ಮಂಗಳೂರು ಪ್ರವಾಸ ಮಾರ್ಗದರ್ಶಿ – ಸಂಸ್ಕೃತಿ, ಕಡಲತೀರಗಳು, ದೇವಾಲಯಗಳು ಮತ್ತು ಆಹಾರ

ಮುನ್ನುಡಿ

ಕರ್ನಾಟಕದ ಬಂದರು ನಗರಿ ” ಮಂಗಳೂರು ” ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ಮಧ್ಯೆ ಇರುವ ಮನಮೋಹಕವಾದ ನಗರ. ಇದು ಆಧ್ಯಾತ್ಮಿಕ, ಧಾರ್ಮಿಕ ಪರಂಪರೆ ಹಾಗು ಸಮುದ್ರ ತೀರಗಳಿಗೆ ಹೆಸರುವಾಸಿ.

ಸಮುದ್ರ ಅಂದ್ರೆ ಯಾರಿಗೆ ತಾನೇ ಇಷ್ಟ ಇರೋದಿಲ್ಲ ಅಲ್ವ , ಈ ಕಾರ್ಪೊರೇಟ್ ಜೀವನ, ಟ್ರಾಫಿಕ್ ಜಂಜಾಟನ ಒಂದೆರಡು ದಿನ ಮರೆತು , ಹಾಯಾಗಿ ಕಡಲತೀರದಲ್ಲಿ ಕುಳಿತು ಸಮುದ್ರದ ಅಲೆಗಳ ಸದ್ದು ಕೇಳುತ್ತ ಮುಸ್ಸಂಜೆಯಲ್ಲಿ ಸೂರ್ಯಾಸ್ತ ನೋಡೋದು ಎಷ್ಟು ಚಂದ ಅಲಾ . ಮಂಗಳೂರಿನಲ್ಲಿ ಶಾಂತವಾದ ಕಡಲ ತೀರಗಳ ಸಾಲೇ ಇದೆ, ಇಲ್ಲಿರುವ ಪಣಂಬೂರು ಬೀಚ್ ,ಸಸಿಹಿಥ್ಲು ಬೀಚ್, ಸೋಮೇಶ್ವರ ಬೀಚ್, ಸುರತ್ಕಲ್ ಬೀಚ್, ತಣ್ಣೀರುಬಾವಿ ಬೀಚ್, ಹಾಗು ಉಳ್ಳಾಲ್ ಬೀಚ್ ವಿಶ್ರಾಂತಿಯ ಸಮಯ ಕಳೆಯಲು ಉತ್ತಮ ತಾಣಗಳು.

ಸಮುದ್ರಗಳ ಜೊತೆಗೆ ಬಹಳ ದೇವಸ್ಥಾನಗಳು , ಧಾರ್ಮಿಕ ಕ್ಷೇತ್ರಗಳಾದ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಕಟೀಲು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನ ಇನ್ನು ಹಲವು ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಒಟ್ನಲ್ಲಿ ಮಂಗಳೂರು ವಿವಿಧ ರೀತಿಯ ಪ್ರವಾಸ ಪ್ರಿಯರಿಗೂ ಸೂಕ್ತವಾದ ಸ್ಥಳ. 

ಮಂಗಳೂರಿನಲ್ಲಿ ಹೈ-ರೈಸ್ ಕಟ್ಟಡಗಳು, ದೇವಾಲಯಗಳು, ರೆಸ್ಟೋರೆಂಟ್‌ಗಳು ಮತ್ತು ಆಧುನಿಕ ಮೂಲಸೌಕರ್ಯಗಳಿವೆ. ಸರಳವಾಗಿ ಹೇಳುವುದಾದರೆ, ಇದು “ಸಮುದ್ರದೊಂದಿಗಿನ ಬೆಂಗಳೂರಿನಂತಿದೆ” – ಉತ್ತಮ ರಸ್ತೆಗಳು, ಕಡಿಮೆ ಟ್ರಾಫಿಕ್ ಮತ್ತು ಶಾಂತ ವಾತಾವರಣದೊಂದಿಗೆ.

ಇಂದು ನಾವು ಭಾರತದ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ನಗರಗಳಲ್ಲಿ ಒಂದರ ಬಗ್ಗೆ ಮಾತನಾಡುತ್ತೇವೆ. ಕರ್ನಾಟಕದ ಈ ಬಂದರು ನಗರವು ವಾಣಿಜ್ಯ, ಶಿಕ್ಷಣ ಮತ್ತು ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿದೆ. ಮಂಗಳೂರು, ಅಥವಾ ಸ್ಥಳೀಯರು ಕರೆಯುವಂತೆ ಕುಡ್ಲಗೆ ಸ್ವಾಗತ! ಬನ್ನಿ ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳ (best tourist places in mangalore) ಬಗ್ಗೆ ಹೆಚ್ಚು ಮಾಹಿತಿಯನ್ನು ಈ ಪೇಜ್ನಲ್ಲಿ ತಿಳಿಯೋಣ.

ಮಂಗಳೂರಿನಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರವಾಸಿ ಸ್ಥಳಗಳು (Top Places to visit in mangalore)

ಮಂಗಳೂರು ಶ್ರೀಮಂತ ಧಾರ್ಮಿಕ ಪರಂಪರೆ ಹೊಂದಿರುವ ನಗರ, ಇಲ್ಲಿನ ವಿಭಿನ್ನ ವಿಶಿಷ್ಠ ಆಚರಣೆಗಳು , ಸಂಸ್ಕೃತಿ ನೋಡಲು ಕಣ್ಣಿಗೆ ಹಬ್ಬವೇ ಸರಿ!. ಆದರಿಂದ ಇದೊಂದು ಧಾರ್ಮಿಕ ತಾಣಗಳಲ್ಲಿ ಪ್ರಮುಖವಾದ ಸ್ಥಳವಾಗಿದೆ. 

ಇಲ್ಲಿನ ದೇವಸ್ಥಾನಗಳು ದ್ರಾವಿಡ ಶೈಲಿಯಲ್ಲಿದ್ದು ,ಹಾಗು ಸ್ಥಳೀಯ ಕಲಾತ್ಮಕತೆಯನ್ನು ಸಾರುತ್ತವೆ. ಮಂಗಳೂರಿನ ವಿಶಿಷ್ಟ ದೇವಾಲಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ . ಈ ಬ್ಲಾಗ್ನಲ್ಲಿ ಮಂಗಳೂರಿನ ಹಲವು ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ, ಬನ್ನಿ ಓದೋಣ !

1. ಶ್ರೀ ಮಂಗಳಾದೇವಿ ದೇವಸ್ಥಾನ (Mangaladevi Temple-Mangalore)

ಶ್ರೀ ಮಂಗಳಾದೇವಿ ದೇವಾಲಯವು ಮಂಗಳೂರಿನ ಹೃದಯ ಭಾಗದಿಂದ ಕೇವಲ 3km ದೂರದಲ್ಲಿರುವ ಬೋಳಾರ ಎಂಬಲ್ಲಿದೆ. ಈ ದೇವಾಲಯವು ಸುಮಾರು 9ನೇ ಶತಮಾನದಲ್ಲಿ ಅಲುಪ ರಾಜ ಕುಂದವರ್ಮನಿಂದ ಪ್ರತಿಷ್ಠಾಪನೆಗೊಂಡಿತು. 

ಇಲ್ಲಿ ಶಕ್ತಿ ದೇವತೆ ಮಂಗಳಾದೇವಿ (ಪಾರ್ವತಿ)ಯನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಕೇರಳ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು ಮರದ ಬಳಕೆಯಿಂದ ನಿರ್ಮಿಸಲಾಗಿದೆ. ಸೋಜಿಗದ ಸಂಗತಿಯೆಂದರೆ ಮಂಗಳೂರು ನಗರಕ್ಕೆ ಈ ದೇವಾಲಯದಿಂದಲೇ ಮಂಗಳೂರು ಎಂಬ ಹೆಸರು ಬಂದಿದೆ.

ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಕ್ಕೆ ೨ಬಾರಿ ಪ್ರಮುಖ ಉತ್ಸವಗಳು ನಡೆಯುತ್ತವೆ . ಆಶ್ವಯುಜ ಮಾಸ (ಅಕ್ಟೋಬರ್/ನವೆಂಬರ್) ತಿಂಗಳಲ್ಲಿ ನವರಾತ್ರಿ ವೈಭವವಾದರೆ, ಮಾರ್ಚ್ ತಿಂಗಳಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ನೆರವೇರುತ್ತದೆ. ಮಂಗಳೂರಿಗೆ ಹೋದಾಗ ಈ ಪವಿತ್ರ ಕ್ಷೇತ್ರಕ್ಕೆ ಒಮ್ಮೆ ಭೇಟಿನೀಡಿ.

ಭೇಟಿ ಸಮಯ : ದೇವಾಲಯವು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.

2. ಕದ್ರಿ ಮಂಜುನಾಥ ದೇವಸ್ಥಾನ (Kadri Manjunatha Temple)

ಕದ್ರಿ ಮಂಜುನಾಥ ದೇವಸ್ಥಾನವು ಇತಿಹಾಸದ ಪ್ರಮುಖ ಮತ್ತು ಕರ್ನಾಟಕದಲ್ಲಿರುವ ಅತ್ಯಂತ ಪುರಾತನ ಶಿವನ ದೇವಸ್ಥಾನವಾಗಿದೆ. ಕದ್ರಿ ಮಂಜುನಾಥ ದೇವಸ್ಥಾನ ಮಂಗಳೂರಿನ KSRTC ಬಸ್ ನಿಲ್ದಾಣದಿಂದ ಕೇವಲ 4 km  ದೂರದಲ್ಲಿದೆ .

ಕದ್ರಿ ಮಂಜುನಾಥ ದೇವಸ್ಥಾನವು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೂಲಸ್ಥಾನವಾಗಿದೆ.ಈ ದೇವಸ್ಥಾನವನ್ನು ಸುಮಾರು 10-11 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು ತದನಂತರ 14ನೆ ಶತಮಾನದಲ್ಲಿ ಸಂಪೂರ್ಣ ಕಲ್ಲಿನಿಂದ ಪರಿವರ್ತಿಸಲಾಗಿದೆ.

ಇಲ್ಲಿ ನೀವು ದೇವಸ್ಥಾನ ಮಾತ್ರವಲ್ಲದೆ ಪಾಂಡವ ಗುಹೆಗಳು ದೇವಾಲಯದ ಪಕ್ಕದಲ್ಲಿರುವ ಪ್ರಾಚೀನ ಲ್ಯಾಟರೈಟ್ ಗುಹೆಗಳು, ಕದ್ರಿ ಪಾರ್ಕ್ ಮತ್ತು ಮ್ಯೂಸಿಕಲ್ ಫೌಂಟೇನ್, ಪಿಲಿಕುಳ ನಿಸರ್ಗ ಧಾಮಕ್ಕೂ ಸಹ ಭೇಟಿ ನೀಡಬಹುದು.

ಕದ್ರಿ ಮಂಜುನಾಥ ದೇವಾಲಯದಲ್ಲಿ ನಾಗರ ಪಂಚಮಿ , ಕಾರ್ತಿಕ ಸೋಮವಾರ, ಲಕ್ಷ ದೀಪೋತ್ಸವ ,ಮಹಾಶಿವರಾತ್ರಿ, ವಾರ್ಷಿಕ ಜಾತ್ರೆ ಆಚರಣೆಗಳು ವಿಜೃಂಭಣೆಯಿಂದ ನಡೆಯುತ್ತವೆ.

ಭೇಟಿ ಸಮಯ : ದೇವಾಲಯವು ಪ್ರತಿದಿನ ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

3. ಶ್ರೀ ಶರವು ಮಹಾಗಣಪತಿ ದೇವಸ್ಥಾನ (Sharavu Maha Ganapati Temple)

ಶರವು ಮಹಾಗಣಪತಿ ದೇವಸ್ಥಾನ ಮಂಗಳೂರಿನಲ್ಲಿರುವ ಪ್ರಸಿದ್ಧ ಗಣೇಶ ದೇವಸ್ಥಾನ..ಇಲ್ಲಿ ಪ್ರತಿವರ್ಷ ಅನೇಕ ಜನರು ಭೇಟಿ ನೀಡುತ್ತಾರೆ…ಬಹಳ ಜಾಗೃತ ಗಣೇಶ ಎಂಬ ಖ್ಯಾತಿ ಈ ಗಣೇಶನದ್ದು.ಈ ದೇವಾಲಯದ ಗಣಪತಿಯು ಸಿದ್ಧಿಲಕ್ಷ್ಮಿಯೊಂದಿಗೆ ಉದ್ಭವವಾಗಿದೆ. 

ಇದು ಮಂಗಳೂರಿನ KSRTC ಬಸ್ ನಿಲ್ದಾಣದಿಂದ ಕೇವಲ 4km ದೂರದಲ್ಲಿನ ಹಂಪನಕಟ್ಟೆಯಲ್ಲಿದೆ. ಈ ವಿಶಿಷ್ಟ ಧಾರ್ಮಿಕ ಕ್ಷೇತ್ರ ಸುಮಾರು 800  ವರ್ಷಗಳ ಇತಿಹಾಸವಿದೆ, ಈ ದೇವಾಲಯವನ್ನು ತುಳು ನಾಡಿನ ರಾಜ ವೀರಬಾಹುವು ಕಟ್ಟಿಸಿದ್ದಾರೆ. 

ಈ ದೇವಸ್ಥಾನವು ಅತಿ ಪ್ರಾಚೀನ ಹಾಗು ಅತಿ ಹೆಚ್ಚು ಭಕ್ತರು ಭೇಟಿನೀಡುವ ದೇವಸ್ಥಾನ ವಾಗಿದ್ದು ಪ್ರತಿ ವಾರ ಸಂಜೆ ದೇವಾಲಯದಲ್ಲಿಯೇ ಯಕ್ಷಗಾನ, ತಾಳ ಮದ್ದಳೆಗಳು ನಡೆಯುತ್ತವೆ. ಗಣೇಶ ಚತುರ್ಥಿ ಹಾಗು ಲಕ್ಷ ದೀಪೋತ್ಸವವನ್ನು ನಡೆಸಲಾಗುತ್ತದೆ ಈ ಸಂಧರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಭೇಟಿ ಸಮಯ : ದೇವಾಲಯವು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಸಂಜೆ 4.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ.

4. ಕಟೀಲು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನ (Sri Kateelu Durga Parameshwari Temple)

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಾರತದಲ್ಲಿರುವ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ಮಂಗಳೂರಿನ ಕಟೀಲು ಎಂಬಲ್ಲಿದೆ. ಈ ದೇವಸ್ಥಾನವು ಮಂಗಳೂರು KSRTC  ಬಸ್ ನಿಲ್ದಾಣದಿಂದ 23KM  ದೂರದಲ್ಲಿದ್ದು ನಂದಿನಿ ಎಂಬ ನದಿಯ ಮಧ್ಯಭಾಗದಲ್ಲಿದೆ.

ಕಟೀಲು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅತಿ ವಿಜೃಂಭಣೆಯಿಂದ ನೆರವೇರುತ್ತದೆ. ಇದಲ್ಲದೆ ವಾರ್ಷಿಕ ಜಾತ್ರಾ ಮಹೋತ್ಸವ, ಲಕ್ಷದೀಪೋತ್ಸವ ಹಾಗು ಇಲ್ಲಿ ಪ್ರತಿದಿನ 2  ಬಾರಿ ಅನ್ನಸಂತರ್ಪಣೆ ನಡೆಯುತ್ತದೆ. ವಿಶೇಷವಾಗಿ ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಉತ್ತೇಜಿಸಲು ಶ್ರೀ ದುರ್ಗಾ ಮಕ್ಕಳ ಮೇಳವನ್ನು ಆಚರಿಸಲಾಗುತ್ತದೆ.

ಭೇಟಿ ಸಮಯ : ದರ್ಶನದ ಸಮಯ ಪ್ರತಿದಿನ ಬೆಳೆಗ್ಗೆ 5.30ಯಿಂದ ರಾತ್ರಿ 9.30 ವರೆಗೆ

5. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ (Kudroli Gokarnanatha Kshetra)

ಕಾರಣಿಕ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನವು 1912 ರಲ್ಲಿ ನಿರ್ಮಾಣವಾಗಿದ್ದು.

ಈ ದೇವಾಲಯವು ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನ ಆರಾಧನೆಗೆ ಮುಡಿಪಾಗಿದೆ. ದಸರಾ ಆಚರಣೆಯನ್ನು ಇಲ್ಲಿ ವಿಜೃಂಭಣೆಯಾಗಿ ನಡೆಸಲಾಗುತ್ತದೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಾಲಯವು ಮಂಗ್ಳೂರಿನ್ನಿಂದ ಕೆಲ್ವಲಾ 3km  ದೂರದಲ್ಲಿದೆ

ದೇವಸ್ಥಾನದ ಹತ್ತಿರದಲ್ಲಿ ಹಸಿರಾದ ಉದ್ಯಾನವನ , ಶುದ್ಧ ನೀರಿನ ಕೊಳ, ವಾಚನಾಲಯ, ಕಾರಂಜೆಯನ್ನು ಸಹ ಇಲ್ಲಿ ನೀವು ಕಾಣಬಹುದು.  

ಭೇಟಿ ಸಮಯ : ದೇವಾಲಯವು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2.30 ರವರೆಗೆ ಮತ್ತು ಸಂಜೆ 4.30 ರಿಂದ ರಾತ್ರಿ 9.00 ರವರೆಗೆ ತೆರೆದಿರುತ್ತದೆ.

ಮಂಗಳೂರಿನ ಕಡಲತೀರಗಳು ಮತ್ತು ಆಕರ್ಷಣೆಗಳು (Best Beaches to visit in Mangalore)

ಮಂಗಳೂರು ತನ್ನ ಸುಂದರ ಕಡಲತೀರಗಳು ಮತ್ತು ನೈಸರ್ಗಿಕ ಆಕರ್ಷಣೆಗಳಿಗಾಗಿ ಪ್ರಸಿದ್ಧವಾಗಿದೆ. ಶಾಂತ ವಾತಾವರಣ, ಸಮುದ್ರದ ಅಲೆಗಳ ಸದ್ದು, ನೀಲಿಬಣ್ಣದ ಸಮುದ್ರ ಹಾಗೂ ಸೂರ್ಯಾಸ್ತದ ಅದ್ಭುತ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಮಂಗಳೂರು ಕಡಲತೀರಗಳು ಅತ್ಯುತ್ತಮ ತಾಣಗಳಾಗಿವೆ. ಬನ್ನಿ ಮಂಗಳೂರಿನ ವಿವಿಧ ಬೀಚ್ ಗಳ ಬಗ್ಗೆ ತಿಳಿಯೋಣ.

1. ತಣ್ಣೀರುಬಾವಿ ಬೀಚ್ (Tannir Bhavi Beach)

ಕರಾವಳಿ ಕರ್ನಾಟಕದ ತಣ್ಣೀರುಬಾವಿ ಬೀಚ್ ಒಂದು ಅದ್ಭುತ ಮತ್ತು (mangalore best visiting place) ಜನಪ್ರಿಯ ಪ್ರೇಕ್ಷಣೀಯ ಸ್ಥಳವಾಗಿದೆ. ತಣ್ಣೀರುಬಾವಿ ಬೀಚ್ ಮಂಗಳೂರಿನಿಂದ ಕೇವಲ 10 km ದೂರದಲ್ಲಿದೆ. ಈ ಕಡಲತೀರದ ಸಮೀಪದಲ್ಲಿ ತಣ್ಣೀರಭಾವಿ ಟ್ರೀ ಪಾರ್ಕ್ ಸಸ್ಯೋದ್ಯಾನವಿದ್ದು ಇಲ್ಲಿ ಔಷಧೀಯ ಸಸ್ಯಗಳು ಇವೆ. ಸಂಜೆ ಅರಬ್ಬೀ ಸಮುದ್ರದ ಸೂರ್ಯಾಸ್ತವನ್ನು ನೋಡಲು ಪ್ರವಾಸಿಗರ ಆದ್ಯತೆಯ ತಾಣವಾಗಿದೆ. ಪ್ರವಾಸಿಗರು ದೋಣಿಯ ಮೂಲಕ ಸುಲ್ತಾನ್ ಬ್ಯಾಟರಿಗೆ ಭೇಟಿ ನೀಡಬಹುದು.

ತಣ್ಣೀರುಬಾವಿ ಕಡಲತೀರದ ಸಮೀಪವಿರುವ ಸ್ಥಳಗಳು

  • ಸುಲ್ತಾನ್ ಬ್ಯಾಟರಿ : ಐತಿಹಾಸಿಕ ಕೋಟೆ ಹಾಗು ದೋಣಿ ಪ್ರವೇಶದ ಸ್ಥಳ 
  • ತಣ್ಣೀರಭಾವಿ ಟ್ರೀ ಪಾರ್ಕ್ : 15 ಎಕರೆಯಲ್ಲಿರುವ ಬೃಹತ್ ಉದ್ಯಾನವನ ಇದರಲ್ಲಿ ಗಿಡಮೂಲಿಕಾ ಮತ್ತು ಔಷಧೀಯ ಸಸ್ಯಗಳನ್ನು ಕಾಣಬಹುದು 
  • ಕದ್ರಿ ಮಂಜುನಾಥ ದೇವಾಲಯ ಹಾಗು ಕುದ್ರೋಳಿ ಗೋಕರ್ಣನಾಥ ದೇವಾಲಯಗಳು 10km  ಆಸುಪಾಸಿನಲ್ಲಿವೆ 
  • ಪಣಂಬೂರ್ ಬೀಚ್: ಕೇವಲ 9km  ದೂರದಲ್ಲಿ ಮತ್ತೊಂದು ಜನಪ್ರಿಯ ಕಡಲತೀರದ ಅನುಭವ.

2. ಪಣಂಬೂರ್ ಬೀಚ್ (Panambur Beach)

ಪಣಂಬೂರ್ ಬೀಚ್: ಕೇವಲ 9km  ದೂರದಲ್ಲಿ ಮತ್ತೊಂದು ಜನಪ್ರಿಯ ಕಡಲತೀರದ ಅನುಭವ. ಈ ಕಡಲತೀರವು ಭಾರತದ ಅತ್ಯಂತ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವ ಹಾಗು ಸುರಕ್ಷಿತ ಕಡಲತೀರವಾಗಿದೆ ಏಕೆಂದರೆ ಇಲ್ಲಿ ಜೀವ ರಕ್ಷಕ ದಳದ ಸದಸ್ಯರು ಕಣ್ಗಾವಲಿದ್ದು ಸುರಕ್ಷಿತವಲ್ಲದಿದ್ದರೆ ಸಮುದ್ರಕ್ಕೆ ಇಳಿಯಲು ಬಿಡುವುದಿಲ್ಲ .  

ಸೌಲಭ್ಯಗಳು: 

  • ಇಲ್ಲಿ ಕುದುರೆ ಮತ್ತು ಒಂಟೆ ಸವಾರಿಯ ಅನುಭವ ಪಡೆಯಬಹುದು 
  • ಬೀಚ್‌ನಲ್ಲಿ ATV ಸವಾರಿಗಳು, ಪ್ಯಾರಾಸೈಲಿಂಗ್, ಜೆಟ್‌ಸ್ಕಿ ಸವಾರಿಗಳು ಮತ್ತು ಸರ್ಫಿಂಗ್‌ಗಳನ್ನು ಆನಂದಿಸಬಹುದು.
  • ರುಚಿಕರ ಆಹಾರ , ತಿನಿಸುಗಳನ್ನು ಸವಿಯಲು ಉತ್ತಮ ಹೋಟೆಲ್ಗಳು ಇವೆ 

ಪಣಂಬೂರ್ ಕಡಲತೀರದ ಸಮೀಪವಿರುವ ಸ್ಥಳಗಳು

  • ಕೇವಲ 1km ಅಂತರದಲ್ಲಿರುವ ಶ್ರೀ ನಂದನೇಶ್ವರ ದೇವಸ್ಥಾನವು ಪುರಾತನ ದೇವಾಲಯವಾಗಿದ್ದು ಕಡಿಮೆ ಜನಜಂಗುಳಿಯಿರುವ ದೈವಿಕ ಅನುಭವ ಪಡೆಯಲು ಭೇಟಿನೀಡಬಹುದು  
  • ಸೇಂಟ್ ಅಲೋಯ್ಸಿಯಸ್ ಚಾಪೆಲ್ ರೋಮ್‌ನ ಸಿಸ್ಟಿನ್ ಚಾಪೆಲ್‌ನಿಂದ ಪ್ರೇರಿತವಾದ ಅದ್ಭುತ ಒಳಾಂಗಣ ಭಿತ್ತಿಚಿತ್ರಗಳಿಗಾಗಿ ಪ್ರಸಿದ್ಧವಾಗಿದೆ.19ನೇ ಶತಮಾನದಲ್ಲಿ ನಿರ್ಮಿಸಲಾದ ಈ ಚಾಪೆಲ್ ಶ್ರೀಮಂತ ಕಲಾ ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
  • ಸುರತ್ಕಲ್ ಲೈಟ್‌ಹೌಸ್‌ ಬೀಚ್ ಪಣಂಬೂರ್ ಬೆಚ್ನಿಂದ 10km  ಸಮೀಪದಲ್ಲಿರುವ ಶಾಂತ ಹಾಗೂ ಸುಂದರ ಕಡಲತೀರವಾಗಿದ್ದು, ಲೈಟ್‌ಹೌಸ್‌ನಿಂದ ಕಾಣುವ ಸಮುದ್ರದ ವಿಹಂಗಮ ನೋಟ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ.

3. ಉಳ್ಳಾಲ್ ಬೀಚ್  (Ullal Beach)

ಉಳ್ಳಾಲ ಬೀಚ್ ಮಂಗಳೂರಿನಲ್ಲಿರುವ ಶಾಂತ ಮತ್ತು ಸ್ವಚ್ಛ ಕಡಲತೀರವಾಗಿದೆ.ಕಡಿಮೆ ಜನಸಂದಣಿ ಇರುವುದರಿಂದ ಮನಶಾಂತಿಗೆ ಇದು ಸೂಕ್ತ ಸ್ಥಳ.ಸೂರ್ಯಾಸ್ತದ ಸುಂದರ ದೃಶ್ಯಗಳು ಇಲ್ಲಿ ವಿಶೇಷ ಆಕರ್ಷಣೆ.ಫೋಟೋಗ್ರಫಿ ಹಾಗೂ ಪ್ರಕೃತಿ ಪ್ರಿಯರಿಗೆ ಉಳ್ಳಾಲ್ ಬೀಚ್ ಬಹಳ ಇಷ್ಟವಾಗುತ್ತದೆ.

ಸೌಲಭ್ಯಗಳು

  • ಪಾರ್ಕಿಂಗ್ ವ್ಯವಸ್ಥೆ
  • ಕುಳಿತು ವಿಶ್ರಾಂತಿ ಪಡೆಯಲು ವಿಶಾಲವಾದ ಜಾಗ
  • ಸಮೀಪದ ಸ್ಥಳೀಯ ಹೋಟೆಲ್ಗಳು 
  • ಸ್ವಚ್ಛ ಪರಿಸರ ಮತ್ತು ಕಡಿಮೆ ಗದ್ದಲ
  • ಫೋಟೋಗ್ರಫಿಗೆ ಅನುಕೂಲಕರ ಸ್ಥಳ

ಉಳ್ಳಾಲ್ ಬೀಚ್ ಸಮೀಪವಿರುವ ಸ್ಥಳಗಳು

  • ಸೋಮೇಶ್ವರ ಬೀಚ್ – ಉಳ್ಳಾಲ್ ಬೀಚ್‌ನಿಂದ ಸುಮಾರು 4 ಕಿಮೀ, ಕಲ್ಲು ಬಂಡೆಗಳು ಮತ್ತು ಸೂರ್ಯಾಸ್ತ ನೋಡಲು ಪ್ರಸಿದ್ಧ.
  • ಸೋಮೇಶ್ವರ ದೇವಸ್ಥಾನ – ಉಳ್ಳಾಲ್ ಬೀಚ್‌ನಿಂದ ಸುಮಾರು 4.5 ಕಿಮೀ, ಶಾಂತ ವಾತಾವರಣದ ಪುರಾತನ ಶಿವಾಲಯ.
  • ತಣ್ಣೀರುಭಾವಿ ಬೀಚ್ – ಉಳ್ಳಾಲ್ ಬೀಚ್‌ನಿಂದ ಸುಮಾರು 6 ಕಿಮೀ, ಕುಟುಂಬ ಪ್ರವಾಸಕ್ಕೆ ಸೂಕ್ತ ಕಡಲತೀರ.
  • ಮಂಗಳೂರು ನಗರ ಕೇಂದ್ರ – ಉಳ್ಳಾಲ್ ಬೀಚ್‌ನಿಂದ ಸುಮಾರು 8 ಕಿಮೀ, ಶಾಪಿಂಗ್ ಮತ್ತು ನಗರ ಜೀವನದ ಕೇಂದ್ರ.
  • ನೇತ್ರಾವತಿ ನದಿ ಸಂಗಮ – ಉಳ್ಳಾಲ್ ಬೀಚ್‌ನಿಂದ ಸುಮಾರು 2 ಕಿಮೀ, ನದಿ ಮತ್ತು ಸಮುದ್ರ ಸೇರುವ ನೈಸರ್ಗಿಕ ದೃಶ್ಯ.

4. ಸೋಮೇಶ್ವರ ಬೀಚ್ (Someshwara Beach)

ಸೋಮೇಶ್ವರ ಬೀಚ್ ಮಂಗಳೂರಿನ ಶಾಂತ ಹಾಗೂ ಸುಂದರ ಕಡಲತೀರವಾಗಿದೆ.ಸೋಮೇಶ್ವರ ಬೀಚ್ ಉಳ್ಳಾಲ್ ಬೀಚ್ ನಿಂದ ಕೇವಲ 4km ದೂರದಲ್ಲಿದ್ದು ಇದು ನೇತ್ರಾವತಿ ನದಿಯು ಅರಬ್ಬಿ ಸಮುದ್ರವನ್ನು ಸೇರುವ ಸ್ಥಳದಲ್ಲಿದೆ, ಇಲ್ಲಿನ ದೊಡ್ಡ ಬಂಡೆಗಳು ಮತ್ತು ತೆರೆಯಾದ ಸಮುದ್ರದ ದೃಶ್ಯಗಳು ವಿಶೇಷ ಆಕರ್ಷಣೆ.

ಇಲ್ಲಿ ಸಮುದ್ರದ ಎದುರು ಪರ್ವತಗಳು ಮತ್ತು ಕಾಡುಗಳಿಂದ ಆವೃತವಾದ ಅಪಾರ ಹಸಿರಿನಿಂದ ಕೂಡಿದ ನೋಟ ಸಿಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಈ ಬೀಚ್ ಅತ್ಯಂತ ಮನಮೋಹಕವಾಗಿ ಕಾಣಿಸುತ್ತದೆ. ನೆಮ್ಮದಿಯಾಗಿ ಸಮಯ ಕಳೆಯಲು ಇದು ಸೂಕ್ತ ಸ್ಥಳವಾಗಿದೆ

ಸೋಮೇಶ್ವರ ಬೀಚ್‌ನಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು:

  • ವಾಹನ ನಿಲುಗಡೆ ವ್ಯವಸ್ಥೆ
  • ಸ್ಥಳೀಯ ಆಹಾರ ಮಳಿಗೆಗಳು
  • ಮೂಲಭೂತ ಶೌಚಾಲಯ ಸೌಲಭ್ಯಗಳು

ಸೋಮೇಶ್ವರ ಬೀಚ್ ಸಮೀಪವಿರುವ ಸ್ಥಳಗಳು

  • ಸೋಮೇಶ್ವರ ದೇವಸ್ಥಾನ – ಬೀಚ್‌ನಿಂದ ಸುಮಾರು 0.5 ಕಿ.ಮೀ, ಐತಿಹಾಸಿಕ ಶಿವ ದೇವಸ್ಥಾನ
  • ಉಳ್ಳಾಲ ಬೀಚ್ – ಸುಮಾರು 5 ಕಿ.ಮೀ, ಶಾಂತ ಮತ್ತು ಸ್ವಚ್ಛ ಕಡಲತೀರ
  • ಉಳ್ಳಾಲ ದರ್ಗಾ – ಸುಮಾರು 6 ಕಿ.ಮೀ, ಪ್ರಸಿದ್ಧ ಧಾರ್ಮಿಕ ಸ್ಥಳ
  • ತಣ್ಣೀರುಭಾವಿ ಬೀಚ್ – ಸುಮಾರು 9 ಕಿ.ಮೀ, ಕುಟುಂಬ ಸಮೇತ ಭೇಟಿ ನೀಡಲು ಸೂಕ್ತ
  • ಮಂಗಳೂರು ನಗರ ಕೇಂದ್ರ – ಸುಮಾರು 12 ಕಿ.ಮೀ, ಶಾಪಿಂಗ್ ಮಾಲ್ ಮತ್ತು ಹೋಟೆಲ್ಗಳು 

5. ಚಿತ್ರಪುರ ಬೀಚ್ (Chitrapura Beach)

ಚಿತ್ರಪುರ ಬೀಚ್ ಕಡಿಮೆ ಜನ ಸಂದಣಿಯಿರುವ ಸ್ವಚ್ಛವಾದ ಕಡಲತೀರವಾಗಿದ್ದು ನೀವೇನಾದ್ರು ನೆಮ್ಮದಿಯಾಗಿ ಸುಮ್ಮನೆ ಕುಳಿತು ಸಮುದ್ರದ ಅಲೆಗಳ ಸದ್ದನ್ನು ಕೇಳುದ್ದ ಸಮುದ್ರದ ತೀರದ ಅನುಭವ ಪಡೆಯಬೇಕು ಅನ್ಕೊಂಡ್ರೆ ಈ ಜಾಗ ನಿಮಗಾಗಿ.ಒಂದೊಳ್ಳೆ ಲಾಂಗ್ ವಾಕ್ ಹೋಗೋಕೆ ಸೂಕ್ತವಾದ ಸ್ಥಳ .ಇದು ಮಂಗಳೂರಿಂದ ಕೇವಲ 10km  ದೂರದಲ್ಲಿದೆ.

ಮಂಗಳೂರು ಸಂಸ್ಕೃತಿ ಮತ್ತು ಪರಂಪರೆ

ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಮಂಗಳೂರು ನಗರವು ಸಂಸ್ಕೃತಿ, ಪರಂಪರೆ, ಭಾಷೆ, ಧರ್ಮ ಮತ್ತು ಆಹಾರದ ವಿಶಿಷ್ಟ ಒಳಗೊಂಡಿರುವ ಒಂದು ಶ್ರೀಮಂತ ನಗರವಾಗಿದೆ. ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ಮಧ್ಯೆ ಇರುವ ಮಂಗಳೂರು, ಪ್ರಾಚೀನ ರಾಜವಂಶಗಳು, ಸಾಗರ ವ್ಯಾಪಾರ ಮತ್ತು ವಿಭಿನ್ನ ಸಮುದಾಯಗಳ ಸಮೃದ್ಧ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ.

ಪರಂಪರೆಯ ಕಲೆಗಳು ಮತ್ತು ಜನಪದ ಸಂಸ್ಕೃತಿ

ಮಂಗಳೂರಿನ ಸಾಂಸ್ಕೃತಿಕ ಪರಂಪರೆ ತುಳುನಾಡಿನ ಆಚರಣೆಗಳನ್ನು ಹೊದ್ದುಕೊಂಡಿದೆ. ಯಕ್ಷಗಾನ ಇಲ್ಲಿ ಅತ್ಯಂತ ಜನಪ್ರಿಯ ನೃತ್ಯ-ನಾಟಕ ಕಲೆಗಳಲ್ಲಿ ಒಂದು. ಬಣ್ಣಬಣ್ಣದ ವೇಷಭೂಷಣ, ವಿಶಿಷ್ಟ ಮೇಕಪ್ ಹಾಗೂ ರಾಮಾಯಣ–ಮಹಾಭಾರತದ ಕಥಾವಸ್ತುವಿನ ಆಧಾರದ ಮೇಲೆ ನಡೆಯುವ ಈ ಕಲೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದಲ್ಲದೆ, ಭೂತಕೋಲ ಎಂಬ ಪುರಾತನ ಆಚರಣೆ ಮಂಗಳೂರಿನ ಸಂಸ್ಕೃತಿಯ ವಿಶೇಷ ಅಂಶವಾಗಿದ್ದು, ಪ್ರಕೃತಿ ಮತ್ತು ಪೂರ್ವಜ ದೈವಗಳ ಮೇಲೆ ಇರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಹಬ್ಬಗಳು ಮತ್ತು ಆಚರಣೆಗಳು

ಮಂಗಳೂರಿನಲ್ಲಿ ಹಬ್ಬಗಳನ್ನು ಅಪಾರ ಉತ್ಸಾಹ ಮತ್ತು ಏಕತೆಯಿಂದ ಆಚರಿಸಲಾಗುತ್ತದೆ. ಮಂಗಳಾದೇವಿ ದೇವಸ್ಥಾನ ಉತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಮತ್ತು ದೀಪಾವಳಿ ಅಭೂತಪೂರ್ವ ಆಚರಣೆಗಳು ನಡೆಯುತ್ತವೆ . 

ಧಾರ್ಮಿಕ ಮತ್ತು ವಾಸ್ತುಶಿಲ್ಪ ಪರಂಪರೆ

ಮಂಗಳೂರು ಅನೇಕ ಧಾರ್ಮಿಕ ಕೇಂದ್ರಗಳಿಂದ ಪ್ರಸಿದ್ಧವಾಗಿದೆ. ನಗರಕ್ಕೆ ಹೆಸರು ನೀಡಿದ ಮಂಗಳಾದೇವಿ ದೇವಸ್ಥಾನ ದೇವಿ ಮಂಗಳಾದೇವಿಗೆ ಸಮರ್ಪಿತವಾಗಿದೆ. ಕದ್ರಿ ಮಂಜುನಾಥ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕೂಡ ಪ್ರಮುಖ ದೇವಾಲಯಗಳಾಗಿವೆ. ಇದೇ ರೀತಿಯಲ್ಲಿ, ಸೆಂಟ್ ಅಲೋಯ್ಸಿಯಸ್ ಚಾಪೆಲ್ ಮುಂತಾದ ಚರ್ಚುಗಳು ಪೋರ್ಚುಗೀಸ್ ಕಾಲದ ವಾಸ್ತುಶಿಲ್ಪದ ವೈಭವವನ್ನು ತೋರಿಸುತ್ತವೆ.

ಮಂಗಳೂರಿನ ಆಹಾರ ಸಂಸ್ಕೃತಿ

ಬೇರೆಡೆಯಿಂದ ಮಂಗಳೂರಿಗೆ ಹೋದವರಿಗೆ ಅಲ್ಲಿನ ವಿಶಿಷ್ಟ ಆಹಾರ ಪದ್ಧತಿ ನಿಜವಾಗಿಯೂ ಇಷ್ಟವಾಗುತ್ತದೆ ಅಲ್ಲಿನ ಮೀನಿನ ರುಚಿರುಚಿಯಾದ ಖಾದ್ಯಗಳು, ಮಂಗಳೂರು ಬನ್ಸ್, ಗೋಳಿಬಜ್ಜಿ ಇನ್ನು ಹಲವಾರು ರೀತಿಯ ಆಹಾರಗಳನ್ನು ಸವಿಯಬಹುದು. ಯಾವಾಗ್ಲಾದ್ರೂ ಮಂಗಳೂರು ಕಡೆ ಹೋದಾಗ ತಪ್ಪದೆ ರುಚಿ ಸವಿದು ಬನ್ನಿ.

ಮಂಗಳೂರಿನ ಅತ್ಯುತ್ತಮ ರೆಸ್ಟೋರೆಂಟ್‌ಗಳು – ಟಾಪ್ ಮೆನುಗಳೊಂದಿಗೆ

ಮಂಗಳೂರಿನಲ್ಲಿ ತಿನ್ನಲೇಬೇಕಾದ ತಿಂಡಿಗಳು:

  • ಬೆಳಗಿನ ತಿಂಡಿ: ಮಂಗಳೂರು ಬನ್ಸ್, ಮಸಾಲೆ ದೋಸೆ, ಗೋಳಿ ಭಜ್ಜಿ, ನೀರ್ ದೋಸೆ, ಪತ್ರೊಡೆ , ಕೇಸರಿಬಾತ್, ಇಡ್ಲಿ ಸಾಂಬಾರ್.
  • ಮಧ್ಯಾಹ್ನ/ರಾತ್ರಿ ಊಟ: ಮೀನು ಫ್ರೈ, ನೀರ್ ದೋಸೆ-ಚಿಕನ್ ಕರ್ರಿ, ಪ್ರಾನ್ ಬಿರಿಯಾನಿ, ಕೋರಿ ರೋಟಿ  ಜೊತೆ ಚಿಕನ್ ಗೀ ರೋಸ್ಟ್ , ಕಾಣೆ ರವಾ ಫ್ರೈ ಅಂಜಲ್ ಫ್ರೈ , ಏಡಿ ಸುಕ್ಕ , ಮೂಡೆ ,ಕಡುಬು 

ಈ ರುಚಿಯನ್ನು ಸವಿಯಲು ಮಂಗಳೂರಿನಾದ್ಯಂತ ಹಲವಾರು ಹೋಟೆಲ್ಗಳಿವೆ ಅದರಲ್ಲಿ ಪ್ರಮುಖವಾಗಿ  ಗಜಲೀ, ಹೋಟೆಲ್ ಮಹಾರಾಜಾ , ಗಿರಿಮಂಜ’ಸ್ , ಹೋಟೆಲ್ ನಾರಾಯಣ, ವುಡ್ಲ್ಯಾಂಡ್ಸ್  ರೆಸ್ಟೋರೆಂಟ್ ನಲ್ಲಿ ಉತ್ತಮ ರುಚಿ ರುಚಿಯಾದ ಆಹಾರ ಸವಿಯಬಹುದು.

ಕೊನೆಯ ಮಾತು

ನೀವು ನಿಮ್ಮ ಕುಟುಂಬದ ಜೊತೆ ನೆಮ್ಮದಿಯಾಗಿ, ಉತ್ತಮ ವಿಶ್ರಾಂತಿ ಪಡೆಯಲು ಮಂಗಳೂರು ಸೂಕ್ತವಾದ ಸ್ಥಳ. ಮಂಗಳೂರಿನ ಶಾಂತ ಕಡಲತೀರಗಳು, ಪುರಾತನ ದೇವಾಲಯಗಳು, ಸಮೃದ್ಧ ಸಂಸ್ಕೃತಿ ಹಾಗೂ ರುಚಿಕರವಾದ ಕರಾವಳಿ ಆಹಾರಗಳ ಸುಂದರ ಸಂಗಮವಾಗಿದೆ. 

ಕಡಲ ತೀರದ ಮನಮೋಹಕ ಸೂರ್ಯಾಸ್ತದಿಂದ ಹಿಡಿದು ಆಧ್ಯಾತ್ಮಿಕ ಶಾಂತಿ ನೀಡುವ ದೇವಾಲಯಗಳು ಮತ್ತು ಚೈತನ್ಯಮಯ ಸ್ಥಳೀಯ ಮಾರುಕಟ್ಟೆಗಳವರೆಗೆ, ಮಂಗಳೂರಿನ ಪ್ರತಿಯೊಂದು ಪ್ರವಾಸಿ ಸ್ಥಳವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. 

ನೀವು ಕುಟುಂಬದೊಂದಿಗೆ, ಆಧ್ಯಾತ್ಮಿಕ ಯಾತ್ರೆಗೆ ಅಥವಾ ಸ್ನೇಹಿತರೊಂದಿಗೆ ವಿಶ್ರಾಂತಿ ಪ್ರವಾಸವನ್ನು ಯೋಜಿಸುತ್ತಿದ್ದರೂ, ಮಂಗಳೂರು ತನ್ನ ಆತಿಥ್ಯದಿಂದ ಮತ್ತು ಮರೆಯಲಾಗದ ಅನುಭವಗಳಿಂದ ನಿಮ್ಮನ್ನು ಬೆರಗುಗೊಳಿಸುತ್ತದೆ. ಈ ( Tourist Places in Mangalore ) ಹೊಸ ಸ್ಥಳಗಳ ಅನ್ವೇಷಣೆಗಳು ನಿಮ್ಮ ಮನಸ್ಸಿಗೆ ತಾಜಾತನ ನೀಡುವುದರ ಜೊತೆಗೆ ಜೀವನಪೂರ್ತಿ ನೆನೆಯುವ ಅನುಭವಗಳನ್ನು ನೀಡುತ್ತದೆ.

KannadapediaAdmin

ನಾನು ಒಬ್ಬ ವಿಷಯ ಲೇಖಕ, ಪ್ರಸ್ತುತ ವಿಷಯಗಳು, ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಪ್ರವಾಸ ಬ್ಲಾಗ್‌ಗಳು, ಆಹಾರ ಲೇಖನಗಳು ಮತ್ತು ಪ್ರೇರಣಾದಾಯಕ ಉಕ್ತಿಗಳ ಕುರಿತು ಬರೆಯುತ್ತೇನೆ. ಓದುಗರಿಗೆ ಉಪಯುಕ್ತ ಮತ್ತು ಪ್ರೇರಣಾದಾಯಕ ಮಾಹಿತಿಯನ್ನು ಹಂಚಿಕೊಳ್ಳುವುದು ನನ್ನ ಆಸಕ್ತಿ.

@saadhaneya Kicchu
[instagram-feed feed=1]