ಪ್ರಮಾಣಪತ್ರಗಳು ಸೇವೆಗಳು: ಜನನ, ಮರಣ, ಆದಾಯ ಪ್ರಮಾಣಪತ್ರಗಳ ಸಂಪೂರ್ಣ ಮಾರ್ಗದರ್ಶಿ

ಸರ್ಕಾರಿ ಪ್ರಮಾಣಪತ್ರಗಳ ಸೇವೆಗಳು / Certificates ಮತ್ತು ನಾಗರಿಕ ಸೇವೆಗಳು / Civil Services ನಮ್ಮ ದೈನಂದಿನ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

ಪ್ರಮಾಣಪತ್ರಗಳು (Karnataka government certificate services) ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಕಾನೂನುಬದ್ಧ ಸ್ಥಿತಿಯನ್ನು ದೃಢೀಕರಿಸುವ ದಾಖಲೆಗಳಾಗಿದ್ದು. ಉದಾಹರಣೆಗೆ ವ್ಯಕ್ತಿಯ ಗುರುತಿನ ದೃಢೀಕರಣ,ಜನನ ಮತ್ತು ಮರಣ ಪ್ರಮಾಣಪತ್ರ (Birth and death certificate), ಆದಾಯ ಪ್ರಮಾಣಪತ್ರ (Income Certificate), ಜಾತಿ ಪ್ರಮಾಣಪತ್ರ (Caste Certificate), ಆಸ್ತಿ ಹಕ್ಕು, ಶಿಕ್ಷಣ, ಉದ್ಯೋಗ,ವಸತಿ ಪ್ರಮಾಣಪತ್ರ, ಆಸ್ತಿ ದಾಖಲೆಗಳು, ತೆರಿಗೆ ಪಾವತಿ ಸರ್ಕಾರಿ ಹಾಗೂ ಸರ್ಕಾರಿಯೇತರೆ ಯೋಜನೆಗಳ ಪ್ರಯೋಜನ ಪಡೆಯಲು ಪ್ರಮಾಣಪತ್ರಗಳು ಅವಶ್ಯಕವಾಗುತ್ತವೆ.

ನಾಗರಿಕ ಸೇವೆಗಳು / Civil Services ಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗ. ಇವುಗಳಲ್ಲಿ IAS, IPS, IFS ಮುಂತಾದ ಸೇವೆಗಳು ಸೇರಿವೆ. ನಾಗರಿಕ ಸೇವೆಗಳ ಮೂಲಕ ದೇಶದ ಆಡಳಿತ, ಕಾನೂನು-ಸುವ್ಯವಸ್ಥೆ, ಅಭಿವೃದ್ಧಿ ಯೋಜನೆಗಳು, ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಜಾರಿಗೊಳಿಸಲಾಗುತ್ತದೆ . ನಾಗರಿಕ ಸೇವಾಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಸರ್ಕಾರದ ನೀತಿಗಳನ್ನು ಜಾರಿಗೆ ತರುವಲ್ಲಿ, ಮತ್ತು ಸಮಾಜದ ಸಮಗ್ರ ಅಭಿವೃದ್ಧಿಗೆ ಭದ್ರತೆ ಹಾಗೂ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಒಟ್ಟಾರೆಯಾಗಿ ಪ್ರಮಾಣಪತ್ರಗಳು (Karnataka government certificates) ವ್ಯಕ್ತಿಯ ಗುರುತಿನ ಮತ್ತು ಹಕ್ಕಿನ ದೃಢೀಕರಣಕ್ಕೆ ಅವಶ್ಯಕವಾಗಿದ್ದು, ನಾಗರಿಕ ಸೇವೆಗಳು ಸಮಾಜದ ಆಡಳಿತ ಮತ್ತು ಅಭಿವೃದ್ಧಿಗೆ ಅವಿಭಾಜ್ಯ ಅಂಗ. ಇವೆರಡೂ ಒಟ್ಟಾಗಿ ನಾಗರಿಕರ ಜೀವನವನ್ನು ಸುಗಮಗೊಳಿಸುತ್ತವೆ ಮತ್ತು ದೇಶದ ಪ್ರಗತಿಗೆ ಬುನಾದಿ ಹಾಕುತ್ತವೆ.

ಇತ್ತೀಚಿನ ದಿನಗಳಲ್ಲಿ, ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಡಿಜಿಟಲ್ ಸೇವೆಗಳು ಹೆಚ್ಚಾಗಿವೆ. “ಕಾವೇರಿ ಆನ್‌ಲೈನ್ ಸರ್ವೀಸ್“, “ಭೂಮಿ ಪೋರ್ಟಲ್”, “ಸೇವಾ ಸಿಂಧು” ಮುಂತಾದ ಆನ್‌ಲೈನ್ ವೇದಿಕೆಗಳ ಮೂಲಕ ನಾಗರಿಕರು ತಮ್ಮ ಪ್ರಮಾಣಪತ್ರಗಳನ್ನು ಹಾಗೂ ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು.

ಬನ್ನಿ, ಸರ್ಕಾರ ನೀಡುವ  ವಿವಿಧ ಪ್ರಮಾನಪತ್ರಗಳ ಬಗ್ಗೆ ಕೆಳಗೆ ವಿವರವಾಗಿ ತಿಳಿಯೊಣ. 

ಪ್ರಮಾಣಪತ್ರಗಳು ಸೇವೆಗಳು: ಜನನ, ಮರಣ ಹಾಗೂ ಆದಾಯ ಪ್ರಮಾಣಪತ್ರಗಳಿಗೆ ಆನ್‌ಲೈನ್ ಅರ್ಜಿ, ಡೌನ್‌ಲೋಡ್ ಮತ್ತು ಆಫ್‌ಲೈನ್ ಪ್ರಕ್ರಿಯೆ ಸಂಪೂರ್ಣ ಮಾಹಿತಿ (Certificate Cervices)

1. ಜನನ ಪ್ರಮಾಣಪತ್ರ (Birth Certificate) 

ಜನನ ಪ್ರಮಾಣಪತ್ರವು ವ್ಯಕ್ತಿಯ ಜನ್ಮದ ದಿನಾಂಕ, ಸ್ಥಳ, ಮತ್ತು ಪೋಷಕರ ವಿವರಗಳನ್ನು ದೃಢೀಕರಿಸುವ ಕಾನೂನುಬದ್ಧ ದಾಖಲೆ.ಇದು ಗುರುತಿನ ದಾಖಲೆ ಆಗಿ ಸಹ ಬಳಸಲಾಗುತ್ತದೆ ಮತ್ತು ಶಾಲಾ ಪ್ರವೇಶ, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಅತ್ಯಂತ ಅಗತ್ಯ.

ಆನ್‌ಲೈನ್ ಮೂಲಕ ಪಡೆಯುವ ವಿಧಾನ

  1. ಕರ್ನಾಟಕ ಸರ್ಕಾರದ e-Janma ಪೋರ್ಟಲ್ (https://ejanma.karnataka.gov.in) ಗೆ ಹೋಗಿ.
  2. Citizen Services ವಿಭಾಗದಲ್ಲಿ Birth Certificate ಆಯ್ಕೆ ಮಾಡಿ.
  3. ಜಿಲ್ಲೆ, ತಾಲ್ಲೂಕು, ಗ್ರಾಮ/ನಗರ, ಜನ್ಮ ದಿನಾಂಕ, ಮಗುವಿನ ಹೆಸರು, ಪೋಷಕರ ಹೆಸರು ಮುಂತಾದ ವಿವರಗಳನ್ನು ನಮೂದಿಸಿ.
  4. Search ಮಾಡಿದ ನಂತರ, ಜನನ ಪ್ರಮಾಣಪತ್ರದ ವಿವರಗಳು ಕಾಣಿಸುತ್ತವೆ.
  5. Download / Print ಆಯ್ಕೆ ಮಾಡಿ ಪ್ರಮಾಣಪತ್ರವನ್ನು ಪಡೆಯಬಹುದು.

ಜನನ ಪ್ರಮಾಣಪತ್ರ ಪಡೆಯಲು ಬೇಕಾಗುವ ಮಾಹಿತಿ

  • ಮಗುವಿನ ಹೆಸರು (ಅಥವಾ ಪೋಷಕರ ಹೆಸರು)
  • ಜನ್ಮ ದಿನಾಂಕ
  • ಜನ್ಮ ಸ್ಥಳ (ಆಸ್ಪತ್ರೆ/ಮನೆ)
  • ಜಿಲ್ಲೆ, ತಾಲ್ಲೂಕು, ನಗರ/ಗ್ರಾಮ ವಿವರಗಳು

2. ಮರಣ ಪ್ರಮಾಣಪತ್ರ (Death Certificate)

ಮರಣ ಪ್ರಮಾಣಪತ್ರವು ವ್ಯಕ್ತಿಯ ಮರಣದ ದಿನಾಂಕ, ಸ್ಥಳ, ಹಾಗೂ ಕಾರಣವನ್ನು ದೃಢೀಕರಿಸುವ ಕಾನೂನುಬದ್ಧ ದಾಖಲೆ.ಇದು ಅತ್ಯಂತ ಮುಖ್ಯ ದಾಖಲೆ ಆಗಿದ್ದು, ಆಸ್ತಿ ಹಸ್ತಾಂತರ, ಬ್ಯಾಂಕ್ ಖಾತೆ ಮುಚ್ಚುವುದು, ವಿಮಾ ದಾವೆ, ಪಿಂಚಣಿ, ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಅಗತ್ಯ.

ವಿಶೇಷ ಸೂಚನೆ ವ್ಯಕ್ತಿಯು ಮರಣ ಹೊಂದಿದ 20 ದಿನಗಳ ಒಳಗೆ ಮೃತ ವ್ಯಕ್ತಿಯ ವಿವರಗಳನ್ನು ಸಂಭಂದಪಟ್ಟ ಪಂಚಾಯತ್ ಕಚೇರಿಯಲ್ಲಿ ನೋಂದಾಯಿಸಬೇಕು ಅಲ್ಲಿ ಉಚಿತವಾಗಿ ಮರಣ ಪ್ರಮಾಣ ಪತ್ರ ನೀಡಲಾಗುವುದು 20 ದಿನಗಳು ಮೇಲ್ಪಟ್ಟರೆ ಸಣ್ಣ ಪ್ರಮಾಣದ ದಂಡವನ್ನು ಪಾವತಿಸಬಹುದು.

ಕಚೇರಿಗಳಲ್ಲಿ ನೋಂದಾಯಿಸದ ಹಳೆಯ ಅಥವಾ ಪೂರ್ವಜರ ಮರಣ ಪ್ರಮಾಣಪತ್ರ ಪತ್ರ ಪಡೆಯಲು ಕಾನೂನು ಸಹಾಯ ಪಡೆಯಬೇಕು.

ಆನ್‌ಲೈನ್ ಮೂಲಕ ಮರಣ ಪ್ರಮಾಣಪತ್ರ ಪಡೆಯುವ ವಿಧಾನ

  1. e-Janma Karnataka Portal (https://ejanma.karnataka.gov.in) ಗೆ ಹೋಗಿ.
  2. Citizen Services ವಿಭಾಗದಲ್ಲಿ Death Certificate ಆಯ್ಕೆ ಮಾಡಿ.
  3. ಜಿಲ್ಲೆ, ತಾಲ್ಲೂಕು, ಗ್ರಾಮ/ನಗರ, ಮರಣ ದಿನಾಂಕ, ಮೃತ ವ್ಯಕ್ತಿಯ ಹೆಸರು, ಪೋಷಕರ/ಪತ್ನಿ/ಪತಿ ಹೆಸರು ಮುಂತಾದ ವಿವರಗಳನ್ನು ನಮೂದಿಸಿ.
  4. Search ಮಾಡಿದ ನಂತರ, ಮರಣ ಪ್ರಮಾಣಪತ್ರದ ವಿವರಗಳು ಕಾಣಿಸುತ್ತವೆ.
  5. Download / Print ಆಯ್ಕೆ ಮಾಡಿ ಪ್ರಮಾಣಪತ್ರವನ್ನು ಪಡೆಯಬಹುದು.

ಮರಣ ಪ್ರಮಾಣಪತ್ರ ಪಡೆಯಲು ಬೇಕಾಗುವ ಮಾಹಿತಿ

  • ಮೃತ ವ್ಯಕ್ತಿಯ ಹೆಸರು
  • ಮರಣ ದಿನಾಂಕ
  • ಮರಣ ಸ್ಥಳ (ಆಸ್ಪತ್ರೆ/ಮನೆ)
  • ಜಿಲ್ಲೆ, ತಾಲ್ಲೂಕು, ನಗರ/ಗ್ರಾಮ ವಿವರಗಳು. ಇತ್ಯಾದಿ 

3. ಜಾತಿ ಪ್ರಮಾಣಪತ್ರ (Caste Certificate)

seva sindhu portal

ಜಾತಿ ಪ್ರಮಾಣಪತ್ರವು ವ್ಯಕ್ತಿಯ ಸಮುದಾಯ/ಜಾತಿಯನ್ನು ದೃಢೀಕರಿಸುವ ಕಾನೂನುಬದ್ಧ ದಾಖಲೆಯಾಗಿದೆ.ಇದು ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು, ಮೀಸಲಾತಿ, ವಿದ್ಯಾರ್ಥಿವೇತನ, ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಅತ್ಯಗತ್ಯ.

ಜಾತಿ ಪ್ರಮಾಣಪತ್ರವನ್ನು  ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು ಅಥವಾ ನೆಮ್ಮದಿ ಕೇಂದ್ರದಲ್ಲಿ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಆನ್‌ಲೈನ್ ಮೂಲಕ ಪಡೆಯುವ ವಿಧಾನ

  1. Seva Sindhu Portal (https://sevasindhu.karnataka.gov.in) ಗೆ ಹೋಗಿ.
  2. Apply for Caste Certificate ಆಯ್ಕೆ ಮಾಡಿ.
  3. ಅರ್ಜಿದಾರರ ವಿವರಗಳನ್ನು ನಮೂದಿಸಿ:
    • ಹೆಸರು
    • ಜನ್ಮ ದಿನಾಂಕ
    • ವಿಳಾಸ
    • ಪೋಷಕರ ಹೆಸರು
    • ಜಾತಿ/ಸಮುದಾಯ ವಿವರ
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಉದಾ: ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಪೋಷಕರ ಜಾತಿ ಪ್ರಮಾಣಪತ್ರ).
  5. ಅರ್ಜಿ ಸಲ್ಲಿಸಿದ ನಂತರ, ತಹಶೀಲ್ದಾರ್ ಕಚೇರಿ ಪರಿಶೀಲನೆ ನಡೆಸುತ್ತದೆ.
  6. Approved ಆದ ನಂತರ, ಪ್ರಮಾಣಪತ್ರವನ್ನು Download / Print ಮಾಡಬಹುದು.

ಬೇಕಾಗುವ ದಾಖಲೆಗಳು

  • ಜನನ ಪ್ರಮಾಣಪತ್ರ / ಶಾಲಾ ದಾಖಲೆ
  • ಪೋಷಕರ ಜಾತಿ ಪ್ರಮಾಣಪತ್ರ
  • ಆಧಾರ್ ಕಾರ್ಡ್ / ಗುರುತಿನ ಚೀಟಿ
  • ವಿಳಾಸ ದೃಢೀಕರಣ (Ration Card, Voter ID, Electricity Bill)

4. ಆದಾಯ ಪ್ರಮಾಣಪತ್ರ (Income Certificate)

ಆದಾಯ ಪ್ರಮಾಣಪತ್ರವು ವ್ಯಕ್ತಿಯ ಅಥವಾ ಕುಟುಂಬದ ವಾರ್ಷಿಕ ಆದಾಯವನ್ನು ದೃಢೀಕರಿಸುವ ಕಾನೂನುಬದ್ಧ ದಾಖಲೆಯಾಗಿದ್ದು. ಇದರಿಂದ ಶಿಕ್ಷಣ, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು, ಮೀಸಲಾತಿ, ಸಾಲ ಸೌಲಭ್ಯ, ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳ ಸೇವೆ ಪಡೆಯಬಹುದು.

ಆದಾಯ ಪ್ರಮಾಣಪತ್ರವನ್ನು  ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು ಅಥವಾ ನೆಮ್ಮದಿ ಕೇಂದ್ರದಲ್ಲಿ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಆನ್‌ಲೈನ್ ಮೂಲಕ ಪಡೆಯುವ ವಿಧಾನ

  1. Seva Sindhu Portal (https://sevasindhu.karnataka.gov.in) ಗೆ ಹೋಗಿ.
  2. Apply for Income Certificate ಆಯ್ಕೆ ಮಾಡಿ.
  3. ಅರ್ಜಿದಾರರ ವಿವರಗಳನ್ನು ನಮೂದಿಸಿ:
    • ಹೆಸರು
    • ಜನ್ಮ ದಿನಾಂಕ
    • ವಿಳಾಸ
    • ಕುಟುಂಬದ ಸದಸ್ಯರ ವಿವರ
    • ಆದಾಯ ಮೂಲ (ಉದ್ಯೋಗ, ಕೃಷಿ, ವ್ಯಾಪಾರ ಇತ್ಯಾದಿ)
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಉದಾ: ವೇತನ ಸ್ಲಿಪ್, ಬ್ಯಾಂಕ್ ಪಾಸ್‌ಬುಕ್, ತೆರಿಗೆ ದಾಖಲೆ).
  5. ಅರ್ಜಿ ಸಲ್ಲಿಸಿದ ನಂತರ, ತಹಶೀಲ್ದಾರ್ ಕಚೇರಿ ಪರಿಶೀಲನೆ ನಡೆಸುತ್ತದೆ.
  6. Approved ಆದ ನಂತರ, ಪ್ರಮಾಣಪತ್ರವನ್ನು Download / Print ಮಾಡಬಹುದು.

ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್ / ಗುರುತಿನ ಚೀಟಿ
  • ವಿಳಾಸ ದೃಢೀಕರಣ (Ration Card, Voter ID, Electricity Bill)
  • ಆದಾಯದ ಸಾಕ್ಷ್ಯ (Salary Slip, Bank Statement, IT Return)
  • ಕುಟುಂಬದ ವಿವರಗಳು

5. ವಾಸಸ್ಥಳ / ನಿವಾಸ ಪ್ರಮಾಣಪತ್ರ (Domicile / Residence Certificate)

ವಾಸಸ್ಥಳ ಪ್ರಮಾಣಪತ್ರವು ವ್ಯಕ್ತಿ ನಿರ್ದಿಷ್ಟ ರಾಜ್ಯ ಅಥವಾ ಜಿಲ್ಲೆಯಲ್ಲಿ ಶಾಶ್ವತವಾಗಿ ವಾಸಿಸುತ್ತಿದ್ದಾನೆ ಎಂಬುದನ್ನು ದೃಢೀಕರಿಸುವ ದಾಖಲೆ.ಇದು ಸಹ  ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು, ವಿದ್ಯಾರ್ಥಿವೇತನ, ಮೀಸಲಾತಿ, ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಅಗತ್ಯ.

ವಾಸಸ್ಥಳ ಪ್ರಮಾಣಪತ್ರವನ್ನು  ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು ಅಥವಾ ನೆಮ್ಮದಿ ಕೇಂದ್ರದಲ್ಲಿ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.

ಆನ್‌ಲೈನ್ ಮೂಲಕ ಪಡೆಯುವ ವಿಧಾನ

  1. Seva Sindhu Portal (https://sevasindhu.karnataka.gov.in) ಗೆ ಹೋಗಿ.
  2. Apply for Residence / Domicile Certificate ಆಯ್ಕೆ ಮಾಡಿ.
  3. ಅರ್ಜಿದಾರರ ವಿವರಗಳನ್ನು ನಮೂದಿಸಿ:
    • ಹೆಸರು
    • ಜನ್ಮ ದಿನಾಂಕ
    • ವಿಳಾಸ
    • ಪೋಷಕರ ಹೆಸರು
    • ವಾಸಸ್ಥಳದ ಅವಧಿ (ಎಷ್ಟು ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿದ್ದೀರಿ)
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಉದಾ: Ration Card, Voter ID, Electricity Bill, Aadhaar Card).
  5. ಅರ್ಜಿ ಸಲ್ಲಿಸಿದ ನಂತರ, ತಹಶೀಲ್ದಾರ್ ಕಚೇರಿ ಪರಿಶೀಲನೆ ನಡೆಸುತ್ತದೆ.
  6. Approved ಆದ ನಂತರ, ಪ್ರಮಾಣಪತ್ರವನ್ನು Download / Print ಮಾಡಬಹುದು.

ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್ / ಗುರುತಿನ ಚೀಟಿ
  • ವಿಳಾಸ ದೃಢೀಕರಣ (Ration Card, Voter ID, Electricity Bill)
  • ಜನನ ಪ್ರಮಾಣಪತ್ರ / ಶಾಲಾ ದಾಖಲೆ
  • ಪೋಷಕರ ವಿವರಗಳು

ಹಿನ್ನುಡಿ

ಜನನ, ಮರಣ ಮತ್ತು ಆದಾಯ ಪ್ರಮಾಣಪತ್ರಗಳು ಪ್ರತಿಯೊಬ್ಬ ನಾಗರಿಕನಿಗೂ ಅವಶ್ಯಕ ದಾಖಲೆಗಳಾಗಿವೆ. ಸರಿಯಾದ ಮಾಹಿತಿಯೊಂದಿಗೆ ನೀವು ಸುಲಭವಾಗಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರಮಾಣಪತ್ರಗಳನ್ನು ಪಡೆಯಬಹುದು. ಸರ್ಕಾರದ ಡಿಜಿಟಲ್ ಸೇವೆಗಳ ಮೂಲಕ ಸಮಯ ಮತ್ತು ಶ್ರಮವನ್ನು ಉಳಿಸಬಹುದು. ಮೇಲ್ಕಂಡ ವಿವರಗಳನ್ನು ಅನುಸರಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿದರೆ ಯಾವುದೇ ತೊಂದರೆ ಇಲ್ಲದೆ ಪ್ರಮಾಣಪತ್ರಗಳನ್ನು ಪಡೆಯಬಹುದು.

ಇಂತಹ ಸರ್ಕಾರಿ ಸೇವೆಗಳ ಬಗ್ಗೆ ನಿಖರ ಮತ್ತು ನವೀಕೃತ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ನ್ನು ನಿಯಮಿತವಾಗಿ ಭೇಟಿ ಮಾಡಿ.

ಸಾಮಾನ್ಯ ಪ್ರಶ್ನೆಗಳು  (Frequently Asked Questions)

1. ಜನನ ಪ್ರಮಾಣಪತ್ರಕ್ಕೆ (Birth  Certificate ) ಹೇಗೆ ಅರ್ಜಿ ಸಲ್ಲಿಸಬಹುದು?

ಜನನ ಪ್ರಮಾಣಪತ್ರವನ್ನು ಗ್ರಾಮ ಪಂಚಾಯತ್, ನಗರಸಭೆ ಅಥವಾ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಆನ್‌ಲೈನ್ ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸುವ ಅವಕಾಶ ಇದೆ.

2. ಮರಣ ಪ್ರಮಾಣಪತ್ರ (Death Certificate) ಪಡೆಯಲು ಯಾವ ದಾಖಲೆಗಳು ಬೇಕು?

ಮರಣ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆಯ ಮರಣ ವರದಿ, ಗುರುತಿನ ಚೀಟಿ ಮತ್ತು ಸಂಬಂಧಿತ ವಿವರಗಳು ಅಗತ್ಯವಾಗುತ್ತವೆ.

3. ಆದಾಯ ಪ್ರಮಾಣಪತ್ರ ಪಡೆಯಲು ಅಗತ್ಯ ದಾಖಲೆಗಳು ಯಾವುವು?

ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಾಸಸ್ಥಳದ ದಾಖಲೆ, ಕುಟುಂಬದ ಆದಾಯ ವಿವರಗಳು ಮತ್ತು ಪಾಸ್‌ಪೋರ್ಟ್ ಸೈಸ್ ಫೋಟೋ ಸಾಮಾನ್ಯವಾಗಿ ಬೇಕಾಗುತ್ತದೆ.

4. ವಾಸಸ್ಥಳ / ನಿವಾಸ ಪ್ರಮಾಣಪತ್ರವನ್ನು ಎಲ್ಲಿ ಪಡೆಯಬಹುದು?

ತಹಶೀಲ್ದಾರ್ ಕಚೇರಿ, ನಾಡ ಕಚೇರಿ ಅಥವಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ಮೂಲಕವೂ ಸೌಲಭ್ಯ ಲಭ್ಯವಿದೆ.

5. ಆನ್‌ಲೈನ್ ಮೂಲಕ ಪ್ರಮಾಣಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

ಸರ್ಕಾರದ ಅಧಿಕೃತ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ ಅರ್ಜಿ ಸಂಖ್ಯೆ (Application number ) ಅಥವಾ ನೋಂದಣಿ ಸಂಖ್ಯೆಯನ್ನು (Registered number ) ನಮೂದಿಸಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

6. ಪ್ರಮಾಣಪತ್ರಗಳಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ಶುಲ್ಕ ರಾಜ್ಯ ಮತ್ತು ಸೇವೆಯ ಪ್ರಕಾರ ಬದಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಪ್ರಮಾಣದ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.

7. ಅರ್ಜಿ ಸಲ್ಲಿಸಿದ ನಂತರ ಪ್ರಮಾಣಪತ್ರ ಪಡೆಯಲು ಎಷ್ಟು ದಿನ ಬೇಕು?

ಸಾಮಾನ್ಯವಾಗಿ 3 ರಿಂದ 15 ಕೆಲಸದ ದಿನಗಳೊಳಗೆ ಪ್ರಮಾಣಪತ್ರ ನೀಡಲಾಗುತ್ತದೆ. ಆದರೆ ಸ್ಥಳೀಯ ಆಡಳಿತದ ಪ್ರಕಾರ ಸಮಯ ಬದಲಾಗಬಹುದು.

8. ಅರ್ಜಿಯ ಸ್ಥಿತಿಯನ್ನು (Application Status) ಹೇಗೆ ಪರಿಶೀಲಿಸಬಹುದು?

ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಂಖ್ಯೆ ನಮೂದಿಸಿ ಸ್ಟೇಟಸ್ ಪರಿಶೀಲಿಸಬಹುದು ಅಥವಾ ಸಂಬಂಧಿತ ಕಚೇರಿಯನ್ನು ಸಂಪರ್ಕಿಸಬಹುದು.

9. ತಪ್ಪು ಮಾಹಿತಿ ಇರುವ ಪ್ರಮಾಣಪತ್ರವನ್ನು ಸರಿಪಡಿಸಲು ಏನು ಮಾಡಬೇಕು?

ಸಂಬಂಧಿತ ಕಚೇರಿಗೆ ಸರಿಪಡಿಸುವ ಅರ್ಜಿ ( Correction Form ) ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಬೇಕು.

10. ಪ್ರಮಾಣಪತ್ರ ಕಳೆದುಹೋದರೆ ಡುಪ್ಲಿಕೇಟ್ ಹೇಗೆ ಪಡೆಯಬಹುದು?

ಅಧಿಕೃತ ಪೋರ್ಟಲ್ ಮೂಲಕ ಅಥವಾ ಕಚೇರಿಯಲ್ಲಿ ಮರುಅರ್ಜಿಯನ್ನು ಸಲ್ಲಿಸಿ ಡುಪ್ಲಿಕೇಟ್ ಪ್ರತಿಯನ್ನು ಪಡೆಯಬಹುದು.

KannadapediaAdmin

ನಾನು ಒಬ್ಬ ವಿಷಯ ಲೇಖಕ, ಪ್ರಸ್ತುತ ವಿಷಯಗಳು, ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಪ್ರವಾಸ ಬ್ಲಾಗ್‌ಗಳು, ಆಹಾರ ಲೇಖನಗಳು ಮತ್ತು ಪ್ರೇರಣಾದಾಯಕ ಉಕ್ತಿಗಳ ಕುರಿತು ಬರೆಯುತ್ತೇನೆ. ಓದುಗರಿಗೆ ಉಪಯುಕ್ತ ಮತ್ತು ಪ್ರೇರಣಾದಾಯಕ ಮಾಹಿತಿಯನ್ನು ಹಂಚಿಕೊಳ್ಳುವುದು ನನ್ನ ಆಸಕ್ತಿ.

@saadhaneya Kicchu
[instagram-feed feed=1]