
ಪರಿಚಯ
ಪ್ರತಿಯೊಬ್ಬ ವ್ಯಕ್ತಿಯ ತನ್ನ ಭೂಮಿ ಮತ್ತು ಆಸ್ತಿಯ ಆರ್ಥಿಕ ಭದ್ರತೆ, ಸಾಮಾಜಿಕ ಸ್ಥಾನಮಾನ ಮತ್ತು ಭವಿಷ್ಯದ ಕನಸುಗಳನ್ನು ಕಟ್ಟುವ ಸೇತುವೆಯೇ ಸರ್ಕಾರದ “ಭೂಮಿ ಮತ್ತು ಆಸ್ತಿ ಸೇವೆಗಳು”.(karnataka government land and property online services) ಇವು ಕೇವಲ ಆಸ್ತಿ ವ್ಯವಹಾರಗಳಲ್ಲ, ಬದಲಿಗೆ ಜನರ ಬದುಕಿಗೆ ನಂಬಿಕೆ, ಭದ್ರತೆ ಮತ್ತು ಸುಸ್ಥಿರತೆ ನೀಡುವ ಸುರಕ್ಷಿತ ಸೇವೆಗಳು.
ಭೂಮಿ ಮತ್ತು ಆಸ್ತಿ ಸೇವೆಗಳು ಮಾನವ ಜೀವನದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಮುಖ ಅಂಶವಾಗಿದೆ.ಏಕೆಂದರೆ ಭೂಮಿ ಕೇವಲ ಪ್ರಕೃತಿಯ ಸಂಪತ್ತು ಮಾತ್ರವಲ್ಲದೆ ಅದು ಮಾನವನ ಬದುಕಿನ ಭದ್ರತೆ, ಹೂಡಿಕೆ ಮತ್ತು ಭವಿಷ್ಯದ ಕನಸುಗಳನ್ನು ಕಟ್ಟುವ ಆಧಾರವಾಗಿದೆ. ಆಸ್ತಿ ಎಂದರೆ ಮನೆ, ಜಮೀನು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು ಮುಂತಾದವುಗಳನ್ನು ಒಳಗೊಂಡಿದ್ದು, ಇವುಗಳ ನಿರ್ವಹಣೆ, ಖರೀದಿ, ಮಾರಾಟ ಮತ್ತು ಹೂಡಿಕೆ ಪ್ರಕ್ರಿಯೆಗಳು ಸರ್ಕಾರದ “ಭೂಮಿ ಮತ್ತು ಆಸ್ತಿ ಸೇವೆಗಳು” ಎಂಬ ಕ್ಷೇತ್ರದ ಅಡಿಯಲ್ಲಿ ಬರುತ್ತವೆ.
ಈ ಸೇವೆಗಳು ಜನರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಭೂಮಿ ಅಥವಾ ಆಸ್ತಿಯನ್ನು ಹುಡುಕಲು, ಕಾನೂನುಬದ್ಧ ದಾಖಲೆಗಳನ್ನು ನಿರ್ವಹಿಸಲು, ಪರಿಶೀಲಿಸಲು, ಹೂಡಿಕೆ ಮಾಡಲು ಮತ್ತು ಭದ್ರತೆಯೊಂದಿಗೆ ಆಸ್ತಿಯನ್ನು ಹೊಂದಲು ಸಹಾಯ ಮಾಡುತ್ತವೆ. ಹಿಂದಿನಿಂದಲೂ ಸಮಾಜದಲ್ಲಿ ಭೂಮಿಮತ್ತು ಆಸ್ತಿ ಸೇವೆಗಳು ಕೇವಲ ಖರೀದಿ ಮತ್ತು ಮಾರಾಟದ ಮಟ್ಟಕ್ಕೆ ಸೀಮಿತವಾಗಿಲ್ಲದೆ ಅವುಗಳಲ್ಲಿ ಜೀವನ ನಿರ್ವಹಣೆ, ಮೌಲ್ಯಮಾಪನ, ಯೋಜನೆಗಳನ್ನು ರೂಪಿಸುವುದು, ಬಾಡಿಗೆ ವ್ಯವಸ್ಥೆ ಮತ್ತು ಹೂಡಿಕೆ ಸಂಭದಿತ ಸೇವೆಗಳು ಸೇರಿವೆ.
ಅಲ್ಲದೇ , ಭೂಮಿ ಮತ್ತು ಆಸ್ತಿ ಸೇವೆಗಳು ಹೂಡಿಕೆದಾರರಿಗೆ ಭವಿಷ್ಯದ ಲಾಭದಾಯಕ ಅವಕಾಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಭೂಮಿ ಖರೀದಿಸುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ಮೌಲ್ಯವನ್ನು ನೀಡಬಹುದು. ಇಂತಹ ವಿಷಯಗಳಿಗೆ ತಕ್ಕಮಟ್ಟಿಗೆ ಮಾರ್ಗದರ್ಶನ ನೀಡುವುದು ಆಸ್ತಿ ಸೇವೆಗಳ ಪ್ರಮುಖ ಸೇವೆಯಾಗಿದೆ.
ಕರ್ನಾಟಕ ಸರ್ಕಾರವು ಭೂಮಿ ಮತ್ತು ಆಸ್ತಿ ಸೇವೆಗಳಿಗೆ ಸಂಭದಿಸಿದಂತೆ ಕೆಳಗೆ ವಿವರಿಸುವ ಸೇವೆಗಳಿಂದ ನಾಗರಿಕರಿಗೆ ಭೂಮಿ ಮತ್ತು ಆಸ್ತಿ ಸಂಭದಿತ ಸೇವೆಗಳನ್ನು ಒದಗಿಸುತ್ತದೆ.
ಕರ್ನಾಟಕ ಸರ್ಕಾರದ ಪ್ರಮುಖ ಭೂಮಿ ಮತ್ತು ಆಸ್ತಿ ಡಿಜಿಟಲ್ ಸೇವೆಗಳು
| ಸೇವೆಯ ಹೆಸರು | ಈ ಸೇವೆಯಿಂದ ಏನು ಲಾಭ? | ಸೇವೆಯ ಪ್ರಕಾರ |
| ಭೂಮಿ RTC (ಪಹಣಿ) ಆನ್ಲೈನ್ | ಭೂಮಿಯ ಮಾಲೀಕ ಯಾರು, ಬೆಳೆ ವಿವರಗಳು, ಸರ್ವೇ ನಂಬರ್ ಮಾಹಿತಿ ನೋಡಬಹುದು ಮತ್ತು ಡೌನ್‌ಲೋಡ್ ಮಾಡಬಹುದು | ಗ್ರಾಮೀಣ ಭೂಮಿ ದಾಖಲೆ |
| ಕಾವೇರಿ ಆನ್ಲೈನ್ ಸೇವೆಗಳು | ಆಸ್ತಿ ನೋಂದಣಿ ಮಾಡಲು, ಸ್ಲಾಟ್ ಬುಕ್ ಮಾಡಲು, ಸ್ಟ್ಯಾಂಪ್ ಡ್ಯೂಟಿ ಮತ್ತು ಶುಲ್ಕ ಪಾವತಿಸಲು ಉಪಯೋಗ | ಆಸ್ತಿ ನೋಂದಣಿ ಸೇವೆ |
| ಎನ್ಕಂಬ್ರನ್ಸ್ ಪ್ರಮಾಣಪತ್ರ (EC) | ಆಸ್ತಿಗೆ ಸಾಲ ಇದೆಯೇ, ಕಾನೂನು ಸಮಸ್ಯೆ ಇದೆಯೇ ಎಂದು ತಿಳಿಯಲು ಸಹಾಯ | ಆಸ್ತಿ ಕಾನೂನು ಮಾಹಿತಿ |
| ನಗರ ಆಸ್ತಿ ದಾಖಲೆಗಳು | ನಗರದಲ್ಲಿನ ಮನೆ/ಸೈಟ್ ಮಾಲೀಕತ್ವ ಮತ್ತು ಖಾತಾ ಮಾಹಿತಿ ಪಡೆಯಲು | ನಗರ ಆಸ್ತಿ ಸೇವೆ |
| ಭೂಮಿ ಮ್ಯೂಟೇಶನ್ ಸ್ಥಿತಿ | ಭೂಮಿ ಮಾರಾಟ ಅಥವಾ ವರ್ಗಾವಣೆ ಆದ ನಂತರ ಹೆಸರು ಬದಲಾವಣೆ ಸ್ಥಿತಿ ನೋಡಲು | ಮಾಲೀಕತ್ವ ಬದಲಾವಣೆ |
1. ಭೂಮಿ RTC “ಪಹಣಿ“

RTC (Record of Rights, Tenancy and Crops) ಅಥವಾ ಇದನ್ನು ಕನ್ನಡದಲ್ಲಿ “ಪಹಣಿ” ಎಂದು ಕರೆಯಲಾಗುತ್ತದೆ.
ಪಹಣಿಯು ಜಮೀನು ಹಕ್ಕು, ಬಾಡಿಗೆ ಮತ್ತು ಬೆಳೆಗಳು, ನೀರಾವರಿ, ಮಣ್ಣಿನ ಮಾದರಿ, ಭೂಮಿಗೆ ಸಂಭಂದಿತ ಸಾಲದ ಹಾಗೂ ಯೋಜನೆಗಳು ಎಲ್ಲವನ್ನೂ ಒಳಗೊಂಡ ಮಾಹಿತಿ ನೀಡುವ ಪ್ರಮುಖ ದಾಖಲೆ.
ಕರ್ನಾಟಕ ಸರ್ಕಾರವು 2000 ಇಸವಿ ಇಂದ “ಭೂಮಿ RTC ಆನ್‌ಲೈನ್” ವ್ಯವಸ್ಥೆಯನ್ನು ಆರಂಭಿದೆ ಇದರ ಸಹಾಯದಿಂದ ರೈತರು, ಭೂಮಿ ಮಾಲೀಕರು ಹಾಗೂ ನಾಗರಿಕರು ತಮ್ಮ ಜಮೀನು ಸಂಬಂಧಿತ ದಾಖಲೆಗಳನ್ನು ಸುಲಭವಾಗಿ ಆನ್‌ಲೈನ್‌ನಲ್ಲಿ ಪಡೆಯಬಹುದು.
ಆನ್ಲೈನ್ ಭೂಮಿ RTC ಸೇವೆಯ ಉಪಯೋಗಗಳು
- RTC/Pahani ವೀಕ್ಷಣೆ – ನಿಮ್ಮ ಜಮೀನು ವಿವರಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದು.
- Mutation Status (ಹಕ್ಕು ಬದಲಾವಣೆ) – ಜಮೀನು ಹಕ್ಕು ಬದಲಾವಣೆ, ಅರ್ಜಿ ಸ್ಥಿತಿಯನ್ನು ಪರಿಶೀಲಿಸಲು.
- Khata Extract – ಖಾತಾ ವಿವರಗಳನ್ನು ಪಡೆಯಲು.
- Revenue Maps & Survey Sketches – ಜಮೀನು ನಕ್ಷೆ ಹಾಗೂ ಸರ್ವೇ ದಾಖಲೆಗಳನ್ನು ವೀಕ್ಷಿಲು.
- ಡಿಜಿಟಲ್ ಸಹಿ ಹೊಂದಿದ RTC – ಅಧಿಕೃತವಾಗಿ ಮಾನ್ಯತೆ ಪಡೆದ RTC ಪ್ರತಿಯನ್ನು ಆನ್‌ಲೈನ್ ಪಾವತಿ ಮೂಲಕ ಪಡೆಯಲು ಅನುಕೂಲ.
RTC ಪಡೆಯಲು ಸರಿಯಾದ Survey Number ಅಥವಾ Khata Number ಅಗತ್ಯ
ಬಳಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್: landrecords.karnataka.gov.in
- ಹಂತಗಳು:
- ವೆಬ್‌ಸೈಟ್‌ಗೆ ಹೋಗಿ.
- “View RTC” ಅಥವಾ “i-RTC” ಆಯ್ಕೆಮಾಡಿ.
- Survey Number, Owner Name ಅಥವಾ Khata Number ನಮೂದಿಸಿ.
- RTC/Pahani ದಾಖಲೆಗಳನ್ನು ವೀಕ್ಷಿಸಿ ಅಥವಾ ಡೌನ್‌ಲೋಡ್ ಮಾಡಿ.
ಪ್ರಯೋಜನಗಳು
- ಪಾರದರ್ಶಕತೆ – ಮಧ್ಯವರ್ತಿಗಳ ಅವಲಂಬನೆ ಕಡಿಮೆ.
- ಸಮಯ ಉಳಿತಾಯ – ನೇರವಾಗಿ ಆನ್‌ಲೈನ್‌ನಲ್ಲಿ ದಾಖಲೆಗಳು ಲಭ್ಯ.
- ಕಾನೂನು ಭದ್ರತೆ – ಡಿಜಿಟಲ್ ಸಹಿ ಹೊಂದಿದ RTC ದಾಖಲೆ.
- ಹಳೆಯ ದಾಖಲೆಗಳನ್ನು ಕೂಡ ಆನ್‌ಲೈನ್‌ನಲ್ಲಿ ಪಡೆಯಬಹುದು.
- ಹೂಡಿಕೆದಾರರಿಗೆ ಸಹಾಯ – ಜಮೀನು ವಿವರಗಳನ್ನು ಪರಿಶೀಲಿಸಿ ಹೂಡಿಕೆ ಮಾಡಲು ಅನುಕೂಲ.
ಸೂಚನೆ: ಶುಲ್ಕ ಪಾವತಿ ಮಾಡಿದರೆ ಮಾತ್ರ ಅಧಿಕೃತi-RTC (ಡಿಜಿಟಲ್ ಸಹಿ ಹೊಂದಿದ) ಪ್ರತಿಗಳು ದೊರೆಯುತ್ತವೆ.
ಇದನ್ನು ಓದಿ : ರೈತರಿಗಾಗಿ ಪ್ರಮುಖ 10 ಭಾರತ ಸರ್ಕಾರದ ಯೋಜನೆಗಳು
2. ಕಾವೇರಿ ಆನ್‌ಲೈನ್ ಸರ್ವೀಸ್ (Kaveri Online Services)

ಇದು ಕರ್ನಾಟಕ ಸರ್ಕಾರದ ಮುದ್ರಾ ಮತ್ತು ನೋಂದಣಿ ಇಲಾಖೆ ಆರಂಭಿಸಿರುವ ಡಿಜಿಟಲ್ ವೇದಿಕೆ. ಇದರ ಮೂಲಕ ನಾಗರಿಕರು ತಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು, ನೋಂದಣಿ ಪ್ರಕ್ರಿಯೆಗಳನ್ನು ಹಾಗೂ ಇ-ಸ್ಟಾಂಪ್ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು.
ನಾಗರಿಕರು ತಮ್ಮ Encumbrance Certificate (EC), ಆಸ್ತಿ ನೋಂದಣಿ, ಸ್ಟಾಂಪ್ ಡ್ಯೂಟಿ ಲೆಕ್ಕಾಚಾರ, ಇ-ಸ್ಟಾಂಪ್ ಖರೀದಿ ಮುಂತಾದ ಸೇವೆಗಳನ್ನು ಕಾವೇರಿ ಆನ್‌ಲೈನ್ ಸರ್ವೀಸ್ ಮೂಲಕ ಪಡೆಯಬಹುದು.
ಮುಖ್ಯ ಸೇವೆಗಳು
- EC: ಆಸ್ತಿಯ ಮೇಲೆ ಯಾವುದೇ ಸಾಲ ಅಥವಾ ಅಡಮಾನ (loan/mortgage) ಇದೆಯೇ ಇಲ್ಲವೇ ಎಂದು ತಿಳಿಯಲು.
- ಆಸ್ತಿ ನೋಂದಣಿ: ಮನೆ, ಜಮೀನು, ಫ್ಲಾಟ್ ಮುಂತಾದ ಆಸ್ತಿಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದು.
- ಸ್ಟಾಂಪ್ ಡ್ಯೂಟಿ ಲೆಕ್ಕಾಚಾರ: ಆಸ್ತಿ ಖರೀದಿಗೆ ಬೇಕಾದ ಸರ್ಕಾರದ ಶುಲ್ಕವನ್ನು ಲೆಕ್ಕ ಹಾಕಲು.
- ಇ-ಸ್ಟಾಂಪ್ ಖರೀದಿ: ಕಾನೂನುಬದ್ಧ ದಾಖಲೆಗಳಿಗೆ ಅಗತ್ಯವಿರುವ ಸ್ಟಾಂಪ್ ಪೇಪರ್ ಅನ್ನು ಪಡೆಯಲು.
- ಸುಲಭ ಪ್ರವೇಶ – ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಸೇವೆಗಳನ್ನು ಬಳಸಬಹುದು.
- ಭದ್ರತೆ – ಆನ್‌ಲೈನ್ ದಾಖಲೆಗಳು ಸುರಕ್ಷಿತವಾಗಿ ಸಂಗ್ರಹವಾಗುತ್ತವೆ.
ಬಳಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ: https://kaveri.karnataka.gov.in
- Login/Register ಆಯ್ಕೆ ಮಾಡಿ.
- ನಿಮ್ಮ ಇಮೇಲ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
- ಬೇಕಾದ ಸೇವೆಯನ್ನು ಆಯ್ಕೆ ಮಾಡಿ (EC, Registration, e-Stamp ಇತ್ಯಾದಿ).
ನಾಗರಿಕರಿಗೆ ಲಾಭಗಳು
- ಸಮಯ ಉಳಿತಾಯ – ಕಚೇರಿಗಳಿಗೆ ಹೋಗಬೇಕಾದ ಅಗತ್ಯ ಕಡಿಮೆ.
- ಪಾರದರ್ಶಕತೆ – ದಾಖಲೆಗಳು ನೇರವಾಗಿ ಸರ್ಕಾರದ ಪೋರ್ಟಲ್‌ನಲ್ಲಿ ಲಭ್ಯ.
3. ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (Encumbrance Certificate – EC)
EC ಎಂಬುದು ಕರ್ನಾಟಕದಲ್ಲಿ Form 15 ಮತ್ತು Form 16 ಎಂಬ ಎರಡು ವಿಧದ EC ಲಭ್ಯವಿದ್ದು ಇದು ಆಸ್ತಿ ವಿವರಗಳನ್ನು ಹೊಂದಿರುವ ಪ್ರಮುಖ ದಾಖಲೆ. ಇದು ಆಸ್ತಿಯ ಮೇಲೆ ಯಾವುದೇ ಬಾಕಿ, ಸಾಲ, ಅಥವಾ ಕಾನೂನು ಸಂಬಂಧಿತ ತೊಂದರೆಗಳಿಲ್ಲ ಎಂಬುದನ್ನು ದೃಢೀಕರಿಸುತ್ತದೆ.
ಆನ್‌ಲೈನ್‌ನಲ್ಲಿ ಪಡೆಯುವ ವಿಧಾನ
- Kaveri Online Services ವೆಬ್‌ಸೈಟ್‌ಗೆ ಹೋಗಿ: kaveri.karnataka.gov.in
- Login/Register ಮಾಡಿ.
- Encumbrance Certificate (EC) ಆಯ್ಕೆ ಮಾಡಿ.
- Survey Number, Property Number, Party Name ಮುಂತಾದ ವಿವರಗಳನ್ನು ನಮೂದಿಸಿ.
- Download ಆಯ್ಕೆ ಮಾಡಿದರೆ, ಡಿಜಿಟಲ್ EC ದೊರೆಯುತ್ತದೆ.
- Certified Copy ಬೇಕಾದರೆ, 3–5 ದಿನಗಳಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯಬಹುದು.
EC ಪಡೆಯಲು ಬೇಕಾಗುವ ಮಾಹಿತಿ
- ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಹೆಸರು
- ಆಸ್ತಿ Survey Number / Site Number / Khata Number
- ಅವಧಿ (5 ವರ್ಷ, 13 ವರ್ಷ, 20 ವರ್ಷ ಅಥವಾ ಕಸ್ಟಮ್)
ನಾಗರಿಕರಿಗೆ ಲಾಭಗಳು
- ಸಮಯ ಉಳಿತಾಯ – ಕಚೇರಿಗೆ ಹೋಗಬೇಕಾದ ಅಗತ್ಯ ಕಡಿಮೆ.
- ಪಾರದರ್ಶಕತೆ – ಆಸ್ತಿ ದಾಖಲೆಗಳು ನೇರವಾಗಿ ಸರ್ಕಾರದ ಪೋರ್ಟಲ್‌ನಲ್ಲಿ ಲಭ್ಯ.
- ಕಾನೂನು ಭದ್ರತೆ – ಆಸ್ತಿ ಖರೀದಿಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ದೃಢೀಕರಣ.
4. ನಗರ ಅಥವಾ ಪಟ್ಟಣ ಆಸ್ತಿ ದಾಖಲೆಗಳು “Urban Property Records”
“Urban Property Records” (ನಗರ ಆಸ್ತಿ ದಾಖಲೆಗಳು) ಎಂಬುದು ನಗರ ಪ್ರದೇಶಗಳಲ್ಲಿರುವ ಮನೆ, ಜಮೀನು, ಫ್ಲಾಟ್, ವಾಣಿಜ್ಯ ಕಟ್ಟಡಗಳಂತಹ ಆಸ್ತಿಗಳ ಕಾನೂನುಬದ್ಧ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ವ್ಯವಸ್ಥೆ. ಇದು ನಾಗರಿಕರಿಗೆ ತಮ್ಮ ಆಸ್ತಿ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸಲು ಅನುವು ನೀಡುತ್ತದೆ.
ಪ್ರಮುಖ ಸೇವೆಗಳು
- RTC (Record of Rights, Tenancy and Crops / ಪಹಣಿ) – ಆಸ್ತಿಯ ಹಕ್ಕು, ಬೆಳೆ, ಬಾಡಿಗೆ ವಿವರ.
- Mutation Records (ಮ್ಯೂಟೇಶನ್ ದಾಖಲೆ) – ಆಸ್ತಿಯ ಮಾಲೀಕತ್ವ ಬದಲಾವಣೆ (ಉದಾ: ಮಾರಾಟ, ವಂಶಪಾರಂಪರ್ಯ).
- Khata Extract (ಖಾತಾ ವಿವರ) – ನಗರ ಆಸ್ತಿಯ ತೆರಿಗೆ ಮತ್ತು ಮಾಲೀಕತ್ವ ದಾಖಲೆ.
- Survey Sketch (ಸರ್ವೇ ನಕ್ಷೆ) – ಆಸ್ತಿಯ ನಿಖರ ಗಡಿ ಮತ್ತು ನಕ್ಷೆ.
- Encumbrance Certificate (EC) – ಆಸ್ತಿಯ ಮೇಲೆ ಯಾವುದೇ ಸಾಲ/ಬಾಕಿ ಇಲ್ಲ ಎಂಬ ದೃಢೀಕರಣ.
ನಾಗರಿಕರಿಗೆ ಲಾಭಗಳು
- ಪಾರದರ್ಶಕತೆ – ದಾಖಲೆಗಳು ನೇರವಾಗಿ ಸರ್ಕಾರದ ಪೋರ್ಟಲ್‌ನಲ್ಲಿ ಲಭ್ಯ.
- ಸಮಯ ಉಳಿತಾಯ – ಕಚೇರಿಗಳಿಗೆ ಹೋಗಬೇಕಾದ ಅಗತ್ಯ ಕಡಿಮೆ.
- ಕಾನೂನು ಭದ್ರತೆ – ಆಸ್ತಿ ಖರೀದಿ/ಮಾರಾಟದಲ್ಲಿ ಯಾವುದೇ ತೊಂದರೆ ಇಲ್ಲದಂತೆ ದೃಢೀಕರಣ.
- ಸುಲಭ ಪ್ರವೇಶ – ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಪಡೆಯಬಹುದು.
ಹೇಗೆ ಬಳಸುವುದು?
- Bhoomi Portal (https://landrecords.karnataka.gov.in ಗೆ ಹೋಗಿ.
- Urban Property Records / RTC / Mutation / Khata ಆಯ್ಕೆ ಮಾಡಿ.
- ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, Survey Number, Property ID ಮುಂತಾದ ವಿವರಗಳನ್ನು ನಮೂದಿಸಿ.
- ದಾಖಲೆಗಳನ್ನು Download ಅಥವಾ Print ಮಾಡಬಹುದು.
5. Land Mutation Status (ಭೂಮಿ ಮ್ಯೂಟೇಶನ್ ಸ್ಥಿತಿ)
ಕರ್ನಾಟಕದಲ್ಲಿ ಆಸ್ತಿಯ ಮಾಲೀಕತ್ವ ಬದಲಾವಣೆಯ ದಾಖಲೆಗಳ ಸ್ಥಿತಿಯನ್ನು ಸೂಚಿಸುತ್ತದೆ.
ಮ್ಯೂಟೇಶನ್ ಎಂದರೇನು?
ಆಸ್ತಿಯ ಮಾಲೀಕತ್ವ ಬದಲಾವಣೆಗಳನ್ನು ಭೂಮಿ ದಾಖಲೆಗಳಲ್ಲಿ (RTC/ಪಹಣಿ) ದಾಖಲಿಸುವ ಪ್ರಕ್ರಿಯೆಯೇ ಮ್ಯೂಟೇಶನ್. ಇದು ಆಸ್ತಿಗೆ ಸಂಭಂಧಪಟ್ಟ ವಿವರಗಳು
ಅಂದರೆ, ಯಾರಿಂದ ಯಾರಿಗೆ ಜಮೀನು/ಮನೆ ಮಾರಾಟವಾಗಿದೆ, ಅಥವಾ
ವಂಶಪಾರಂಪರ್ಯವಾಗಿ ಆಸ್ತಿ ಹಸ್ತಾಂತರವಾಗಿದೆಯೇ.ಅಥವಾ
ಉಡುಗೊರೆ (Gift Deed) ಅಥವಾ ವಸತಿ ಪತ್ರ (Will) ಮೂಲಕ ಆಸ್ತಿ ಹಕ್ಕು ಬದಲಾಗಿದೆಯೇ ಎಂಬೆಲ್ಲ ವಿವರಗಳನ್ನು ಒದಗಿಸುತ್ತದೆ.
ಮ್ಯೂಟೇಶನ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಹೇಗೆ ನೋಡಬಹುದು?
- Bhoomi Karnataka Portal (https://landrecords.karnataka.gov.in) ಗೆ ಹೋಗಿ.
- Mutation Status ಆಯ್ಕೆ ಮಾಡಿ.
- ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, Survey Number ನಮೂದಿಸಿ.
- ಆಸ್ತಿಯ ಮ್ಯೂಟೇಶನ್ ಅರ್ಜಿ Pending (ಬಾಕಿ) / Approved (ಮಂಜೂರಾಗಿದೆ) / Rejected (ತಿರಸ್ಕರಿಸಲಾಗಿದೆ) ಎಂಬ ಸ್ಥಿತಿಯನ್ನು ನೋಡಬಹುದು.
ನಾಗರಿಕರಿಗೆ ಲಾಭಗಳು
- ಪಾರದರ್ಶಕತೆ – ಆಸ್ತಿ ದಾಖಲೆ ಬದಲಾವಣೆ ಪ್ರಕ್ರಿಯೆ ಸ್ಪಷ್ಟವಾಗಿ ಕಾಣಿಸುತ್ತದೆ.
- ಸಮಯ ಉಳಿತಾಯ – ಕಚೇರಿಗೆ ಹೋಗದೆ ಆನ್‌ಲೈನ್‌ನಲ್ಲಿ ಸ್ಥಿತಿ ಪರಿಶೀಲನೆ.
- ಕಾನೂನು ಭದ್ರತೆ – RTC/ಪಹಣಿ ನವೀಕರಿಸಿದ ನಂತರ ಆಸ್ತಿ ಖರೀದಿ/ಮಾರಾಟದಲ್ಲಿ ಯಾವುದೇ ತೊಂದರೆ ಇಲ್ಲ.
6. ಇ-ಸ್ವತ್ತು (Eswathu)

ಇ-ಸ್ವತ್ತು ಅಂದರೆ ಗ್ರಾಮೀಣ ಆಸ್ತಿಗಳ ಡಿಜಿಟಲ್ ದಾಖಲೆ ವ್ಯವಸ್ಥೆ. ಹಳೆಯ ಕಾಗದದ ದಾಖಲೆಗಳ ನಿರ್ವಹಣೆಯ ಬದಲಾಗಿ, ಸರ್ಕಾರವು ಆನ್‌ಲೈನ್‌ನಲ್ಲಿ ಸುರಕ್ಷಿತ, ನಕಲಿ ಮಾಡಲಾಗದ ದಾಖಲೆಗಳನ್ನು ನಿರ್ವಹಿಸುವ ಸುರಕ್ಷಿತ ವಿಧಾನ. ಇ-ಸ್ವತ್ತು (E-Swathu) ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ನಡೆಸುತ್ತಿರುವ ಒಂದು ಆನ್‌ಲೈನ್ ಪೋರ್ಟಲ್. ಇದರ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿನ ಸ್ವತ್ತು ದಾಖಲೆಗಳನ್ನು (property records) ಡಿಜಿಟಲ್ ರೂಪದಲ್ಲಿ ನಿರ್ವಹಿಸುವುದು.
ಮುಖ್ಯ ಅಂಶಗಳು:
ಸರ್ಕಾರದ ಭರವಸೆ: ಇ-ಸ್ವತ್ತು ಮೂಲಕ ನೀಡುವ ದಾಖಲೆಗಳು ಕಂಪ್ಯೂಟರ್ ಮೂಲಕ ಸೃಷ್ಟಿಸಲ್ಪಟ್ಟ, ನಕಲಿ ಮಾಡಲಾಗದ ಶಾಶ್ವತ ದಾಖಲೆಗಳು.
ಡಿಜಿಟಲ್ ದಾಖಲೆಗಳು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆ, ಜಮೀನು, ಕಟ್ಟಡಗಳ ಸ್ವತ್ತು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸುತ್ತದೆ.
ಫಾರ್ಮ್‌ಗಳು: Form-9, Form-11B, Form-3 ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದು. ಇವು ನೋಂದಣಿ, ತೆರಿಗೆ, ಖರೀದಿ/ಮಾರಾಟ ಸಮಯದಲ್ಲಿ ಅಗತ್ಯವಾಗುತ್ತವೆ.
ದುರುಪಯೋಗಕ್ಕೆ ತಡೆ: ನಕಲಿ ದಾಖಲೆಗಳು, ಅಕ್ರಮ ನೋಂದಣಿ, ಮೋಸಗಳನ್ನು ತಡೆಯಲು ಈ ವ್ಯವಸ್ಥೆ ಸಹಾಯಕ.
ಇ-ಖಾತಾ (e-Khata): ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ನೀಡುವ ಅಧಿಕೃತ ಪ್ರಮಾಣ ಪತ್ರ.
ಹಿನ್ನುಡಿ
ಇಂದಿನ ಆನ್ಲೈನ್ ಯುಗದಲ್ಲಿ ಕರ್ನಾಟಕ ಸರ್ಕಾರದ ಪ್ರಮುಖ ಭೂಮಿ ಮತ್ತು ಆಸ್ತಿಗೆ ಸಂಭಂದ ಪಟ್ಟ ಡಿಜಿಟಲ್ ಸೇವೆಗಳು ನಾಗರಿಕರಿಗೆ ದೊಡ್ಡ ಅನುಕೂಲಗಳನ್ನು ತರುತ್ತವೆ. ಭೂಮಿಯ ದಾಖಲೆಗಳು, ಖಾತಾ ಮಾಹಿತಿ, ನಕ್ಷೆ, ಮ್ಯೂಟೇಶನ್, ನೋಂದಣಿ ಸ್ಥಿತಿ ಮುಂತಾದ ಸೇವೆಗಳನ್ನು ಆನ್‌ಲೈನ್ ಮೂಲಕ ಪಡೆಯುವ ಅವಕಾಶದಿಂದ ಸಮಯ, ಹಣ ಮತ್ತು ಶ್ರಮವನ್ನು ಉಳಿತಾಯ ಮಾಡುತ್ತದೆ. ಪಾರದರ್ಶಕತೆ, ವೇಗ ಮತ್ತು ನಿಖರತೆಯನ್ನು ಖಚಿತಪಡಿಸುವ ಈ ಡಿಜಿಟಲ್ ವ್ಯವಸ್ಥೆಗಳು ಅನಗತ್ಯ ತೊಂದರೆಗಳನ್ನು ಕಡಿಮೆ ಮಾಡಿ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತಿವೆ.
ಒಟ್ಟಾರೆ, ಕರ್ನಾಟಕ ಸರ್ಕಾರದ ಈ ಡಿಜಿಟಲ್ ಸೇವೆಗಳು (Karnatak Government Online Services) ಭೂಮಿ ಮತ್ತು ಆಸ್ತಿ ಸಂಬಂಧಿತ ಆಡಳಿತವನ್ನು ಸುಲಭ, ಸುರಕ್ಷಿತ ಹಾಗೂ ಜನಕೇಂದ್ರಿತವಾಗಿಸುವತ್ತ ಮಹತ್ವದ ಹೆಜ್ಜೆಯಾಗಿವೆ. ನಾಗರಿಕರು ಈ ಅಧಿಕೃತ ಪೋರ್ಟಲ್‌ಗಳನ್ನು ಸರಿಯಾಗಿ ಬಳಸಿಕೊಂಡರೆ, ತಮ್ಮ ಆಸ್ತಿ ಸಂಬಂಧಿತ ಕೆಲಸಗಳನ್ನು ತ್ವರಿತವಾಗಿ ,ತೊಂದರೆರಹಿತವಾಗಿ ಮತ್ತು ವಿಶ್ವಾಸದಿಂದ ಇದರ ಲಾಭ ಪಡೆಯಬಹುದು.









