ಕನ್ನಡದಲ್ಲಿ ಶುಭೋದಯದ ಶುಭಾಶಯಗಳು (Good Morning Wishes in Kannada) ನಮ್ಮ ಸಂಸ್ಕೃತಿ, ಭಾವನೆಗಳು ಮತ್ತು ಭಾಷೆಯ ಸೌಂದರ್ಯವನ್ನು ಅದ್ಭುತವಾಗಿ ಪ್ರತಿಬಿಂಬಿಸುತ್ತವೆ.
ದಿನವನ್ನು ಸ್ವಭಾಷೆಯಲ್ಲಿನ ಒಳ್ಳೆಯ ಮಾತಿನಿಂದ ಆರಂಭಿಸುವುದು ಮನಸ್ಸಿಗೆ ಸಂತೋಷವನ್ನು ನೀಡುವುದರ ಜೊತೆಗೆ, ನಮ್ಮ ಆತ್ಮೀಯರೊಂದಿಗೆ ಗಾಢವಾದ ಭಾವನಾತ್ಮಕ ಬಂಧವನ್ನು ನಿರ್ಮಿಸುತ್ತದೆ. ಭಾರತದಲ್ಲಿನ ಅತ್ಯಂತ ಹಳೆಯ ಮತ್ತು ಶ್ರೀಮಂತ ಭಾಷೆಗಳಲ್ಲೊಂದಾದ ಕನ್ನಡವು, ಸರಳವಾದ ಪದಗಳ ಮೂಲಕವೂ ಪ್ರೀತಿ, ಗೌರವ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ.
ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು ಅಥವಾ ನಿಮ್ಮ ಜೀವನದ ವಿಶೇಷ ವ್ಯಕ್ತಿಗೆ “ಶುಭೋದಯ” ಎಂದು ಹಾರೈಸುವುದರಿಂದ ಅವರ ದಿನವೇ ಉಜ್ವಲವಾಗುತ್ತದೆ. ಕನ್ನಡದ ಶುಭೋದಯ ಸಂದೇಶಗಳು ಸಾಮಾನ್ಯವಾಗಿ ಆರೋಗ್ಯ, ಸಂತೋಷ, ಯಶಸ್ಸು ಮತ್ತು ಶಾಂತಿಗೆ ಆಶೀರ್ವಾದಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಇವುಗಳನ್ನು ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಂಚಿಕೊಳ್ಳಲು ಅತ್ಯಂತ ಸೂಕ್ತವಾಗಿವೆ. ಈ ಸಂದೇಶಗಳು ಪ್ರೇರಣಾದಾಯಕ, ಭಕ್ತಿಪೂರ್ಣ, ಉಲ್ಲಾಸಭರಿತ ಅಥವಾ ಪ್ರೀತಿಯಿಂದ ಕೂಡಿದವಾಗಿರಬಹುದು.
ಈ ಪುಟದಲ್ಲಿ, ಪ್ರತಿಯೊಂದು ಸಂದರ್ಭಕ್ಕೂ ಹಾಗೂ ಭಾವನೆಗೂ ಹೊಂದುವಂತಹ ಸುಂದರವಾದ ಕನ್ನಡ ಶುಭೋದಯ ಶುಭಾಶಯಗಳ ಸಂಗ್ರಹವನ್ನು ನೀವು ಕಾಣಬಹುದು. ಸಕಾರಾತ್ಮಕ ಉಲ್ಲೇಖಗಳಿಂದ ಹಿಡಿದು ಹೃದಯಸ್ಪರ್ಶಿ ಸಂದೇಶಗಳವರೆಗೆ, ನಿಮ್ಮ ಭಾವನೆಗಳನ್ನು ನೈಸರ್ಗಿಕವಾಗಿ ಹಾಗೂ ಹೃದಯಪೂರ್ವಕವಾಗಿ ವ್ಯಕ್ತಪಡಿಸಲು ಇವು ಸಹಾಯ ಮಾಡುತ್ತವೆ. ಕನ್ನಡದಲ್ಲಿ ಶುಭೋದಯ ಹಾರೈಸುವ ಮೂಲಕ ಪ್ರತಿದಿನವೂ ಸಕಾರಾತ್ಮಕತೆಯನ್ನು ಹಂಚಿ, ನಿಮ್ಮ ಪ್ರಿಯಜನರ ಬೆಳಗ್ಗೆಯನ್ನು ಇನ್ನಷ್ಟು ಸಂತೋಷಕರವಾಗಿಸಿ.
ದಿನದ ಆರಂಭವನ್ನು ಉತ್ಸಾಹ, ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸದಿಂದ ಆರಂಭಿಸಲು ಸಹಾಯ ಮಾಡಲು ಈ ಸಂದೇಶಗಳನ್ನು ಉತ್ತಮ ರೀತಿಯಲ್ಲಿ ರಚಿಸಲಾಗಿದೆ. ಸುಂದರವಾದ ಕನ್ನಡ ಶುಭೋದಯ ಉಲ್ಲೇಖಗಳು(kannada good morning quotes ) ಮನಸ್ಸಿಗೆ ಶಾಂತಿ ನೀಡುತ್ತವೆ ಮತ್ತು ಹೊಸ ಆಶಾಭಾವನೆಗಳನ್ನು ಮೂಡಿಸುತ್ತವೆ. ಪ್ರೇರಣಾದಾಯಕ ಪದಗಳು ದಿನವಿಡೀ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಇವುಗಳನ್ನು ಸ್ನೇಹಿತರು, ಕುಟುಂಬದವರು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಪ್ರತಿದಿನ ಒಂದು ಉತ್ತಮ ಶುಭೋದಯ ಉಲ್ಲೇಖ ನಿಮ್ಮ ಜೀವನಕ್ಕೆ ಹೊಸ ಬೆಳಕು ನೀಡುತ್ತದೆ.
ಜೀವನವನ್ನು ಗೆಲ್ಲಬೇಕಿಲ್ಲ, ಅನುಭವಿಸಿದರೆ ಸಾಕು..ಶುಭೋದಯ!
ಪ್ರಯತ್ನ ಮಾಡಿ ಸೋಲು ಪರವಾಗಿಲ್ಲ ಪ್ರಯತ್ನ ಮಾಡದೆ ಸೋಲ್ತರೆ ಆ ವಿಧಿಯೂ ಸಹ ಸಹಕರಿಸುವುದಿಲ್ಲ ..ಶುಭದಿನ !
ದುಡಿದು ನೆಲೆ ಕಾಣು , ಬೆಳೆದು ಹೆಸರು ಕಾಣು ..ಶುಭೋದಯ!
ಬಂದದ್ದೆಲ್ಲ ಬರಲಿ ಭಗವಂತನ ದಯೆ ಇರಲಿ ..ಶುಭದಿನ !
ವಾದವಿರುವ ಮಾತಿಗಿಂತ ಸ್ವಾದವಿರುವ ಮೌನ ಉತ್ತಮ ..ಶುಭೋದಯ!
ಅವರಂತೆ ಇವರಂತೆ ಹಾಗೇನಿಲ್ಲ , ನೀನು ನಿನ್ನಂತೆ ಬದುಕು ಅದೇ ನಿನ್ನ ಗುರುತು ..ಶುಭೋದಯ!
ಎಲ್ಲ ಭರವಸೆಗಳು ಕೊನೆಗೊಂಡಾಗ ಅವನ ಪಾತ್ರ ಪ್ರಾರಂಭವಾಗುತ್ತದೆ ..ಶುಭದಿನ !
ಈ ಜೀವನವು ಸಣ್ಣ ಪ್ರಯಾಣ , ಆದಷ್ಟು ಆನಂದಿಸಿ ..ಶುಭೋದಯ!
ನಿಮ್ಮನ್ನು ಬೆಳೆಸಿದ ಕೈಗಳನ್ನು ಎಂದಿಗೂ ಮರೆಯಬೇಡಿ … ಶುಭೋದಯ!
ಕೆಟ್ಟ ನೆನಪುಗಳು ನಿರ್ಜೀವ ವಸ್ತುಗಳಿದ್ದಂತೆ , ಹೊತ್ತು ತಿರುಗಿದಷ್ಟೂ ಭಾರ. ಅವುಗಳನ್ನು ಸುಟ್ಟು ಬಿಡಬೇಕು ..ಶುಭದಿನ !
ಸಂತೋಷದ ರಹಸ್ಯವೆಂದರೆ ಕಡಿಮೆ ನಿರೀಕ್ಷೆಗಳನ್ನು ಹೊಂದುವುದು …ಶುಭೋದಯ!
ಕಡು ಕಷ್ಟದ ದಿನಗಳೇ ಮುಂದಿನ ಒಳ್ಳೆಯ ದಿನಗಳಿಗೆ ಬಲವಾದ ಮೆಟ್ಟಿಲುಗಳು ..ಶುಭದಿನ !
ಸೋತವನಿಗೆ ಅನುಭವವೇ ಬಹುಮಾನ …ಶುಭೋದಯ!
ದೌರ್ಬಲ್ಯ ದೇಹದಲ್ಲಿದ್ದರು ಪರವಾಗಿಲ್ಲ , ಆದ್ರೆ ಮನಸ್ಸಿನಲ್ಲಿರಬಾರದು
ಒಳ್ಳೆಯ ನಿರ್ಧಾರ ನಿನ್ನನ್ನು ಅರ್ಧ ಗೆಲ್ಲಿಸಿದರೆ, ಇನ್ನರ್ಧ ಪ್ರಯತ್ನ ಮತ್ತು ಪರಿಶ್ರಮ ಗೆಲ್ಲಿಸುತ್ತದೆ
ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇವೆರಡೂ ಒಂದಲ್ಲ ಒಂದು ದಿನ ಫಲ ಕೊಡುತ್ತವೆ ..ಶುಭೋದಯ!
ಸೂರ್ಯೋದಯದಂತೆ ನಿಮ್ಮ ಜೀವನವೂ ಪ್ರಕಾಶಮಾನವಾಗಲಿ. ಶುಭೋದಯ !
ಸಕಾರಾತ್ಮಕ ಚಿಂತನೆಗಳಿಂದ ದಿನವನ್ನು ಆರಂಭಿಸಿ, ಯಶಸ್ಸು ನಿಮ್ಮದಾಗುತ್ತದೆ. ಶುಭೋದಯ!
ಶಾಂತಿ, ಸಂತೋಷ ಮತ್ತು ಆರೋಗ್ಯದಿಂದ ನಿಮ್ಮ ದಿನ ತುಂಬಿರಲಿ. ಶುಭದಿನ !
ಸಣ್ಣ ಹೆಜ್ಜೆಗಳು ದೊಡ್ಡ ಸಾಧನೆಗೆ ದಾರಿ ಮಾಡುತ್ತವೆ. ಶುಭದಿನ !
ದಿನ ಬೆಳಗ್ಗೆ ನಮ್ಮ ಆತ್ಮೀಯರಿಗೆ ಅವರ ಜೀವನಕ್ಕೆ ಹೊಸ ಆಸೆ, ಹೊಸ ಅವಕಾಶ ಮತ್ತು ಹೊಸ ಶಕ್ತಿಯನ್ನು ತರಲು ಒಂದು ಸಣ್ಣ ಪ್ರಯತ್ನವನ್ನು ಇಂತಹ ಸಂದೇಶಗಳ ಮುಖಾಂತರ ವ್ಯಕ್ತಪಡಿಸಬಹುದು . ಸಕಾರಾತ್ಮಕ ಚಿಂತನೆಗಳೊಂದಿಗೆ ದಿನವನ್ನು ಆರಂಭಿಸಿದರೆ ಯಶಸ್ಸು ಸ್ವಯಂವಾಗಿ ಹತ್ತಿರವಾಗುತ್ತದೆ. ಪ್ರೇರಣಾತ್ಮಕ ಶುಭೋದಯ ಸಂದೇಶಗಳು ಮನಸ್ಸಿಗೆ ಶಾಂತಿ ನೀಡಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇವು ನಿಮ್ಮ ದಿನವನ್ನು ಉತ್ಸಾಹದಿಂದ ಮತ್ತು ಸಂತೋಷದಿಂದ ಸಾಗಲು ಸಹಾಯ ಮಾಡುತ್ತವೆ. ಇಂತಹ ಶುಭೋದಯ ಶುಭಾಶಯಗಳನ್ನು (good morning whatsapp status in kannada ) ಹಂಚಿಕೊಂಡು ನಿಮ್ಮವರ ದಿನವನ್ನೂ ಸ್ಪೂರ್ತಿದಾಯಕವಾಗಿಸಿ .
ನಿಮ್ಮ ಸರಳತೆಯೇ ನಿಮ್ಮನ್ನು ಶ್ರೀಮಂತರಾಗಿಸುತ್ತದೆ ..ಶುಭದಿನ !
ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ ಸೋತು ಗೆದ್ದವರೇ ಸಾಧಕರೆಲ್ಲ
ನಮ್ಮ ಆಲೋಚನೆಗಳು ನಮ್ಮ ಜೀವನವನ್ನೇ ರೂಪಿಸುತ್ತವೆ ..ಶುಭದಿನ !
ಮನುಷ್ಯನಿಗೆ ಗಾಳಿಯಂತೆ ಕೋಪವಿರಬೇಕು ಬೆಟ್ಟದಂತೆ ತಾಳ್ಮೆ ಇರಬೇಕು ..ಶುಭಮುಂಜಾನೆ
ಕೆಲಸ ಮಾಡುವುದರಿಂದ ಮುಗಿಯುತ್ತದೆ , ಮುಂದೂಡುವುದರಿಂದಲ್ಲ ..ಶುಭಮುಂಜಾನೆ
ಸೋಲುವುದು ತಪ್ಪಲ್ಲ ಪ್ರಯತ್ನಿಸದೆ ಸೋಲುವುದು ತಪ್ಪು ..ಶುಭಮುಂಜಾನೆ
ಜೀವನದಲ್ಲಿ ಅನುಭವಗಳು ಕಲಿಸುವ ಪಾಠಗಳನ್ನು ಯಾವ ವಿಶ್ವವಿದ್ಯಾಲಯವು ಕಲಿಸುವುದಿಲ್ಲ ..ಶುಭದಿನ !
ಪ್ರತಿದಿನ ನಿನಗೆ ಯಾರು ಬಂದು ಬೆನ್ನು ತಟ್ಟುವುದಿಲ್ಲ , ನಿನಗೆ ನೀನೆ ಗುರುವಾಗಬೇಕು
ಬಲವಿದೆ ಎಂದು ಅಹಂಕಾರ ಪಡ್ಬೇಡ ,ಏಕೆಂದ್ರೆ ಕಲ್ಲು ನೀರಲ್ಲಿ ಬಿದ್ದಾಗ ಅದರ ಭಾರದಿಂದಲೇ ಅದು ಮುಳುಗುತ್ತದೆ
ಸತ್ಯದ ದಾರಿ ಯಾವಾಗಲೂ ಕಷ್ಟಕರವಾಗಿರುತ್ತದೆ ,ಆದರೆ ಆ ದಾರಿ ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ
ನಿನ್ನಲ್ಲಿ ಒಳ್ಳೆಯ ಗುಣವಿದ್ದರೆ ಬೇರೆಯವರ ಶಾಪವೂ ಆಶೀರ್ವಾದವಾಗುತ್ತದೆ
ನಿನ್ನ ಸಾಧನೆಯಾಗಲಿ ನಿನ್ನ ಉತ್ತರ ..ಶುಭಮುಂಜಾನೆ
ನೀವು ಆರೋಗ್ಯ ಮತ್ತು ಸೌಂದರ್ಯವನ್ನು ಪಡೆಯಲು ಬಯಸಿದರೆ, ನೀವು ಬೇಗ ಏಳಬೇಕು. ಶುಭೋದಯ!
ನಿಮ್ಮ ದಿನವನ್ನು ನಗುವಿನೊಂದಿಗೆ ಪ್ರಾರಂಭಿಸಿ ಏಕೆಂದರೆ ನೀವು ಹೊಸ ದಿನವನ್ನು ನೋಡುವ ಅದೃಷ್ಟವಂತರು
ನಿರಾಶರಾಗಿ ಕೈ ಚಲ್ಲಬೇಡಿ , ಅನೇಕ ಬಾರಿ ಆರಂಭವೇ ಅತಿ ಕಠಿಣವಾಗಿರುತ್ತದೆ
ಹೊಸ ಸವಾಲುಗಳನ್ನು ಸ್ವೀಕರಿಸಿ ನಿಮ್ಮ ಮಿತಿಗಳನ್ನು ದಾಟುವುದೇ ಯಶಸ್ಸಿನ ಗುಟ್ಟು
ನೀವು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಸಕಾರಾತ್ಮಕ ಕ್ರಿಯೆಗಳನ್ನು ಸಂಯೋಜಿಸಿದರೆ, ನೀವು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುವಿರಿ. ಉತ್ತಮ ದಿನ. ಶುಭೋದಯ!
ಆಗುವುದೆಲ್ಲ ಒಳ್ಳೆಯದಕ್ಕೆ ..ಶುಭದಿನ !
ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಿರಬಾರದು , ಕಲ್ಲಿದ್ದಲ ಕಾವಾಗಬೇಕು
ಬದುಕೊಂದು ಸುಂದರ ಪಯಣ ಇಲ್ಲಿ ಕಲಿಯೋ ಪಾಠಗಳಿರುತ್ತವೆ, ಪರಿಹರಿಸೋ ಸಮಸ್ಯೆಗಳಿರುತ್ತವೆ .ಎಲ್ಲದಕ್ಕಿಂತ ಹೆಚ್ಚಾಗಿ ಸಂಭ್ರಮಿಸೋ ಅನುಭವಗಳಿರುತ್ತವೆ …ಶುಭದಿನ !
ಆಧ್ಯಾತ್ಮಿಕತೆಯ ಸ್ಪರ್ಶವಿರುವ ಶುಭೋದಯ ಸಂದೇಶಗಳು ಮನಸ್ಸಿಗೆ ಶಾಂತಿ, ಹೃದಯಕ್ಕೆ ನೆಮ್ಮದಿ ನೀಡುತ್ತವೆ. ದೇವರ ಆಶೀರ್ವಾದಗಳೊಂದಿಗೆ ದಿನವನ್ನು ಆರಂಭಿಸುವುದು ಸಕಾರಾತ್ಮಕ ಶಕ್ತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ರೀತಿಯ ಶುಭೋದಯ ಶುಭಾಶಯಗಳು ಜೀವನದಲ್ಲಿ ಧನಾತ್ಮಕ ಚಿಂತನೆ, ಸಹನೆ, ಶ್ರದ್ಧೆ ಮತ್ತು ಕೃತಜ್ಞತೆಯನ್ನು ಬೆಳೆಸಲು ಸಹಾಯಕವಾಗುತ್ತವೆ.
ನಿಮ್ಮ ದಿನ ದೇವರ ಕೃಪೆ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂಬ ಹಾರೈಕೆಗಳು ಇಲ್ಲಿವೆ.
ನಂಬಿದ ಕೈಗಳೆಲ್ಲ ಕೈ ಬಿಟ್ಟಾಗಲೇ ತಿಳಿಯುವುದು ಕಾಣದ ಕೈಯೊಂದು ನಮ್ಮ ಕೈ ಹಿಡಿದಿದೆ ಎಂದು
ನೀವು ನಂಬಿದಷ್ಟು ಭಗವಂತ ನೀನಂಗೆ ಅಚ್ಚರಿಗಳನ್ನು ನೀಡುತ್ತಾನೆ ..ಶುಭದಿನ !
ದೈವ ಸಹಾಯವಿಲ್ಲದೆ ಜಯವಿಲ್ಲ, ಸ್ವಪ್ರಯತ್ನವಿಲ್ಲದೆ ದೈವವು ಸಹಾಯ ಮಾಡಲ್ಲ
ಎಲ್ಲ ಯುದ್ಧಗಳಲ್ಲಿಯೂ ಗೆಲ್ಲುವ ಸೈನಿಕರೆಂದರೆ ಸಮಯ ಮತ್ತು ಸಹನೆ ..ಶುಭದಿನ !
ಜೀವನ ಬಹಳ ಕಷ್ಟನೇ ಆದ್ರೆ ಒಂದನ್ನ ಮರೀಬೇಡಿ ” ಹನುಮಂತ ಸದಾ ಸಹಾಯತೆ”..ಶುಭಮುಂಜಾನೆ
ನಿಮ್ಮ ಎಲ್ಲ ಪ್ರಾರ್ಥನೆಗಳಿಗೂ ಶಿವ ಅಸ್ತು ಎನ್ನಲಿ ..ನೀವು ಕಂಡ ಕನಸು ನನಸಾಗಲಿ.. ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿ..ಶುಭದಿನ!
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ..ಶುಭಮುಂಜಾನೆ
ಶಕ್ತಿ ಮೀರಿ ಪ್ರಯತ್ನಿಸು . ಸೋಲುತ್ತೇನೆ ಎಂಬ ಭಾವನೆ ಮೂಡಿದರೆ ದೇವರಿಗೆ ಸಮರ್ಪಿಸಿಬಿಡು
ಓಂ ನಮೋ ವೆಂಕಟೇಶಾಯ
ದಾರಿ ಕಾಣುತ್ತಿಲ್ಲವೆಂದು ದೇವರನ್ನು ದೂರಬೇಡ ಸ್ವಲ್ಪ ತಾಳ್ಮೆಯಿಂದ ಕಾದುನೋಡು , ದೇವರು ನಿನಗಾಗಿ ಹೊಸ ದಾರಿಯನ್ನೇ ಸೃಷ್ಟಿಸಬಹುದು.
ಉಪದೇಶಗಳಿಗಿಂತಲೂ ಆಪತ್ಕಾಲದಲ್ಲಿ ಮಾಡಿದ ಸಹಾಯವು ಶ್ರೇಷ್ಟವಾದದ್ದು
ಬದುಕಿದರೆ ದೇವರ ಇಚ್ಛೆಯಂತೆ ಬದುಕು ,ಯಾಕೆಂದರೆ ನಾವು ಬರೀ ಬಯಸಬಹುದು ಆದ್ರೆ ಅದೇ ನಿಜವಾಗುವುದಿಲ್ಲ ..ಶುಭಮುಂಜಾನೆ
ನೆನಪಿಟ್ಟುಕೋ .. ಜನರ ಆಟದಲ್ಲಿ ಮೋಸವಿರಬಹುದು ಆದ್ರೆ ದೇವರ ಆಟದಲ್ಲಿ ಮೋಸವಿರುವುದಿಲ್ಲ .. ಯಾರಿಗೆ ಏನು ಸಿಗಬೇಕೋ ಸಿಕ್ಕೇ ಸಿಗುತ್ತದೆ
ಕರ್ಮ ನಿರಂತರಂ , ಪಾಪಂ ಪುಣ್ಯಂ ದೈವ ನಿರ್ಣಯಂ …ಶುಭಮುಂಜಾನೆ
ಬಯಸಿದ್ದೆಲ್ಲ ಸಿಕ್ಕರೆ ಅದು ದೈವದ ಪ್ರೀತಿ.. ಎಷ್ಟೇ ಬಯಸಿದರೂ ಸಿಕ್ಕಿಲ್ಲ ಅಂದ್ರೆ ಅದು “ದೈವದ ರಕ್ಷಣೆ”
ನಿಮ್ಮ ಸ್ನೇಹಿತರ ಮುಖದಲ್ಲಿ ನಗು ಮೂಡಿಸಿ, ಅವರ ಮನಸ್ಸಿಗೆ ಸಕಾರಾತ್ಮಕತೆ ತುಂಬುವ **ಶುಭೋದಯ ಸಂದೇಶಗಳು ಸ್ನೇಹಿತರಿಗೆ** ದಿನವನ್ನು ಶುರು ಮಾಡುತ್ತವೆ. ಸರಳವಾದ ಬೆಳಗಿನ ಸಂದೇಶವೂ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿ, ಅವರು ನಿಮಗೆ ಎಷ್ಟು ವಿಶೇಷರು ಎಂಬುದನ್ನು ನೆನಪಿಸುತ್ತದೆ. ಬೆಳಿಗ್ಗೆ ಒಳ್ಳೆಯ ಮಾತುಗಳನ್ನು ಹಂಚಿಕೊಳ್ಳುವುದರಿಂದ ದಿನವಿಡೀ ಸಂತೋಷ ಮತ್ತು ಪ್ರೇರಣೆ ಹರಡುತ್ತದೆ. ನಿಮ್ಮ ಸ್ನೇಹಿತರಿಗೆ ಪ್ರೀತಿ, ನಗು ಮತ್ತು ಸಕಾರಾತ್ಮಕ ಭಾವನೆಗಳನ್ನು ಕಳುಹಿಸಿ, ಅವರ ಬೆಳಗ್ಗೆಯನ್ನು ನಿಜವಾಗಿಯೂ ಸುಂದರವಾಗಿಸಿ. 🌅✨
ಒಳ್ಳೆಯ ಮನಸ್ಸಿನಿಂದ ಮಾಡಿದ ಸಹಾಯ ,ಒಳ್ಳೆಯವರ ಜೊತೆ ಮಾಡಿದ ಸ್ನೇಹ ಇಂದಿಗೂ ವ್ಯರ್ಥವಾಗುವುದಿಲ್ಲ ..ಶುಭದಿನ !
ನನ್ನ ಅತಿ ಸಾಧಾರಣ ಬದುಕಿನಲ್ಲಿ ಅದ್ಬುತ ಪರಿಚಯ ನಿನ್ನದು ..ಶುಭದಿನ !
ದುಡ್ಡು ಎಲ್ಲರಿಗು ಸಿಗುತ್ತೆ ಆದ್ರೆ ಒಳ್ಳೆಯವರು ದುಡ್ಡಿಗೆ ಸಿಗೋದಿಲ್ಲ ..ಶುಭೋದಯ!
ಬೇರೆಯವರಲ್ಲಿ ಒಳ್ಳೆಯದನ್ನು ಹುಡುಕು, ನಿನ್ನಲ್ಲಿ ಕೆಟ್ಟದ್ದನ್ನು ಹುಡುಕು ..ಶುಭೋದಯ!
ಪ್ರಾಮಾಣಿಕ ಸ್ನೇಹಿತರೆ ನಮ್ಮ ಬದುಕಿನಲ್ಲಿ ಪಡೆಯುವ ಅತಿ ದೊಡ್ಡ ಉಡುಗೊರೆ ..ಶುಭದಿನ !
ನಗುತ್ತೀರಿ ಮನಸಿನೊಳಗೆ ಆಕಾಶದಷ್ಟು ನೋವುಗಳಿದ್ದರು …ಶುಭೋದಯ!
ಸಮಸ್ಯೆಗಳು ಸಾವಿರಾರು , ಪರಿಹಾರ ಒಂದೇ ಅದೇ.. ತಾಳ್ಮೆ ..ಶುಭದಿನ !
ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕಿತ್ತು ಹಾಕಬೇಕು ..ಶುಭದಿನ !
ಸ್ವಾರ್ಥಿ ಬೆಳೆಯಲ್ಲ, ಸಾಹಸಿ ಬಾಗಲ್ಲ , ಶ್ರಮಿಕ ಸೋಲಲ್ಲ ..ಶುಭದಿನ !
ಪ್ರತಿ ಬೆಳಗ್ಗೆ ಪ್ರೀತಿಯ ಹರಿವು ಇರಲಿ ,ಎಲ್ಲ ದಿಕ್ಕುಗಳಲ್ಲಿಯೂ ಸಂತೋಷದ ಬೆಳಕು ಇರಲಿ..ಶುಭೋದಯ!
ಜೀವನವನ್ನು ಪ್ರೀತಿಸಲಾರಂಬಿಸಿ , ಪ್ರತಿ ಕ್ಷಣವೂ ಜೀವಿಸಿ ಇಲ್ಲಿರಲು ನಮಗೆ ಇರುವುದೊಂದೇ ಅವಕಾಶ ..ಶುಭದಿನ !
ಒಡಲೊಳಗೆ ನೂರು ನೋವುಗಳಿದ್ದರೇನು…? ಮೊಗವು ಜಗವ ಬೆಳಗುವ ರವಿಯಂತೆ ಹೊಳೆಯುತ್ತಿರಬೇಕು
ಶ್ರಮವು ನಿನ್ನದೇ, ಸಮಯವೂ ನಿನ್ನದೇ , ಸಾಧಿಸುವ ಛಲವಿದ್ದರೆ ಪ್ರತಿಫಲ ಕೂಡ ನಿನ್ನದಾಗುವುದು ..ಶುಭದಿನ !
ನಿನ್ನಂತೆ ಮತ್ತೊಬ್ಬರಿಲ್ಲ ಅದೇ ನಿನ್ನ ಶಕ್ತಿ, ಮರೆಯಬೇಡ !…ಶುಭದಿನ !
ಎಲ್ಲರ ಮಾತನ್ನು ಕೇಳಿಸಿಕೊಳ್ಳಿ ಆದರೆ ಉತ್ತಮವಾದುದನ್ನು ಆರಿಸಿಕೊಳ್ಳಿ ..ಶುಭೋದಯ!