ಜೀವನದ ಪ್ರತಿ ಕ್ಷಣವನ್ನು ಅರ್ಥಪೂರ್ಣಗೊಳಿಸುವ, ಪ್ರೇರಣೆ ನೀಡುವ ಮತ್ತು ಮನಸ್ಸಿಗೆ ನೆಮ್ಮದಿ ತರುವ 150+ ಕನ್ನಡ ಜೀವನ ನುಡಿಮುತ್ತುಗಳು. WhatsApp, Instagram ಮತ್ತು Facebook ನಲ್ಲಿ Share ಮಾಡಿ.
ಜೀವನವು ಅಂದವಾದರೂ ಸ್ವಲ್ಪ ಗೋಜಿನ ಪ್ರಯಾಣ. ಖುಷಿಯ ಕ್ಷಣಗಳು, ಸವಾಲುಗಳು, ಬೆಳವಣಿಗೆ ಮತ್ತು ಕಲಿಕೆಯ ಪಾಠಗಳಿಂದ ತುಂಬಿದೆ. ಇದು ಯಾವಾಗಲೂ ಬದಲಾಗುತ್ತಾ ಇರುತ್ತದೆ — ನಮಗೆ ಸಹನೆ, ಧೈರ್ಯ ಮತ್ತು ಕೃತಜ್ಞತೆ ಕಲಿಸುತ್ತಾ. ಪ್ರತಿಯೊಂದು ಅನುಭವ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ಈ ಜಗತ್ತಿನ ಅರ್ಥವನ್ನು ಆಳವಾಗಿ ಅರಿಯಲು ಸಹಾಯ ಮಾಡುತ್ತದೆ.
ಕನಸುಗಳನ್ನು ಹಿಂಬಾಲಿಸುವುದಕ್ಕೂ, ಈ ಕ್ಷಣವನ್ನು ಮೆಚ್ಚಿಕೊಳ್ಳುವುದಕ್ಕೂ ನಡುವಿನ ಸಣ್ಣ ಸಮತೋಲನವೇ ಜೀವನದ ಸೌಂದರ್ಯ. ಜೀವನದ ನಿಜವಾದ ಅರ್ಥ ಸಂಬಂಧಗಳಲ್ಲಿ, ಪ್ರೀತಿಯಲ್ಲಿ, ದಯೆಯಲ್ಲಿ ಮತ್ತು ಒಬ್ಬರಿಂದ ಒಬ್ಬರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯದಲ್ಲಿದೆ.
ಸಹಾನುಭೂತಿ ಮತ್ತು ಧೈರ್ಯದಿಂದ ಬದುಕಿದಾಗ ನಾವು ಅಡೆತಡೆಗಳನ್ನು ದಾಟಬಹುದು ಮತ್ತು ನಮ್ಮ ಮನಸ್ಸು, ಆತ್ಮವನ್ನು ಬೆಳೆಸಬಹುದು. ಕೊನೆಗೆ, ಜೀವನವು ಒಂದು ಅಮೂಲ್ಯ ಉಡುಗೊರೆ — ಅದು ನಮಗೆ ನಿರಂತರವಾಗಿ ಬೆಳೆಯಲು, ಸರಳದಲ್ಲೂ ಸೌಂದರ್ಯ ಕಂಡುಕೊಳ್ಳಲು ಮತ್ತು ಈ ಜಗತ್ತಿಗೆ ಒಳ್ಳೆಯದನ್ನು ನೀಡಲು ಆಹ್ವಾನಿಸುತ್ತದೆ.
ಇಲ್ಲಿ ನಿಮಗಾಗಿ ಆಯ್ದುಕೊಂಡಿರುವ ಪ್ರತಿಯೊಂದು ನುಡಿಮುತ್ತು ನಿಮ್ಮ ಜೀವನದ ಹಾದಿಯಲ್ಲಿ ಪ್ರೇರಣೆ, ಉತ್ಸಾಹ ಮತ್ತು ಬೆಳಕು ನೀಡುತ್ತದೆ. ಕನ್ನಡ ಸಾಹಿತ್ಯ ಮತ್ತು ಸಂಪ್ರದಾಯದಿಂದ ಬಂದ ಈ ನುಡಿಗಳು ನಿಮ್ಮ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ಹೊಸ ದೃಷ್ಟಿಕೋನ ಕೊಡುತ್ತವೆ. ಇವು ನಿಮ್ಮ ಜೀವನಕ್ಕೆ ಅರ್ಥ, ಆಶೆ ಮತ್ತು ಪ್ರೇರಣೆ ತುಂಬುವಂತಿವೆ.












"ನೀವು ಪ್ರೀತಿಸುವವರಿಗೆ ಹಾರಲು ರೆಕ್ಕೆಗಳನ್ನು ನೀಡಿ, ಮರಳಿ ಬರಲು ಬೇರುಗಳನ್ನು ಮತ್ತು ಉಳಿಯಲು ಕಾರಣಗಳನ್ನು ನೀಡಿ"

"ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ."

"ಯಾವುದನ್ನು ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ."

"ಜ್ಞಾನ ಮತ್ತು ವಿಜ್ಞಾನದ ಆಧಾರದ ಮೇಲೆ ಮಾತ್ರ ಸಂತೋಷ ಮತ್ತು ಸಂತೋಷದ ಜೀವನ ಸಾಧ್ಯ."

"ನಾವು ನಮ್ಮ ಆಲೋಚನೆಗಳಿಂದ ರೂಪುಗೊಂಡಿದ್ದೇವೆ; ನಾವು ಏನನ್ನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಮನಸ್ಸು ಶುದ್ಧವಾದಾಗ, ಸಂತೋಷವು ಎಂದಿಗೂ ಬಿಡದ ನೆರಳಿನಂತೆ ಹಿಂಬಾಲಿಸುತ್ತದೆ"

"ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ, ಆಳಿನಾಳು ಕೀಳಾಳು ಬಹರೆ ಹೋಗದಿರು, ಹೋಗದಿರು, ಕೂಡಲಸಂಗಮದೇವಾ"

"ಸಂತೋಷವಾಗಿರುವುದು ತುಂಬಾ ಸರಳ. ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ."

"ಸವಾಲಿನ ಸಮಯಗಳಲ್ಲೆ ಮಾನವನ ಪ್ರತಿಭೆ ಮತ್ತು ಜಾಣ್ಮೆ ತೆರೆದುಕೊಳ್ಳುವುದು"

"ಶಿಕ್ಷಣ ಎನ್ನುವುದು ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರ."

ರೂಪ ಚಿಪ್ಪಿನಂತೆ ಇದ್ರೂ ಪರವಾಗಿಲ್ಲ 🫧, ಆದ್ರೆ ವ್ಯಕ್ತಿತ್ವ ಚಿಪ್ಪಿನೊಳಗಿನ ಮುತ್ತಿನಂತೆ ಇರಬೇಕು.
ಜೀವ ಹೋಗೋ ಸ್ಥಿತಿ ಬಂದ್ರುನು 😔 ತಾಳ್ಮೆ ಮಾತ್ರ ಕಳ್ಕೋಬೇಡ 💪
ಬೆಲೆ ಗೊತ್ತಿಲ್ಲದವರ ಬಳಿ ವಜ್ರ 💎 ಕೊಟ್ರು ಕೂಡ ಅದು ಕೇವಲ ಕಲ್ಲು 🪨 ಮಾತ್ರ
ಒಳ್ಳೆಯ ದಾರಿ ಎಂದಿಗೂ ಕಠಿಣ 🔥 ಆದ್ರೆ ಒಂದು ದಿನ ನಿನ್ನ ಒಳ್ಳೆಯತನವೇ ನಿನ್ನನ್ನು ಕಾಪಾಡುತ್ತದೆ 🙌
ಜೀವನದಲ್ಲಿ ಸಾಧನೆಗಿಂತ 💫 ನೆಮ್ಮದಿಯಾಗಿರೋದು 💖 ಮುಖ್ಯ
ಬೇರೆವರಿಗೆ ನಾವು ಹೇಗೆ ಕಾಣಿಸಿದ್ರು ಪರವಾಗಿಲ್ಲ 😊 ಮನಸಿಂದ ಒಳ್ಳೆವರಾಗಿರೋಣ ❤️
ನಾವು ಎಲ್ಲರಿಗೂ ಅರ್ಥ ಆಗ್ಬೇಕು ಅಂತ ಏನಿಲ್ಲ 🙃 ತಕ್ಕಡಿ ⚖️ ಕೇವಲ ತೂಕನಷ್ಟೇ ತೋರಿಸುತ್ತೆ — ಗುಣಮಟ್ಟವನ್ನಲ್ಲ 💎
ನಿಮ್ಮ ಯೋಚಿಸೋ ದಾರಿಯನ್ನು 🧠 ಬದ್ಲಾಯ್ಸಿಕೊಂಡ್ರೆ ನಿಮ್ಮ ಜೀವನವನ್ನು 🌈 ಸಹ ಬದಲಾಯಿಸಿಕೊಳ್ಳಬಹುದು 🔄
ಏನೇ ಆದರೂ 🤞 ಎಲ್ಲ ನಮ್ಮ ಒಳ್ಳೇದಕ್ಕೆ ಅನ್ಕೊಂಡು 🌟 ತಾಳ್ಮೆಯಿಂದ ಕಾಯ್ಬೇಕು 🕊️
ಅತಿಯಾದ ಅಕ್ಕರೆ 🤍, ಪ್ರೀತಿನ ❤️ ಯಾರಿಗೂ ಕೊಡ್ಬೇಡಿ ❌ ಬಿಟ್ಟಿಯಾಗಿ ಸಿಗೋದಕ್ಕೆ ಯಾರು ಬೆಲೆ ಕೊಡೋದಿಲ್ಲ 💔
ಜೀವನದಲ್ಲಿನ ಪ್ರತಿ ನೋವು 😔 ಶಾಪವಲ್ಲ, ಪ್ರತಿ ಸುಖವೂ 😊 ಶಾಶ್ವತವಲ್ಲ ⏳
ಜೀವನ ಸಾಕಾಗಿದೆ ಅನ್ನಿಸಿದಾಗ 😩 please ಒಂದ್ ಒಳ್ಳೆ trip ✈️🌴 ಹೋಗ್ಬನ್ನಿ
ಕೋಪವೆಂಬುದು 🔥 ಬೇರೆಯವರ ಮೇಲೆ ನಾವು ಎಸೆಯಲು ಹಿಡಿದ ಕೆಂಡಂತೆ 🤲🔥
ಪ್ರತಿ ಅಂತ್ಯದಲ್ಲೂ 🔚 ಒಂದು ಶುಭ ಆರಂಭದ ✨ ಸಂಕೇತವಿರುತ್ತದೆ 🌅
ಮೊದ್ಲು ನಿಮಗೋಸ್ಕರ ಬದುಕೋದಕ್ಕೆ ❤️🩹 ಸ್ಟಾರ್ಟ್ ಮಾಡಿ ▶️ ಆಮೇಲೆ ಎಲ್ಲ ಸರಿಹೋಗುತ್ತೆ 👍
ನೆನ್ನೆ ಇದ್ದ ಖುಷಿ 😄 ಇವತ್ತಿಲ್ಲ ಅಂದ್ಮೇಲೆ, ಇವತ್ತಿನ ದುಃಖ 😢 ಸಹ ನಾಳೆ ಇರೋಲ್ಲ 🌄 — ಯಾವುದು ಶಾಶ್ವತವಲ್ಲ ⏳
ಜೀವನದಲ್ಲಿ ಪ್ರೀತಿಯಾಗಲಿ ❤️, ದುಡ್ಡಾಗಲಿ 💰 ಯಾರು ನಿಮಗೆ ವಾಪಸ್ ಕೊಡ್ತಾರೋ 🤝 ಅವರಿಗಷ್ಟೇ ಕೊಡು ✅
ನಮಗಾಗಿ ಯಾರೋ ಇದ್ದಾರೆ ಅನ್ನೋ ಭ್ರಮೆಗಿಂತ 😌 ಯಾರು ಇಲ್ಲ ಅನ್ನೋದೇ ವಾಸ್ತವ 🥀
ಜೀವನದಲ್ಲಿ ಬಂದು 😊 ಹೋದವರಿಗಿಂತ 💔 ಹೋಗಲು ಬಂದವರೇ ಹೆಚ್ಚು 😔
ದಿನಕಳೆದಂತೆ ನನಗೆ ಗೊತ್ತಾಗಿದ್ದು 🤍 — ನಾವು ಎಲ್ಲರ ಜೀವನದಲ್ಲಿ ಒಂದು ಆಯ್ಕೆ ಅಷ್ಟೇ ✨
ನನಸಾಗದ ಕನಸೊಂದು 💭 ನೆನಪಾಗಿ ಕಾಡುತಿದೆ .. ನಕ್ಕು ಮರೆಯಲೇ? 😊 ಅತ್ತು ನೆನೆಯಲೇ.. 😢
ಜನರಿಗೆ ನಾವು ಬದಲಾದದ್ದು ಮಾತ್ರ ಕಾಣ್ಸುತ್ತೆ 👀 ಆದ್ರೆ ಯಾವ್ ಮಾತು ನಮ್ಮನ್ನು ಬದಲಾಯಿಸಿತು ಅನ್ನೋದು ಅವರಿಗೆ ಅರ್ಥ ಆಗಲ್ಲ 💔
ಪೆಟ್ಟಾಗಿರುವ ಕಡೆ 🤕 ಪುನ್ಹ ಏಟು ಬೀಳೋದು ⚡ ಒಂಟಿ ಮರಕ್ಕೆ 🌳 ಸಿಡಿಲು ಬಡಿಯುವುದು 🌩️ ಪ್ರಕೃತಿಯ ನಿಯಮ
ಒಂದಿನ ನಮಗೆ ನಾವೇ ಸಾಕಾಗಿ ಹೋಗೋ ಈ ಜೀವನದಲ್ಲಿ 🤍 ಬೇರೆಯವರಿಗೆ ಕೊನೆತನಕ ಬೇಕಾಗಿರ್ತಿವಿ ಅನ್ನೋದು ಬರೀ ಕಲ್ಪನೆಯಷ್ಟೇ 🌙
ಉತ್ತರವೇ ಸಿಗದ ಪ್ರಶ್ನೆಗಳು ❓ ನನಗಂತಲೇ ಸಿಕ್ಕ ಜೀವನದ ಪಾಠಗಳು 📖 — ಅದನ್ನು ಸ್ವೀಕರಿಸಿ 🤍 ಪ್ರೀತಿಸಿ ❤️ ಬದುಕಿ 🌱
ಬದಲಾಗಬೇಕಿದೆ 🔄 ನಮ್ಮವರು ಬದಲಾದಾಗ 😔
ನಂಬಿದ ಕೈಯೇ ನಿಧಾನವಾಗಿ ಬಿಡುವಾಗ 🤝💔 ಮನಸ್ಸು ಮೌನವಾಗಿ ಕಲಿಯುತ್ತದೆ — ಯಾರನ್ನು, ಎಷ್ಟು ನಂಬಬೇಕು ಎಂದು
ಸಮಯ ಕಳೆದಂತೆ ಜನ ಬದಲಾಗ್ತಾರೆ 🌀 ಆದ್ರೆ ನಾವು ಹೇಗಿದ್ರೋ ಹಾಗೆ ಇದ್ರೆ ಅದೇ ನಮ್ಮ ದೊಡ್ಡ ಶಕ್ತಿ 💪
ಸೋಲು ಅಂತ್ಯವಲ್ಲ 🔥 ಅದು ಹೊಸ ದಾರಿಯ ಆರಂಭ ✨ — ಎದ್ದೇಳು, ಮತ್ತೆ ಪ್ರಯತ್ನಿಸು 🚀
ಮಾತು ಬೆಳ್ಳಿ, ಮೌನ ಬಂಗಾರ 🪙 — ಎಲ್ಲ ಕಡೆ ಮಾತಾಡಿ ನಿಮ್ಮ ಬೆಲೆ ಕಡಿಮೆ ಮಾಡ್ಕೊಳ್ಬೇಡಿ
ಕನಸು ಕಾಣೋದನ್ನ ನಿಲ್ಲಿಸ್ಬೇಡ 💭✨ ಯಾಕಂದ್ರೆ ಕನಸು ಕಾಣ್ಳಿಕ್ಕೆ ನಿಮ್ಮ ಹತ್ರ ಧೈರ್ಯ ಇದೆ ಅಂದ್ರೆ — ಅದನ್ನು ಸಾಧಿಸ್ಳಿಕ್ಕೆ ಶಕ್ತಿನೂ ಇದೆ 💪
ಪ್ರತಿಯೊಬ್ಬರಿಗೂ ಒಂದು ಮುಖ 😊 ಮತ್ತು ಒಂದು ಮಾತು 🗣️ — ಅವರ ನಿಜ ಗೊತ್ತಾಗ್ಬೇಕೆಂದ್ರೆ ಸಮಯ ಬೇಕು ⏳
ಬದುಕಿನಲ್ಲಿ ನಿರೀಕ್ಷೆಗಳು 🌹 ಹೊಂದಿದಷ್ಟು ನೋವು ಹೆಚ್ಚು 💔 — ಯಾರ ಮೇಲೂ ಅತಿ ನಿರೀಕ್ಷೆ ಬೇಡ
ನಿನ್ನ ದಾರಿ ನೀನೇ ಆರಿಸ್ಕೋ 🛤️ ಯಾಕಂದ್ರೆ ಅಂತ್ಯದಲ್ಲಿ ನೀನೇ ನಡಿಬೇಕು 👣
ನಿನ್ನ ಮೌನ ಶಕ್ತಿಯಾಗಲಿ 🤫💪 ಶಬ್ದ ಮಾಡದೇ ಎತ್ತರ ಏರಿದ ಸೂರ್ಯನಂತೆ 🌅
ಒಂಟಿಯಾಗಿರೋದು ಕಷ್ಟ 😔 ಆದ್ರೆ ತಪ್ಪು ಜನರ ಜೊತೆಗಿರೋದು ಇನ್ನೂ ಕಷ್ಟ 💔
ಜೀವನ ಒಂದು ಪರೀಕ್ಷೆ 📝 — ಪ್ರಶ್ನೆಗಳು ಯಾವಾಗಲೂ ಕಷ್ಟ, ಆದ್ರೆ ಉತ್ತರ ಯಾವಾಗಲೂ ನಿನ್ನ ಒಳಗೇ ಇದೆ 🔍
ಜಾತಕದಲ್ಲಿ 🪐 ಶನಿ ಇದ್ರೂ ಪರವಾಗಿಲ್ಲ.. ಅಕ್ಕ ಪಕ್ಕ 🐍 ಶಕುನಿಗಳು 😈 ಇರಬಾರದು!
ಸಂಪಾದನೆಯನ್ನು ಪ್ರೀತಿಸುವವರ ಮದ್ಯೆ ಪ್ರೀತಿಯನ್ನು ಹೇಗೆ ಸಂಪಾದಿಸಲಿ.
ಜೀವನದಲ್ಲಿ 💭 ಸೋಲು 😞 ಕಲಿಸುವಂತ ಪಾಠವನ್ನು ಯಾರು ಕಲಿಸೋಕಾಗಲ್ಲ ❌
ನಮ್ಮ ಮೇಲಿನ ಕೋಪದಲ್ಲಿ 😠 ಬಿಟ್ಟುಹೋದವ್ರು ಪುನ್ಹ ಬರಬಹುದು 👍 ಆದ್ರೆ ನಗ್ತಾ 😊 ನಮ್ಮಿಂದ ದೂರ ಆದವ್ರು 💔 ಯಾವತ್ತೂ ವಾಪಸ್ ಬರೋದಿಲ್ಲ ❌
ಅವರಿಗೆ 👑 ಅಪ್ಪನ ಆಸ್ತಿ ಇತ್ತು.. ನನಗೆ 🙋 ಅಪ್ಪನಷ್ಟೇ ❤️ ಜವಾಬ್ದಾರಿ ಇತ್ತು... ಕೀಳಾಗಿ ಕಾಣೋರಿಗೆ ಇದೆಲ್ಲ ಏನ್ ಗೊತ್ತಿತ್ತು 🤐
ಎದೆಗೆ ಬಿದ್ದ 🔥 ಬೆಂಕಿಯ ಬೆಳಕಿನಲ್ಲೇ ✨ ಬದುಕಿನರ್ಥವ 🧠 ಹುಡುಕಬೇಕು 🔍
"ಬದುಕು" 🌱 ನಾವು ಅಂದುಕೊಂಡಂತೆ 🤔 ಬದುಕೋಲ್ಲ ❌ — ಬದುಕು ಬಂದಂತೆ 🌊 ನಾವು ಬದುಕಬೇಕು 💪
ಆಸೆ ಪಟ್ಟು 💖 ನಿರಾಸೆ 😔 ಆಗೋದಕ್ಕಿಂತ ➖ ಆಸೇನೆ ಪಡದೆ 🚫 ಮೌನವಾಗಿರೋದೇ 🤐 ಒಳ್ಳೆಯದು ಅಲ್ವ...!
ಹಣೆಬರಹದಲ್ಲಿ ✍️ ಅದೃಷ್ಟವಿಲ್ಲ ❌ ಅಂದ್ಮೇಲೆ ಯಾವ ಕನಸು 🌠 ಕಂಡು ಏನು ಪ್ರಯೋಜನ ❓
ಲೈಫಲ್ಲಿ ⏳ ನಮ್ಮವರು 👨👩👧 ಅಂತ ಅಂದ್ಕೊಂಡವರೆಲ್ಲ 🤝 ನಮ್ಮ ಜೊತೆ ಯಾವಾಗ್ಲೂ ⌛ ಒಂದೇ ತರಾ 😌 ಇರ್ತಾರೆ ಅನ್ನೋದು 🤷 ನಮ್ಮ ತಪ್ಪು ಕಲ್ಪನೆ ❌
ಜೀವನ ಎಂದರೆ ಅಭಿನಯಿಸುವುದಲ್ಲ.. ಅನುಭವಿಸುವುದು.
ಜೀವನ ಅರ್ಥವಾದಂತೆಲ್ಲ ಮೌನ ಇಷ್ಟವಾಗುತ್ತದೆ.
ಸಮಯ ಅನ್ನೋದು ಮತ್ತೆ ಸಿಗಲ್ಲ — ಇದ್ದಾಗ "just enjoy it"!
ಏಕಾಂತವೇ ನೆಮ್ಮದಿ, ನೆಮ್ಮದಿಯೇ ಜೀವನ…
ಒಂದು ಮನೆ ಬೆಳೀಬೇಕು ಅಂದ್ರೆ ಆ ಮನೆಯೊಳ್ಲೊಬ್ಬ ಮನೆಬಿಟ್ಟು ಬದುಕ್ಬೇಕು.
ಸೋತಮೇಲೂ ಗೆಲ್ಲಬೇಕು ಅನ್ನೋ ಹಠ ಇದ್ದವನಿಗೆ ಜೀವನದಲ್ಲಿ ಯಾವ್ದು ಅಸಾಧ್ಯವಲ್ಲ.
ಕೆಲವರನ್ನು ಬಿಟ್ಟಾಗಲೇ ಜೀವನ ತುಂಬಾ ಚೆನ್ನಾಗಿರುತ್ತೆ.
ಕೆಲವೊಂದು ಸಾರಿ ಕಂಡರೂ ಕಾಣದಂತೆ ಇರಬೇಕು.
ನಿನ್ನ ಬದುಕು ನಿನ್ನದೇ ಜವಾಬ್ದಾರಿ.
ಯಾವ್ದು ಶಾಶ್ವತ? ಜೀವನವೇ ತಾತ್ಕಾಲಿಕ ಆಗಿರುವಾಗ…