ ಪ್ರಮಾಣಪತ್ರ, ಭೂಮಿ ದಾಖಲೆ, ಪಿಂಚಣಿ ಅರ್ಜಿ, ವಿದ್ಯುತ್‌ ಬಿಲ್‌ ಪಾವತಿ, ನೀರಿನ ಬಿಲ್‌ ಪಾವತಿ, ತೆರಿಗೆ ಪಾವತಿ ಮುಂತಾದ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು.

ಈ ಸೇವೆಗಳನ್ನು ಒದಗಿಸುವ ಮುಖ್ಯ ಆನ್ಲೈನ್ ಜಾಲ ತಾಣ (portals) ಗಳೆಂದರೆ

  • ಸೇವಾ ಸಿಂಧು (Seva Sindhu)
  • ಕರ್ನಾಟಕ ಒನ್ (Karnataka One)
  • ಸಕಾಲ (Sakala)
  • ಮಾಹಿತಿ ಕಣಜ (Mahiti Kanaja) ಹಾಗೂ 
  • ಕರ್ನಾಟಕ ರಾಜ್ಯ ಪೋರ್ಟಲ್ (Karnataka State Portal)ಗಳು.

2. ಭೂಮಿ ಮತ್ತು ಆಸ್ತಿ ಸೇವೆಗಳು

ಆಸ್ತಿ ಎಂದರೆ ಮನೆ, ಜಮೀನು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು ಮುಂತಾದವುಗಳನ್ನು ಒಳಗೊಂಡಿದ್ದು, ಇವುಗಳ ನಿರ್ವಹಣೆ, ಖರೀದಿ, ಮಾರಾಟ ಮತ್ತು ಹೂಡಿಕೆ ಪ್ರಕ್ರಿಯೆಗಳು ಸರ್ಕಾರದ ಭೂಮಿ ಮತ್ತು ಆಸ್ತಿ ಆನ್ಲೈನ್ ಸೇವೆಗಳು ಎಂಬ ವಿಭಾಗದ ಅಡಿಯಲ್ಲಿ ಬರುತ್ತವೆ.

ಭೂಮಿ ಮತ್ತು ಆಸ್ತಿ ಸೇವೆಗಳು ಒದಗಿಸುವ ಮುಖ್ಯ ಆನ್ಲೈನ್ ಸೇವೆಗಳೆಂದರೆ

  • ಭೂಮಿ RTC ಪಹಣಿ
  • ಕಾವೇರಿ ಆನ್‌ಲೈನ್ ಸರ್ವೀಸ್ (Kaveri Online Services)
  • ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (Encumbrance Certificate – EC) 
  • ನಗರ ಆಸ್ತಿ ದಾಖಲೆಗಳು (Urban Property Records)
  • ಭೂಮಿ ಮ್ಯೂಟೇಶನ್ ಸ್ಥಿತಿ (Land Mutation Status)

3. ಪ್ರಮಾಣಪತ್ರಗಳು ಮತ್ತು ನಾಗರಿಕ ಸೇವೆಗಳು

ಪ್ರಮಾಣಪತ್ರಗಳು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಕಾನೂನುಬದ್ಧ ಸ್ಥಿತಿಯನ್ನು ದೃಢೀಕರಿಸುವ ದಾಖಲೆಗಳಾಗಿದ್ದು. ಉದಾಹರಣೆಗೆ ವ್ಯಕ್ತಿಯ ಗುರುತಿನ ದೃಢೀಕರಣ,ಜನನ ಮತ್ತು ಮರಣ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಆಸ್ತಿ ಹಕ್ಕು, ಶಿಕ್ಷಣ, ಉದ್ಯೋಗ,ವಸತಿ ಪ್ರಮಾಣಪತ್ರ, ಆಸ್ತಿ ದಾಖಲೆಗಳು, ತೆರಿಗೆ ಪಾವತಿ ಸರ್ಕಾರಿ ಹಾಗೂ ಸರ್ಕಾರಿಯೇತರೆ ಯೋಜನೆಗಳ (Government Portals) ಪ್ರಯೋಜನ ಪಡೆಯಲು ಪ್ರಮಾಣಪತ್ರಗಳು ಅವಶ್ಯಕವಾಗುತ್ತವೆ.

ಪ್ರಮಾಣಪತ್ರಗಳು ಮತ್ತು ನಾಗರಿಕ ಸೇವೆಗಳು ಆನ್ಲೈನ್ ಒದಗಿಸುವ ಮುಖ್ಯ ಸೇವೆಗಳು ಎಂದರೆ.

  • ಜನನ ಪ್ರಮಾಣಪತ್ರ (Birth Certificate)
  • ಮರಣ ಪ್ರಮಾಣಪತ್ರ (Death Certificate)
  • ಜಾತಿ ಪ್ರಮಾಣಪತ್ರ (Caste Certificate)
  • ಆದಾಯ ಪ್ರಮಾಣಪತ್ರ (Income Certificate)
  • ವಾಸಸ್ಥಳ / ನಿವಾಸ ಪ್ರಮಾಣಪತ್ರ (Domicile / Residence Certificate) ಇತ್ಯಾದಿ. 

4. ಶಿಕ್ಷಣ ಮತ್ತು ಪರೀಕ್ಷಾ ಪೋರ್ಟಲ್ಗಳು

ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಜೀವನದ, ಬೌದ್ಧಿಕ ಬೆಳವಣಿಗೆಯ ಮೂಲಭೂತ ಹಕ್ಕು . ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಗಮಗೊಳಿಸಲು ತಂತ್ರಜ್ಞಾನವನ್ನು ಬಳಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ “ಶಿಕ್ಷಣ ಮತ್ತು ಪರೀಕ್ಷಾ ಪೋರ್ಟಲ್” (karnataka government exam portals) ಎಂಬ ಆನ್‌ಲೈನ್ ವೇದಿಕೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗಾಗಿ ಸಮಗ್ರ ಪರಿಹಾರವನ್ನು ಒದಗಿಸುವ ವೇದಿಕೆ.

ಶಿಕ್ಷಣ ಮತ್ತು ಪರೀಕ್ಷೆ ಯ  ಮುಖ್ಯ ಪೋರ್ಟಲ್ಗಳು ಎಂದರೆ

  • KEA – CET, NEET, PGCET ಪೋರ್ಟಲ್‌ಗಳು
  • ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆ (DTE Karnataka)
  • ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಸೇವ ಪೋರ್ಟಲ್‌ಗಳು
  • KSEEB SSLC & PUC Results ಪೋರ್ಟಲ್‌ಗಳು
  • State Scholarship Portal (SSP)

5. ಸರ್ಕಾರೀ ಉದ್ಯೋಗ ಮತ್ತು ನೇಮಕಾತಿ ಪೋರ್ಟಲ್ಗಳು

“ಸರ್ಕಾರೀ ಉದ್ಯೋಗ ಮತ್ತು ನೇಮಕಾತಿ ಪೋರ್ಟಲ್” (karnataka government job portals) ಒಂದು ಸಮಗ್ರ ಡಿಜಿಟಲ್ ವೇದಿಕೆ. ಇದು ಉದ್ಯೋಗಾರ್ಥಿಗಳಿಗೆ ಸಮಯೋಚಿತ ಮಾಹಿತಿ, ಸುಗಮ ಅರ್ಜಿ ಪ್ರಕ್ರಿಯೆ ಮತ್ತು ಪಾರದರ್ಶಕ ನೇಮಕಾತಿ ವ್ಯವಸ್ಥೆ ಒದಗಿಸುವ ಮೂಲಕ, ಸರ್ಕಾರೀ ಉದ್ಯೋಗಗಳನ್ನು ಅರ್ಹ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತದೆ.

ಸರ್ಕಾರೀ ಉದ್ಯೋಗ ಮತ್ತು ನೇಮಕಾತಿಗೆ ಮುಖ್ಯ ಪೋರ್ಟಲ್ಗಳು ಎಂದರೆ

  • KPSC ಅಧಿಕೃತ ವೆಬ್‌ಸೈಟ್
  • ಕರ್ನಾಟಕ ಸರ್ಕಾರೀ ಉದ್ಯೋಗ ಪೋರ್ಟಲ್‌ಗಳು
  • PSU ಉದ್ಯೋಗ ಪೋರ್ಟಲ್‌ಗಳು
  • ಶಿಕ್ಷಕರ ನೇಮಕಾತಿ ಸಂಬಂಧಿತ ಪೋರ್ಟಲ್‌ಗಳು 
  • ಪೊಲೀಸ್ ಹಾಗೂ ರಕ್ಷಣಾ (Defence) ಉದ್ಯೋಗಗಳಪೋರ್ಟಲ್‌ಗಳು

6. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಈ ಇಲಾಖೆಯ ಪ್ರಮುಖ ಕಾರ್ಯವೆಂದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಸಮುದಾಯ ಆರೋಗ್ಯ ಕೇಂದ್ರಗಳು (CHC), ಜಿಲ್ಲಾ ಆಸ್ಪತ್ರೆಗಳು ಮತ್ತು ತೃತೀಯ ಮಟ್ಟದ ಆಸ್ಪತ್ರೆಗಳ ಮೂಲಕ ಜನತೆಗೆ ಚಿಕಿತ್ಸೆ ನೀಡುವುದು. ಆರೋಗ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತಲುಪುವಂತೆ ವಿಸ್ತರಿಸುವುದು ಇದರ ಪ್ರಮುಖ ಗುರಿ.

ಈ ಇಲಾಖೆಯಡಿ ಕಾರ್ಯ ನಿರ್ವಹಿಸುವ ಪ್ರಮುಖ ಯೋಜನೆಗಳು.

  • ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆ
  • ತಾಯಿ ಭಾಗ್ಯ ಯೋಜನೆ
  • ಮಡಿಲು ಕಿಟ್ ಯೋಜನೆ
  • ಜನನಿ ಸುರಕ್ಷಾ ಯೋಜನೆ
  • ಸಾಂತ್ವನ ಯೋಜನೆ
  • ರಾಷ್ಟ್ರೀಯ ಆರೋಗ್ಯ ಮಿಷನ್

7. ಕೃಷಿ ಮತ್ತು ರೈತ ಸೇವೆಗಳು

ಕೃಷಿ ಮತ್ತು ರೈತ ಸೇವೆಗಳ ಉದ್ದೇಶ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಅವರ ಶ್ರಮಕ್ಕೆ ನ್ಯಾಯವಾದ ಬೆಲೆ ದೊರಕಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು. ರೈತ ಸೇವೆಗಳು ಕೇವಲ ಸಹಾಯವಲ್ಲ, ಅದು ರೈತರ ಜೀವನದಲ್ಲಿ ಶಾಶ್ವತ ಬದಲಾವಣೆಯನ್ನು ತರಬಲ್ಲ ಶಕ್ತಿ.

ಕೃಷಿ ಮತ್ತು ರೈತ ಸೇವೆಗಳಿಗೆ ಸಂಭದಿತ ಇಲಾಖೆ ಮತ್ತು ಯೋಜನೆಗಳು. 

  • ಬೆಳೆ ವಿಮೆ
  • ಕೃಷಿ ಮಾರಾಟ ವಾಹನಿ
  • ಕರ್ನಾಟಕ ತೋಟಗಾರಿಕೆ ಇಲಾಖೆ
  • ಪಶುಸಂಗೋಪನಾ ಇಲಾಖೆ

8. ಸಾರಿಗೆ ಮತ್ತು ಆರ್‌ಟಿಓ

ಕರ್ನಾಟಕದ ಸಾರಿಗೆ ಮತ್ತು ಆರ್‌ಟಿಓ (RTO) ವ್ಯವಸ್ಥೆ ಜನರ ದಿನನಿತ್ಯದ ಬದುಕಿಗೆ ಅವಿಭಾಜ್ಯವಾಗಿದ್ದು. ಇದು ಕೇವಲ ವಾಹನ ನಿಯಂತ್ರಣವಲ್ಲದೆ, ಸುರಕ್ಷತೆ, ಆರ್ಥಿಕತೆ ಮತ್ತು ಅಭಿವೃದ್ಧಿಗೆ ಶಕ್ತಿ ನೀಡುವ ವ್ಯವಸ್ಥೆ. ಸಾರಿಗೆ ವ್ಯವಸ್ಥೆ ಸುಗಮವಾಗಿದ್ದರೆ, ಸಮಾಜದ ಪ್ರಗತಿ ವೇಗವಾಗಿ ನಡೆಯುತ್ತದೆ.

ಪ್ರಮುಖ ಸೇವೆಗಳು:

  • ಚಾಲನಾ ಪರವಾನಗಿ (Driving Licence Online)
  • ವಾಹನ ನೋಂದಣಿ
  • ಪರಿವಾಹನ ಕರ್ನಾಟಕ ಸಾರಿಗೆ ಸೇವೆಗಳು.

9. ವಿದ್ಯುತ್, ನೀರು ಸರಬರಾಜು ಮತ್ತು ಜನೋಪಯೋಗಿ ಸೇವೆಗಳು

ಕರ್ನಾಟಕದ ವಿದ್ಯುತ್, ನೀರು ಮತ್ತು ಉಪಯೋಗ ಸೇವೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಿವೆ. ಇವುಗಳ ಸಮರ್ಪಕ ನಿರ್ವಹಣೆ, ನವೀನ ತಂತ್ರಜ್ಞಾನಗಳ ಅಳವಡಿಕೆ ಮತ್ತು ಪರಿಸರ ಸ್ನೇಹಿ ನೀತಿಗಳ ಅನುಷ್ಠಾನದಿಂದ ಜನಜೀವನ ಸುಧಾರಿಸುತ್ತಿದೆ. ಭವಿಷ್ಯದಲ್ಲಿ ಶಾಶ್ವತ ಅಭಿವೃದ್ಧಿ ಸಾಧಿಸಲು ಈ ಮೂಲಸೌಕರ್ಯಗಳ ಸಮಗ್ರ ಯೋಜನೆ ಮತ್ತು ನಿರ್ವಹಣೆ ಅತ್ಯಗತ್ಯ.

ಈ ಯೋಜನೆಗಳಿಗೆ ಕಾರ್ಯ ನಿರ್ವಹಿಸುವ ಪ್ರಮುಖ ಇಲಾಖೆಗಳು:

  • Municipal Corporations.
  • ವಿದ್ಯುತ್ ಸರಬರಾಜು ಕಂಪನಿಗಳು.
  • ಜನೋಪಯೋಗಿ (Utility) ಇಲಾಖೆ.

10. ಸಮಾಜ ಕಲ್ಯಾಣ ಇಲಾಖೆ  ಮತ್ತು ಪಿಂಚಣಿ ಯೋಜನೆಗಳು

ಸಮಾಜ ಕಲ್ಯಾಣ ಮತ್ತು ಪಿಂಚಣಿ ಯೋಜನೆಗಳು ಸಮಾಜದ ದುರ್ಬಲ ವರ್ಗಗಳಿಗೆ ಆರ್ಥಿಕ ಭದ್ರತೆ ನೀಡುವುದರ ಜೊತೆಗೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತವೆ. ಇವುಗಳ ಮೂಲಕ ಸಮಾಜದಲ್ಲಿ ಸಮಾನತೆ, ಭದ್ರತೆ ಮತ್ತು ಗೌರವ ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಸಮಾಜ ಕಲ್ಯಾಣ ಮತ್ತು ಪಿಂಚಣಿ ಯೋಜನೆಗಳು ರಾಜ್ಯದ ಶಾಶ್ವತ ಅಭಿವೃದ್ಧಿಗೆ ಬೆನ್ನೆಲುಬಾಗಿವೆ.

ಈ ಇಲಾಖೆ ಒದಗಿಸುವ ಪ್ರಮುಖ ಯೋಜನೆಗಳು

  • ವಿದ್ಯಾರ್ಥಿವೇತನ (Scholarships)
  • ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಗಳು
  • ವಿಧವಾ ಮತ್ತು ವೃದ್ಧಾಪ್ಯ ಪಿಂಚಣಿ ಯೋಜನೆಗಳು. 

11. ಪಾಲಿಕೆಗಳು ಮತ್ತು ಪಂಚಾಯತ್ ಗಳು

ಪಾಲಿಕೆಗಳು ಮತ್ತು ಪಂಚಾಯತ್ ಗಳು ಅಥವಾ ನಗರ ಮತ್ತು ಸ್ಥಳೀಯ ಸಂಸ್ಥೆಗಳು (Urban & Local Bodies) ನಮ್ಮ ಸಮಾಜದ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗಗಳಾಗಿವೆ. ಇವು ಜನಸಾಮಾನ್ಯರ ದಿನನಿತ್ಯದ ಅಗತ್ಯಗಳನ್ನು ಪೂರೈಸುವಲ್ಲಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ಸ್ಥಳೀಯ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಪ್ರಮುಖ ಇಲಾಖೆ ಮತ್ತು ಸಂಸ್ಥೆಗಳು 

  • ನಗರಾಭಿವೃದ್ಧಿ ಇಲಾಖೆ. ಹಾಗೂ 
  • ಪೌರ ಸಂಸ್ಥೆಗಳು.

ಹಿನ್ನುಡಿ

ಕರ್ನಾಟಕ ಸರ್ಕಾರದ ಸೇವಾ ಪೋರ್ಟಲ್‌ಗಳು (Karntaka government online service portals/websites) ಸಾರ್ವಜನಿಕ ತಮ್ಮ ಸೇವೆಗಳನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಸುಲಭವಾಗಿ ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. 

ಈ ಡಿಜಿಟಲ್ ವೇದಿಕೆಗಳ ಮೂಲಕ ನಾಗರಿಕರು ಕಡಿಮೆ ಪತ್ರ ವ್ಯವಹಾರದ ಮೂಲಕ ಸರ್ಕಾರಿ ಕಚೇರಿಗಳಿಗೆ ಪುನರ್ ಭೇಟಿ ನೀಡದೇ ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಲು, ಅರ್ಜಿಗಳ ಸ್ಥಿತಿಯನ್ನು ಪರಿಶೀಲಿಸಲು, ತೆರಿಗೆ ಪಾವತಿಸಲು, ಕಲ್ಯಾಣ ಯೋಜನೆಗಳ ಮಾಹಿತಿ ಪಡೆಯಲು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ.

ಕರ್ನಾಟಕವು ಡಿಜಿಟಲ್ ಆಡಳಿತದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ತಂತ್ರಜ್ಞಾನ ಆಧಾರಿತ ನವೀನತೆಯ ಮೂಲಕ ಸಾರ್ವಜನಿಕ ಆಡಳಿತವನ್ನು ರೂಪಾಂತರಗೊಳಿಸುವ ತನ್ನ ಬದ್ಧತೆಯನ್ನು ನಿರಂತರವಾಗಿ ತೋರಿಸಿದೆ. 

ಆಡಳಿತಾತ್ಮಕ ಕಾರ್ಯ ವಿಳಂಬಗಳನ್ನು ಕಡಿಮೆ ಮಾಡಿ ಸೇವೆಗಳನ್ನು ನೇರವಾಗಿ ನಾಗರಿಕರ ಕೈಗೆ ತಲುಪಿಸುವುದು , ಸರ್ಕಾರಿ ಕಾರ್ಯಾಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಬಲಪಡಿಸುವುದು, ಡಿಜಿಟಲ್ ಸೇವೆಗಳ ಮೂಲಕ ನಗರ – ಗ್ರಾಮಾಂತರ ಫಲಾನುಭವಿಗಳ ಅಂತರವನ್ನು ಕಡಿಮೆ ಮಾಡುವುದು, ಸಂಪೂರ್ಣ ಡಿಜಿಟಲೀಕೃತ ಮತ್ತು ಸುಲಭವಾಗಿ ಅನುಸರಿಸಬಹುದಾದ ಪ್ರಕ್ರಿಯೆಗಳ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು, ನಾಗರಿಕರಿಗೆ ಅಗತ್ಯ ಮಾಹಿತಿ, ಹಕ್ಕುಗಳು ಮತ್ತು ಸೌಲಭ್ಯಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಜಾಲತಾಣಗಳ ಪ್ರಮುಖ ಉದ್ದೇಶವಾಗಿದೆ. 

ಈ ಪುಟದಲ್ಲಿ ವಿವಿಧ ಕರ್ನಾಟಕ ಸರ್ಕಾರದ ಇಲಾಖೆಗಳ ಸೇವಾ ಪೋರ್ಟಲ್ ಅಥವಾ ಜಾಲತಾಣಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಸುಲಭವಾಗಿ ಸರ್ಕಾರಿ ಸೇವೆಯನ್ನು ಪಡೆಯಬಹುದಾದ ಪೋರ್ಟಲ್ ಬಗ್ಗೆ ಮಾಹಿತಿ ನೀಡಿದ್ದೇವೆ. 

ಸೂಚನೆ: ಅಧಿಕೃತ ವೆಬ್ಸೈಟ್ ಗಳನ್ನು ಮಾತ್ರ ಪರಿಶೀಲಿಸಿ / ಗಮನಿಸಿ ಅವುಗಳ ಪ್ರಯೋಜನವನ್ನು ಪಡೆಯತಕ್ಕದ್ದು.

KannadapediaAdmin

ನಾನು ಒಬ್ಬ ವಿಷಯ ಲೇಖಕ, ಪ್ರಸ್ತುತ ವಿಷಯಗಳು, ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಪ್ರವಾಸ ಬ್ಲಾಗ್‌ಗಳು, ಆಹಾರ ಲೇಖನಗಳು ಮತ್ತು ಪ್ರೇರಣಾದಾಯಕ ಉಕ್ತಿಗಳ ಕುರಿತು ಬರೆಯುತ್ತೇನೆ. ಓದುಗರಿಗೆ ಉಪಯುಕ್ತ ಮತ್ತು ಪ್ರೇರಣಾದಾಯಕ ಮಾಹಿತಿಯನ್ನು ಹಂಚಿಕೊಳ್ಳುವುದು ನನ್ನ ಆಸಕ್ತಿ.

@saadhaneya Kicchu
[instagram-feed feed=1]