Best 100+ Life Motivational Quotes in Kannada

motivational quotes in kannada

ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರೇರಣೆ ಅತ್ಯಂತ ಮುಖ್ಯವಾದ ಅಂಶ. ಪ್ರತಿಯೊಬ್ಬರ ಜೀವನದಲ್ಲೂ ಏಳು-ಬೀಳುಗಳು ಸಾಮಾನ್ಯ, ಆದರೆ ಆತ್ಮವಿಶ್ವಾಸ ಮತ್ತು ದೃಢನಿಶ್ಚಯದಿಂದ ಮುಂದೆ ಸಾಗುವವರಿಗೆ ಮಾತ್ರ ಜಯ ಸಿಗುತ್ತದೆ. ಈ ಪುಟದಲ್ಲಿ ನಾವು ನೀಡಿರುವ 100+ ಪ್ರೇರಣಾದಾಯಕ ಉಕ್ತಿಗಳು ಕನ್ನಡದಲ್ಲಿ ನಿಮ್ಮ ಮನೋಬಲವನ್ನು ಹೆಚ್ಚಿಸಿ, ಹೊಸ ಚೈತನ್ಯವನ್ನು ನೀಡುವಂತಿವೆ. ಜೀವನ, ಯಶಸ್ಸು, ವಿಫಲತೆ, ನಂಬಿಕೆ, ಪರಿಶ್ರಮ ಮತ್ತು ಕನಸುಗಳ ಕುರಿತಾದ ಈ ಉಕ್ತಿಗಳು ದಿನನಿತ್ಯದ ಜೀವನದಲ್ಲಿ ಸ್ಪೂರ್ತಿಯ ಮೂಲವಾಗಲಿವೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಅಥವಾ ಉದ್ಯಮಿಗಳು – ಎಲ್ಲರಿಗೂ ಈ ಮಾತುಗಳು ಮಾರ್ಗದರ್ಶಕ ಬೆಳಕಾಗುತ್ತವೆ.

ಮನಸ್ಸು ಕುಗ್ಗಿದಾಗ ಓದಿ, ಹೃದಯದಲ್ಲಿ ನಂಬಿಕೆಯನ್ನು ಬೆಳೆಸಿ, ನಿಮ್ಮ ಗುರಿಯತ್ತ ದೃಢವಾಗಿ ಹೆಜ್ಜೆ ಹಾಕಿ. ಈ ಉಕ್ತಿಗಳು ನಿಮ್ಮ ಜೀವನದ ಪ್ರತಿಯೊಂದು ಹಾದಿಯಲ್ಲೂ ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯನ್ನು ತುಂಬಲಿವೆ.

Positive Motivational Kannada Quotes with Images

motivation quotes kannada
motivation-life-quotes-Kannada
Kannada inspirational words
Inspirational-life- quotes-Kannada
Kannada inspirational quotes
kannada motivational quotes
Positive thinking quotes Kannada
kannada-motivation-image
Motivational status in Kannada

Kannada Life Motivational Quotes By Famous Person (ಪ್ರಸಿದ್ಧ ವ್ಯಕ್ತಿಗಳ ಪ್ರೇರಣಾದಾಯಕ quotes ಕನ್ನಡದಲ್ಲಿ )

ಸ್ಥಾನ, ಸಿರಿ, ಸಂಪತ್ತು ಶಾಶ್ವತವಲ್ಲ , ಪ್ರೀತಿ, ಅಭಿಮಾನ, ವಿಶ್ವಾಸ ಅಮರ
rajkumar
- ಡಾ.ರಾಜಕುಮಾರ್
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದ್ರೆ ,ಕನಸುಗಳೇ ಇಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ
girish kaarnad
- ಗಿರೀಶ್ ಕಾರ್ನಾಡ್
ಯಾವಾಗ ನಿಮ್ಮಲ್ಲಿರುವ 'ನಾನು' ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತೋ ಆವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ
kanakadasa
-ಕನಕದಾಸ
ಸಂತೋಷವನ್ನು ಹಂಚಿಕೊಳ್ಳುವುದರಿಂದ ಹೆಚ್ಚಾಗುತ್ತದೆ
vishnuvardhan
- ಡಾ.ವಿಷ್ಣುವರ್ಧನ್
ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೊ ಗೊಬ್ಬರವೂ ಅಷ್ಟೇ ಮುಖ್ಯ.
kuvempu
– ಕುವೆಂಪು
ಸತ್ತಾಗ ಮಲಗೋದು ಇದ್ದೇ ಇದೆ ಬದುಕಿದ್ದಾಗ ಏನಾದರೂ ಸಾಧಿಸು
shankarnag
- ಶಂಕರ್ ನಾಗ್
ವಿದ್ಯೆಯೊಂದಿದ್ದರೆ ನೀ ಗೆದ್ದಂತಲ್ಲ , ವಿನಯ, ಮೌಲ್ಯ ಎಂದಿಗೂ ಸೋಲುವುದಿಲ್ಲ
- ಪುನೀತ್ ರಾಜಕುಮಾರ್
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಲುಬಾರದು
basavanna
-ಬಸವಣ್ಣ
ನಮ್ಮ ಜೀವನದಲ್ಲಿ ಮೇಲಕ್ಕೆ ಬರಲು ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಅಗತ್ಯ
-ಸುಧಾಮೂರ್ತಿ

100 Best Life Motivational Kannada Quotes list

ನಿನ್ನ ಆತ್ಮಬಲವೇ ನಿನ್ನ ದೊಡ್ಡ ಶಕ್ತಿ 

ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕಿತ್ತು ಎಸೆಯಬೇಕು

ನಿನ್ನ ಯೋಗ್ಯತೆ ತಿಳಿದವರ ಜೊತೆಯಿರು , ಬೆಲೆ ಕಟ್ಟುವವರ ಜೊತೆಯಲ್ಲ 

ಗೆಲುವು ಎಲ್ಲರನ್ನು ನಮ್ಮ ಹತ್ತಿರ ಕರೆಯುತ್ತೆ, ಸೋಲು ಹಾಗಲ್ಲ, ನಮ್ಮವರು ಯಾರೆಂಬುದನ್ನು ತಿಳಿಸುತ್ತೆ 

ತುಳಿದ ಜಾಗದಲ್ಲೇ ಬೆಳೆದು ತೋರಿಸು 

ಇದ್ದದ್ದನ್ನು ಅನುಭವಿಸು, ಇಲ್ಲದಿದ್ದನ್ನ ಅನುಸರಿಸು 

ವಿದ್ಯೆ ಕಡಿಮೆ ಇದ್ದರು ಪರ್ವಾಗಿಲ್ಲ ನಡತೆ ಸರಿಯಾಗಿರಬೇಕು 

ನೀನು ಒಬ್ಬರಿಗೆ ಬುದ್ದಿ ಹೇಳುವ ಮೊದಲು ಅದೇ ಬುದ್ದಿ ನಿನ್ನಲ್ಲಿದೆಯಾ ಎಂದು ನೋಡಿಕೋ 

ಮೋಸ ತಪ್ಪಿನಿಂದ ಆಗುವುದಲ್ಲ , ಉದ್ದೇಶದಿಂದಲೇ ಆಗುವುದು 

ಕೆಲಸ ಮಾಡಿ ಹೆಸರು ಮಾಡಬೇಕು , ಇಲ್ಲ ಅಂದ್ರೆ ಹೆಸರು ಹೇಳಿದ್ರೆ ಕೆಲಸ ಆಗಬೇಕು 

ನಾಳೆ ಅಳಬಾರದು ಅಂದ್ರೆ , ಇವತ್ತು ಹಿರಿಯರ ಅನುಭವದ ಮಾತುಗಳಿಗೆ ನಾವು ಕಿವಿಗೊಡಬೇಕು 

ಜ್ಞಾನ ಅಧಿಕವಾದಷ್ಟು ಅಹಂಕಾರಿಯಾಗುತ್ತಾ ಹೋದರೆ ಆ ಜ್ಞಾನ ವಿಷದಂತೆ ಕೆಲಸ ಮಾಡುತ್ತದೆ

ಪ್ರಾರಂಭ ನಿನ್ನ ಹೆಸರಲ್ಲಿದ್ದರೆ, ಧೈರ್ಯವೂ ನಮ್ಮೊಳಗೇ ಹುಟ್ಟುತ್ತದೆ 

ಗೌರವ ಇಲ್ಲದ ಕಡೆ ನಮ್ಮ ಚಪ್ಪಲಿಯೂ ಹೋಗಬಾರದು 

ನೀವು ಬೆಲೆಯನ್ನು ನೋಡದೆ ವಸ್ತುಗಳನ್ನು ಖರೀದಿಸಲು ಬಯಸಿದರೆ , ಗಡಿಯಾರವನ್ನು ನೋಡದೆ ಕೆಲಸ ಮಾಡಿ 

ಕಷ್ಟದ ದಿನಗಳು ಕಳಿಸಿದ ಪಾಠವೇ ಜೀವನದ ಸತ್ಯ ಪಾಠ 

ಬುದ್ದಿವಂತಿಕೆಯಿಂದ ಮೋಸ ಮಾಡಿದವರು ಕಾಲ ಬಂದಾಗ ದಡ್ಡತನದಿಂದಲೇ ಮೋಸ ಹೋಗುವುದು ಖಚಿತ 

ಗೆಲ್ಲುವೆ ನೋಡುತ್ತಿರು ಜೇಬಲ್ಲಿ ಇರದ ಹಣವ ನಂಬಿ ಅಲ್ಲ,ಎದೆಯಲ್ಲಿ ಇರುವ ಹಠವ ನಂಬಿ 

ಶ್ರಮವಿಲ್ಲದ ಫಲ ಸದಾ ಹಾಳಾಗುವುದು 

ಚಿಂತಿಸುವುದು ಬಿಟ್ಟು “ಪ್ರಯತ್ನಿಸು” ಬದುಕು ಬಂಗಾರವಾಗುತ್ತೆ 

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ  

ಎಷ್ಟು ಸಂಪತ್ತು ಇದೆ ಎನ್ನುವುದಕ್ಕಿಂತ, ಎಷ್ಟು ಸಂತೊಷವಾಗಿದ್ದೀವಿ ಅನ್ನೋದು ಬಹಳ ಮುಖ್ಯ 

ಪ್ರಯತ್ನದಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದಲ್ಲಿ ದೊಡ್ಡ ಸೋಲು 

ನೀವು ಹೋರಾಡಲು ಧೈರ್ಯ ಮಾಡುವವರೆಗೆ ನಿಮ್ಮ ಶಕ್ತಿ ನಿಮಗೆ ತಿಳಿದಿರುವುದಿಲ್ಲ 

ತುಂಬಿದ ಜೇಬು ನೂರು ಆಟ ಆಡಿಸುತ್ತದೆ , ಖಾಲಿ ಜೇಬು ಸಾವಿರ ಪಾಠ ಕಲಿಸುತ್ತದೆ 

ವ್ಯಕ್ತಿತ್ವ ಮಹಾರಾಜನಂತಿರಲಿ, ಅಹಂಕಾರ ಸೇವಕನಂತೆ ಇರಲಿ ಆಗ ಆನಂದ ಮತ್ತು ಯಶಸ್ಸಿನ ಸಾಮ್ರಾಜ್ಯವನ್ನೇ ಕಟ್ಟಬಹುದು 

ಪ್ರಯತ್ನಪಟ್ಟು ಸೋತವರಿಗಿಂತ ಆತ್ಮವಿಶ್ವಾಸದ ಕೊರತೆಯಿಂದ ಸೋತವರೇ ಹೆಚ್ಚು 

ನಿದ್ರಿಸುತ್ತಿರುವಾಗಲು ನಿಮ್ಮ income ನಿಲ್ಲಬಾರದು, ಆ reetiya  ಕ್ಷೇತ್ರ ಹುಡುಕಿ  

ಸಾಧನೆಯ ಹಾದಿ ಬಲ್ಲವನೇ ಸಾಧನೆ ಮಾಡಬಲ್ಲ 

ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ , ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ 

ವಯಸ್ಸು ಯಾವುದೇ ಇರಲಿ , ಜೀವನ ಪ್ರತಿದಿನ ಒಂದಲ್ಲ ಒಂದು ಹೊಸ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ 

ಬೆಳೆಸಬೇಕು ಅನ್ನೋನು ಕೈ ಹಿಡೀತಾನೆ, ಬೀಳಿಸಬೇಕು ಅನ್ನೋನು ಕಾಲ್ ಹಿಡೀತಾನೆ 

ಬಯಸಿದ್ದೆಲ್ಲ ಸಿಕ್ಕರೆ ಅದು ದೇವರ ಪ್ರೀತಿ, ಎಷ್ಟೇ ಬಯಸಿದರು ಸಿಕ್ಕಿಲ್ಲ ಅಂದ್ರೆ ಅದು ದೇವರ ರಕ್ಷಣೆ 

ಬದುಕಿಗೆ ಒಬ್ಬ ಒಳ್ಳೆಯ ಗುರು ಇಲ್ಲವೆಂದು ಕೊರಗಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತವೆ 

ನೀವು ಅಂದುಕೊಂಡದ್ದನ್ನು ಸಾಧಿಸಲು ಗುಂಡಿಗೆಯೊಂದಿದ್ದರೆ ಸಾಲದು , ಸಮಯಕ್ಕೆ ಸರಿಯಾಗಿ ಉತ್ತಮ ನಿರ್ಧಾರ ಕೈಗೊಳ್ಳುವ ಗುಣ ಮತ್ತು ತಾಳ್ಮೆ ಬೇಕು 

ತಪ್ಪು ದೊಡ್ಡದ್ದು ಎನಿಸಿದರೆ ವ್ಯಕ್ತಿಯನ್ನು ಮರೆತುಬಿಡು, ವ್ಯಕ್ತಿ ದೊಡ್ಡವನು ಎನಿಸಿದರೆ ತಪ್ಪನ್ನು ಮರೆತುಬಿಡು 

ಉತ್ತಮವಾದದ್ದನ್ನು ಸಾಧಿಸಲು ಅತಿ ಕೆಟ್ಟದ್ದನ್ನೂ ನಿಭಾಯಿಸುವ ಸಾಮರ್ಥ್ಯವಿರಬೇಕು 

ತುಂಬಾ ತಡವಾದರೆ ತೆಗೆದುಕೊಳ್ಳುವ ನಿರ್ಧಾರವು ತಪ್ಪಾಗಬಹುದು 

ಸಾಧ್ಯವಾದರೆ ಯಾರಿಗಾದರೂ ಸಾರಥಿಗಳಾಗಿ , ನಾನು,ನನ್ನಿಂದಲೇ ಎನ್ನುವ ಸ್ವಾರ್ಥಿಗಳಾಗಬೇಡಿ 

ನೆನಪಿರಲಿ ಆರಂಭದಲ್ಲಿ ಆಗೋ ಖುಷಿಗಿಂತ ಅಂತ್ಯದಲ್ಲಿ ಆಗೋ ನೋವೇ ಜಾಸ್ತಿ 

ಒಬ್ಬ ಮನುಷ್ಯ ಬೆಳೆಯಬೇಕೆಂದರೆ ಮಿತ್ರ ಎದೆಯಲ್ಲಿರಬೇಕು, ಶತ್ರು ಎದುರಲ್ಲಿರಬೇಕು 

ಮದುವೆಯೆನೆಂಬ ನದಿಗೆ ಧುಮುಕುವ ಮುನ್ನ ಈಜುವುದನ್ನು ಕಲಿತುಕೊಳ್ಳುವುದು ಉತ್ತಮ 

ಯಾರೋ ನಡೆದ ಹೆದ್ದಾರಿಗಿಂತ ತಾನಾಗಿಯೇ ಸೃಷ್ಟಿಸಿಕೊಂಡ ಕಾಲ್ದಾರಿಯೆ ಅದ್ಭುತ 

success ಆದಾಗ party  ಕೇಳೋ ಜನ, ಕಷ್ಟದಲ್ಲಿದ್ದಾಗ phone  ಸಹ ಎತ್ತೋದಿಲ್ಲ  

ಯಾವ ಕೆಲ್ಸದಿಂದ ನಿಮ್ಮ ಜೀವನ ಸಾಗುತ್ತಿದೆಯೋ ಆ ಕೆಲಸದ ಬಗ್ಗೆ ಹೆಮ್ಮೆ ಮತ್ತು ಗೌರವ ಇರಬೇಕೆ ವಿನಃ ನಾಚಿಕೆಯಲ್ಲ 

ಕಳೆದುಕೊಂಡಮೇಲೆ ಪಶ್ಚತ್ತಾಪ ಪಡುವ ಬದಲು , ಕಳೆದು ಹೋಗದಂತೆ ನೋಡಿಕೊಳ್ಳುವುದು ಬುದ್ದಿವಂತಿಕೆ 

ನಿನ್ನಲ್ಲಿ ಒಳ್ಳೆಯ ಮನಸ್ಸಿದ್ದರೆ ಬೇರೆಯವರ ಶಾಪವು ಆಶೀರ್ವಾದವಾಗುತ್ತದೆ 

ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ , ಕೆಲವೊಮ್ಮೆ ಸುಮ್ಮನಿದ್ದು ಗಮನಿಸಬೇಕಾಗುತ್ತದೆ 

ಮನಸ್ಸು ಬದಲಾಯಿಸಿದರೆ ಅಭ್ಯಾಸ ಬದಲಾಗುವುದು , ಅಭ್ಯಾಸ ಬದಲಾದರೆ ಜೀವನ ಬದಲಾಗುತ್ತದೆ 

ಯಶಸ್ವಿ ಬದುಕಿಗಿಂತ ನೆಮ್ಮದಿಯ ಬದುಕು ಮುಖ್ಯ, ಏಕೆಂದರೆ ನಮ್ಮ ಯಶಸ್ಸನ್ನು ಅಳೆಯುವವರು ಬೇರೆಯವರು , ಆದರೆ ನಮ್ಮ ನೆಮ್ಮದಿಯನ್ನು ಅಳೆಯುವವರು ನಾವೇ!

DIfferent Kannada Quotes Categories

life kannada quotes
Kannada Life Quotes
kannada preeti love quotes
Love Quotes Kannada
hurt sad feeling-kannada quotes
Sad Kannada quotes
relationship quotes in kannada
Relationship Kannada Quotes
broken-love-failure-kannada-quotes
Breakup Kannada Quotes
bhagavadgite-kannada-quote
Bahagavdgite Quotes Kannada
@saadhaneya Kicchu
[instagram-feed feed=1]